ಆ್ಯಪ್ನಗರ

ದೈನಂದಿನ ಜೀವನಕ್ಕೆ ಯೋಗ ಅವಶ್ಯ

ಧಾರವಾಡ : ದೈನಂದಿನ ಜೀವನಕ್ಕೆ ಯೋಗ ಅತೀ ಅವಶ್ಯಕವಾಗಿದ್ದು, ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ ಎಂದು ಪಾಲಿಕೆ ಸದಸ್ಯ ರಾಜು ಅಂಬೋರೆ ಹೇಳಿದರು.

Vijaya Karnataka 10 Feb 2019, 5:00 am
ಧಾರವಾಡ : ದೈನಂದಿನ ಜೀವನಕ್ಕೆ ಯೋಗ ಅತೀ ಅವಶ್ಯಕವಾಗಿದ್ದು, ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ ಎಂದು ಪಾಲಿಕೆ ಸದಸ್ಯ ರಾಜು ಅಂಬೋರೆ ಹೇಳಿದರು.
Vijaya Karnataka Web DRW-9MAILAR03
ಧಾರವಾಡ ಯುನಿವರ್ಸಿಟಿ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಸೂರ್ಯನಮಸ್ಕಾರ ಉಚಿತ ತರಬೇತಿ ಶಿಬಿರವನ್ನು ಡಾ. ವೀರಣ್ಣ ಬೋಳಶೆಟ್ಟಿ ಉದ್ಘಾಟಿಸಿದರು.


ನಗರದ ಕರ್ನಾಟಕ ರಾಜ್ಯ ಯೋಗ ಮತ್ತು ಕ್ರೀಡಾ ಸಂಸ್ಥೆ, ಧಾರವಾಡ ಫ್ರೆಂಡ್ಸ್‌ ಕ್ಲಬ್‌ ಹಾಗೂ ಯುನಿವರ್ಸಿಟಿ ಪಬ್ಲಿಕ್‌ ಸ್ಕೂಲ್‌ ಆಶ್ರಯದಲ್ಲಿ ಯುನಿವರ್ಸಿಟಿಯ ಪಬ್ಲಿಕ್‌ ಸ್ಕೂಲ್‌ ವತಿಯಿಂದ ರಥಸಪ್ತಮಿ ನಿಮಿತ್ತ ಸೂರ್ಯನಮಸ್ಕಾರ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸೂರ್ಯ ಎಂದರೆ ಬೆಳಕು. ಪ್ರತಿದಿನ ಸೂರ್ಯನಿಗೆ ವಂದಿಸಿ ಬೆಳಗಿನ ಪ್ರಶಾಂತ ವಾತಾವರಣದಲ್ಲಿ ವ್ಯಾಯಾಮ, ಸೂರ್ಯ ನಮಸ್ಕಾರ, ಧ್ಯಾನದಲ್ಲಿ ತೊಡಗಿಸಿಕೊಳ್ಳುವದರಿಂದ ಆರೋಗ್ಯದಿಂದ ಇರಲು ಸಾಧ್ಯ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಡಾ. ವೀರಣ್ಣ ಬೋಳಶೆಟ್ಟಿ ಮಾತನಾಡಿ, ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ ಹೊರಡುವ ಪರ್ವಕಾಲವೇ ರಥಸಪ್ತಮಿ ಎಂದರು.

ಈ ಸಂದರ್ಭದಲ್ಲಿ ಕ್ಲಬ್‌ ಅಧ್ಯಕ್ಷ ಮುತ್ತು ಮಡಿವಾಳರ, ಉಪಾಧ್ಯಕ್ಷ ಶಿವಾನಂದ ಕವಳಿ, ಕಾರ್ಯದರ್ಶಿ ಸಲೀಂ ಮಿಶ್ರೀಕೋಟಿ, ಕರ್ನಾಟಕ ರಾಜ್ಯ ಯೋಗ ಮತ್ತು ಕ್ರೀಡಾ ಸಂಸ್ಥೆ ಉಪಾಧ್ಯಕ್ಷ ಸುರೇಶ ಅಂಗಡಿ, ಪವಾಡಶೆಟ್ಟಿ, ಪಾಂಡುರಂಗ ಉಪ್ಪಾರ, ವಿರುಪಾಕ್ಷ ಗೌಡ ಚನ್ನಬಸನಗೌಡರ, ರವಿ ಶಿವಯ್ಯನಮಠ, ವಿರೇಶ ಗೋಡಿಕಟ್ಟಿ, ಬಾಬು ಚನಬಸನಗೌಡರ, ಗಿರೀಶ ಕೊಂಗಿ, ಪ್ರಶಾಂತ ಕ್ಷೀರಸಾಗರ, ಸುನೀಲ ಗಂಟಿಯವರ, ರಾಜೇಶ ಜಾಧವ, ಪಾಲಿಕೆ ವಲಯಾಧಿಕಾರಿ ಎನ್‌.ಎಂ. ಸಾಲಿಮಠ, ಯೋಗ ತರಬೇತುದಾರರಾದ ಶ್ರೀಲತಾ ಎಂ. ಹಪ್ಪಳಿ, ಸಾವಿತ್ರಿ ಶೆಟ್ಟೆಮ್ಮನವರ, ಅಶೋಕ ಮರಡಿ, ದಾಂಡೆವಾಲೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ