ಆ್ಯಪ್ನಗರ

ದಲಿತರ ವಿಶ್ವಾಸ ಗಳಿಸಲಿಲ್ಲ : ಆರೋಪ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಭಾರಿ ಅಂತರದಿಂದ ಸೋಲಲು ಜಿಲ್ಲೆಯ ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ ಎಂದು ಉತ್ತರ ...

Vijaya Karnataka 24 May 2019, 5:00 am
ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಭಾರಿ ಅಂತರದಿಂದ ಸೋಲಲು ಜಿಲ್ಲೆಯ ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ ಎಂದು ಉತ್ತರ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ಕ್ರಿಯಾ ಸಮಿತಿಯ ಮುಖಂಡ ಹಾಗೂ ಮಾಜಿ ಕಾರ್ಪೋರೇಟರ್‌ ಮೋಹನ ಹಿರೇಮನಿ, ವೆಂಕಟೇಶ ಮಾದರ ಸೇರಿದಂತೆ ಹಲವರು ಆರೋಪಿಸಿದ್ದಾರೆ.
Vijaya Karnataka Web dalits did not gain confidence accused
ದಲಿತರ ವಿಶ್ವಾಸ ಗಳಿಸಲಿಲ್ಲ : ಆರೋಪ


ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತ್ಯೇಕ ಸಮಾವೇಶ ನಡೆಸಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದರು. ಕಾಂಗ್ರೆಸ್‌ದಲ್ಲಿ ಇದು ಆಗಲೇ ಇಲ್ಲ ಎಂದು ಆಕ್ಷೇಪಿಸಿದ್ದಾರೆ. ಹುಬ್ಬಳ್ಳಿ ಪೂರ್ವ ಶಾಸಕರು ಕೇವಲ ಹಳ್ಳಿಗಳಿಗೆ ತೆರಳಿ ತಮ್ಮ ಸಮಾಜದ ಮತಯಾಚಿಸಿ ಇತರರನ್ನು ನಿರ್ಲಕ್ಷಿಸಿದರು. ಇದು ಪಕ್ಷ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ತಪ್ಪು ಸಂದೇಶ ನೀಡುವ ಮೂಲಕ ಚುನಾವಣೆ ಸೋಲು ಅನುಭಿಸಬೇಕಾಯಿತು ಎಂದು ಮೋಹನ ಹಿರೇಮನಿ, ಶಂಕರ ಹೊಸಮನಿ, ದುರಗಪ್ಪ ಪೂಜಾರ, ಪರಿಶುರಾಮ ತೇರದಾಳ, ವೆಂಕಟೇಶ ಮಾದರ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ