ಆ್ಯಪ್ನಗರ

ಬಿರುಕು ಬಿಟ್ಟ ಬಿಆರ್‌ಟಿಎಸ್‌ ಪ್ಲೈವರ್‌ ಓವರ್‌

ಧಾರವಾಡ :ನವಲೂರ ಬಳಿಯ ಬಿಆರ್‌ಟಿಎಸ್‌ ಪ್ಲೈ ಓವರ್‌ ಕಳಪೆ ಕಾಮಗಾರಿಯಿಂದ ಅಧಿಕೃತ ಉದ್ಘಾಟನೆ ಮೊದಲೇ ಬಿರುಕು ಬಿಟ್ಟಿದ್ದು ತೆಪೆ ಹಚ್ಚುವ ಕಾರ್ಯ ಭಾನುವಾರ ನಡೆಯಿತು.

Vijaya Karnataka 15 Jul 2019, 5:00 am
ಧಾರವಾಡ :ನವಲೂರ ಬಳಿಯ ಬಿಆರ್‌ಟಿಎಸ್‌ ಪ್ಲೈ ಓವರ್‌ ಕಳಪೆ ಕಾಮಗಾರಿಯಿಂದ ಅಧಿಕೃತ ಉದ್ಘಾಟನೆ ಮೊದಲೇ ಬಿರುಕು ಬಿಟ್ಟಿದ್ದು ತೆಪೆ ಹಚ್ಚುವ ಕಾರ್ಯ ಭಾನುವಾರ ನಡೆಯಿತು.
Vijaya Karnataka Web DRW-14SM-2H
ಧಾರಾವಾಡ ನವನೂರ ಬಳಿಯ ಬಿಆರ್‌ಟಿಎಸ್‌ ಪ್ಲೈ ಓವರ್‌ ಬಿರುಕು ಬಿಟ್ಟಿದನ್ನು ದುರಸ್ತಿ ಮಾಡುತ್ತಿರುವ ಕೆಲಸಗಾರರು.


ಕಳೆದ ಜು.7 ರಂದು ಪ್ಲೈ ಓವರ್‌ ರಸ್ತೆಯಲ್ಲಿ ಸಂಚಾರ ನಿಷೇಧಿಸಿ ವಾಹನಗಳಿಗೆ ಬೇರೆ ಮಾರ್ಗ ಸೂಚಿಸಲಾಗಿತ್ತು, ಆಗ ವಾಹನ ಸವಾರರು ಸೇರಿದಂತೆ ಸ್ಥಳೀಯರು ಅಧಿಕಾರಿಗಳನ್ನು ಕೇಳಿದಾಗ ಅವರು, ಬಿಆರ್‌ಟಿಎಸ್‌ ಬ್ರಿಜ್‌ ಮೇಲೆ ರೆಗ್ಯುಲರ್‌ ಮೆಂಟೆನಸ್ಸ್‌ ನಡೆಸಲಾಗುತ್ತಿದೆ ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದರು.

ಭಾನುವಾರ ಕೂಡಾ ಪ್ಲೈ ಓವರ್‌ ಮೇಲೆ ವಾಹನ ಸಂಚಾರ ಸ್ಥಗೀತಗೊಳಿಸಿ ಪ್ಲೈ ಓವರ್‌ ಕಾಂಕ್ರಿಟ್‌ ರಸ್ತೆಗೆ ಬಿರುಕು ಬಂದಲ್ಲಿ ಸಿಮೆಂಟ್‌ ಹಾಗೂ ಕಡಿ ಹಾಕುವ ಮೂಲಕ ತೆಪೆ ಹಚ್ಚುವ ಕಾರ್ಯವನ್ನು ಕೆಲಸಗಾರರು ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.

ಅಧಿಕೃತವಾಗಿ ಉದ್ಘಾಟನೆ ಆಗದ ಪ್ಲೈ ಓವರ್‌ ರಸ್ತೆಯಲ್ಲಿ ಪದೆ ಪದೆ ವಾಹನ ಸಂಚಾರ ಸ್ಥಗಿತ ಮಾಡಿ ಮೆಂಟೆನಸ್ಸ್‌ ಕಾರ್ಯ ಮಾಡುತ್ತಿರುವುದು ಸಾರ್ವಜನಿಕ ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಕಾರಣ ಆಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮೂಲಕ ಶಾಶ್ವತ ಪರಿಹಾರ ನಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜು.15 ರಂದು ರಸ್ತೆ ಬಂದ್‌
ನವಲೂರ ಬಳಿಯ ಬಿಆರ್‌ಟಿಎಸ್‌ ಪ್ಲೈ ಓವರ್‌ನಲ್ಲಿ ದುರಸ್ತಿ ಕಾರ್ಯ ಮಾಡಿದ ಹಿನ್ನಲೆ. ಜು.15 ರಂದು ಪ್ಲೈ ಓವರ್‌ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಹಕರಿಸಬೇಕು ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ