ಆ್ಯಪ್ನಗರ

ಗ್ರಾಹಕರ ಅಚ್ಚುಮೆಚ್ಚಿನ ಅಶೋಕಾ ರೆಸ್ಟೊರೆಂಟ್‌

ಧಾರವಾಡ : ವಾರ್‌ ಥೀಮ್‌ ಪರಿಕಲ್ಪನೆಯೊಂದಿಗೆ ಶ್ರೀ ಸಾಮಾನ್ಯರ ಕೈಗೆಟಕುವ ದರದಲ್ಲಿ ಚೈನಿಸ್‌, ತಂದೂರಿ, ಕಾಂಟಿನೆಂಟಲ್‌, ಇಟಾಲಿಯನ್‌, ಮಾಕ್ಸೆಲ್‌ ಆಹಾರ ಸಿದ್ಧಪಡಿಸುತ್ತಿರುವ ಅಶೋಕಾ ರೆಸ್ಟೊರೆಂಟ್‌ ವಿವಿಧ ರಿಯಾಯತಿ ಘೋಷಿಸುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಊಟದ ಮನೆಯಾಗಿ ಗಮನ ಸೆಳೆದಿದೆ.

Vijaya Karnataka 25 Aug 2019, 5:00 am
ಧಾರವಾಡ : ವಾರ್‌ ಥೀಮ್‌ ಪರಿಕಲ್ಪನೆಯೊಂದಿಗೆ ಶ್ರೀ ಸಾಮಾನ್ಯರ ಕೈಗೆಟಕುವ ದರದಲ್ಲಿ ಚೈನಿಸ್‌, ತಂದೂರಿ, ಕಾಂಟಿನೆಂಟಲ್‌, ಇಟಾಲಿಯನ್‌, ಮಾಕ್ಸೆಲ್‌ ಆಹಾರ ಸಿದ್ಧಪಡಿಸುತ್ತಿರುವ ಅಶೋಕಾ ರೆಸ್ಟೊರೆಂಟ್‌ ವಿವಿಧ ರಿಯಾಯತಿ ಘೋಷಿಸುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಊಟದ ಮನೆಯಾಗಿ ಗಮನ ಸೆಳೆದಿದೆ.
Vijaya Karnataka Web customers favorite ashoka restaurant
ಗ್ರಾಹಕರ ಅಚ್ಚುಮೆಚ್ಚಿನ ಅಶೋಕಾ ರೆಸ್ಟೊರೆಂಟ್‌


ಹಳಿಯಾಳ ರಸ್ತೆಯ ಕೆಸಿ ಪಾರ್ಕ್‌ ಬಳಿಯ ಸಿಂಧೂರ ಹಾಲ್‌ ಪಕ್ಕದಲ್ಲಿರುವ ಅಶೋಕಾ ರೆಸ್ಟೊರೆಂಟ್‌ ಯುದ್ಧದ ಮಾದರಿ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡಿದೆ. ಅಲ್ಲಿಗೆ ಬರುವ ಮಕ್ಕಳಿಗೆ ಆಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ರೆಸ್ಟೊರೆಂಟ್‌ನಲ್ಲಿ ಬ್ಯಾಂಕೆಟ್‌ ಹಾಲ್‌ ಕೂಡ ಇದ್ದು ಇದು ಜನ್ಮದಿನ, ಮದುವೆ ವಾರ್ಷಿಕೋತ್ಸವದಂತಹ ಪಾರ್ಟಿಗೆ ಉಚಿತ. ಲಾರೆಲ್‌ ಸಲೂನ್‌ ಕೂಡ ಇಲ್ಲಿದೆ. ಇಲ್ಲಿಗೆ ಬರುವ ಪೊಲೀಸ್‌, ಡಾಕ್ಟರ್ಸ್‌, ಎಂಜನಿಯರ್ಸ್‌, ಬ್ಯಾಂಕರ್ಸ್‌ ಹಾಗೂ ಕಾಯಂ ಗ್ರಾಹಕರಿಗೆ ಶೇ. 10ರ ಡಿಸ್ಕೌಂಟ್‌ ಕಾರ್ಡ್‌ ಕೊಡಲಾಗುತ್ತಿದೆ. ಲಕ್ನವಿ ದಮ್‌ ಬಿರಿಯಾನಿ, ಚಿಕನ್‌ ವಿಂಗ್ಸ್‌, ಫಿಜಾ, ಬರ್ಗರ್‌, ಮಾಕ್ಟೆಲ್ಸ್‌ಗಳು ಇಲ್ಲಿನ ವಿಶೇಷ ಆಹಾರ ಪದಾರ್ಥಗಳು ಎನ್ನುತ್ತಾರೆ ಹೊಟೇಲ್‌ ಮಾಲೀಕ ಅವಿನಾಶ ಕುಲಕರ್ಣಿ.

ಮತ್ತೊಂದೆಡೆ ಶುದ್ಧ ಶಾಖಾಹಾರಿ

ಅದೇ ರೀತಿ ರೀಗಲ್‌ ಸರ್ಕಲ್‌ನಲ್ಲಿನ ದೊಡ್ಡಮನಿ ಕಾಂಪ್ಲೆಕ್ಸ್‌ನಲ್ಲಿ ಅಶೋಕಾ ದಿ ಗ್ರೇಟ್‌ ಶುದ್ಧ ಸಸ್ಯಹಾರಿ ರೆಸ್ಟೊರೆಂಟ್‌ ಇದೆ. ಇದು ಸಂಗೀತದ ಮನೆಯ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡಿದೆ. ಸಂಗೀತ ದಿಗ್ಗಜರ ಭಾವಚಿತ್ರ, ವಾದ್ಯಗಳನ್ನೂ ಅಲ್ಲಿಡಲಾಗಿದೆ. 1990ಕ್ಕಿಂತ ಹಳೇಯ ಗೀತೆಗಳನ್ನು ಆಲಿಸುತ್ತ ಗ್ರಾಹಕರು ಊಟೋಪಹಾರ ಸವಿಯಬಹುದು.

ದಾವಣಗೆರೆ ಬೆಣ್ಣೆದೋಸೆ. ತಂದೂರಿ ಟೀ ಇಲ್ಲಿನ ಉಪಹಾರದ ವಿಶೇಷ. ಊಟಕ್ಕೆ ಪನ್ನೀರ ಕ್ರ್ಯಾಕಲ್‌, ವೆಜ್‌ ಪರದಾ ಬಿರಿಯಾಣಿ, ತಂದೂರಿ ಜಾಫ್ರಾನಿ ಗೋಬಿ, ವೆಜ್‌ ಲಜೀಜ್‌ ಕಡೈ, ಚೀಜ್‌ ರೋಲ್‌, ಗುಜರಾತಿ ಥಾಲಿ ಹಾಗೂ ದೂದಿ ಹಲ್ವಾ, ಗಾಜರ್‌ ಹಲ್ವಾ ಅಚ್ಚುಮೆಚ್ಚು. ಸಮಾರಂಭಗಳಿಗೆ 20ರಿಂದ 200 ಊಟದವರೆಗೆ ಕೇಟರಿಂಗ್‌ ವ್ಯವಸ್ಥೆಯೂ ಇದೆ. ಮಾಹಿತಿಗೆ ಮೊ. 8904259832, 9916186376 ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ