ಆ್ಯಪ್ನಗರ

ಎಲ್ಲ ಸಿಬ್ಬಂದಿಗೆ ಡಿಸಿ ಕೃತಜ್ಞತೆ

ಲೋಕಸಭೆ ಸಾರ್ವತ್ರಿಕ ಮತ್ತು ಕುಂದಗೋಳ ವಿಧಾನಸಭಾ ಉಪಚುನಾವಣೆಯು ಯಶಸ್ವಿಯಾಗಿ, ಶಾಂತಿಯುತವಾಗಿ ಜರುಗಲು ಸಹಕರಿಸಿದ ಜಿಲ್ಲೆಯ ಸಾರ್ವಜನಿಕರು, ಚುನಾವಣಾ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಂ .ದೀಪಾ , ಎಸ್‌ಪಿ ಜಿ.ಸಂಗೀತ ಕೃತಜ್ಞತೆ ಸಲ್ಲಿಸಿದ್ದಾರೆ.

Vijaya Karnataka 20 May 2019, 5:00 am
ಲೋಕಸಭೆ ಸಾರ್ವತ್ರಿಕ ಮತ್ತು ಕುಂದಗೋಳ ವಿಧಾನಸಭಾ ಉಪಚುನಾವಣೆಯು ಯಶಸ್ವಿಯಾಗಿ, ಶಾಂತಿಯುತವಾಗಿ ಜರುಗಲು ಸಹಕರಿಸಿದ ಜಿಲ್ಲೆಯ ಸಾರ್ವಜನಿಕರು, ಚುನಾವಣಾ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಂ .ದೀಪಾ , ಎಸ್‌ಪಿ ಜಿ.ಸಂಗೀತ ಕೃತಜ್ಞತೆ ಸಲ್ಲಿಸಿದ್ದಾರೆ.
Vijaya Karnataka Web dc thanksgiving to all staff
ಎಲ್ಲ ಸಿಬ್ಬಂದಿಗೆ ಡಿಸಿ ಕೃತಜ್ಞತೆ


ಈ ಬಾರಿ ವಿಶೇಷಚೇತನರು, ಹಿರಿಯ ನಾಗರಿಕ ಮತದಾರರಿಗೆ ಸಾರಿಗೆ ಸೌಕರ್ಯ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಮತದಾರರನ್ನು ಜಾಗೃತಗೊಳಿಸಲು ಶ್ರಮಿಸಿದ ಸ್ವೀಪ್‌ ಸಮಿತಿಯ ಕಾರ್ಯಗಳನ್ನು ಅವರು ಶ್ಲಾಘಿಸಿದ್ದಾರೆ.

ಡಿಮಸ್ಟರಿಂಗ್‌ ಕೇಂದ್ರಕ್ಕೆ ಮತಯಂತ್ರಗಳು : ಕುಂದಗೋಳ ವಿಧಾನಸಭಾ ಉಪ ಚುನಾವಣೆಯ ಎಲ್ಲಾ ಮತಗಟ್ಟೆಗಳ ಮತಯಂತ್ರಗಳನ್ನು ಕುಂದಗೋಳ ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದ ಡಿಮಸ್ಟರಿಂಗ್‌ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಎಲ್ಲ ಮತಗಟ್ಟೆಗಳ ಕಂಟ್ರೋಲ್‌ ಯುನಿಟ್‌,ಬ್ಯಾಲೆಟ್‌ ಯುನಿಟ್‌ ಹಾಗೂ ವಿವಿಪ್ಯಾಟ್‌ ಯಂತ್ರಗಳು ಕ್ರೋಡೀಕರಣಗೊಂಡು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎಣಿಕೆ ಕೇಂದ್ರದ ಭದ್ರತಾ ಕೊಠಡಿಗಳನ್ನು ಸೇರಲಿವೆ. ಮೇ.23 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕೈಕೊಟ್ಟ ಮತಯಂತ್ರಗಳು : ಮತದಾನದ ವೇಳೆ ಬೆಳಗ್ಗೆ ನಡೆದ ಅಣಕು ಮತದಾನದ ಸಂದರ್ಭದಲ್ಲಿ 10 ವಿವಿಪ್ಯಾಟ್‌ ಯಂತ್ರಗಳು ಹಾಗೂ ನೈಜ ಮತದಾನದ ಸಂದರ್ಭದಲ್ಲಿ 13 ವಿವಿಪ್ಯಾಟ್‌ ಯಂತ್ರಗಳನ್ನು ತಾಂತ್ರಿಕ ಕಾರಣಕ್ಕೆ ವಿವಿಧ ಮತಗಟ್ಟೆಗಳಲ್ಲಿ ಬದಲಾವಣೆ ಮಾಡಲಾಯಿತು. ಮತಗಟ್ಟೆ ಸಂಖ್ಯೆ 20 ರಲ್ಲಿ ಧ್ವನಿ (ಸೌಂಡ್‌) ಬಾರದ ಕಾರಣ 1 ಕಂಟ್ರೋಲ್‌ ಯುನಿಟ್‌ ಹಾಗೂ 1 ಬ್ಯಾಲೆಟ್‌ ಯುನಿಟ್‌ ಬದಲಾಯಿಸಲಾಯಿತು ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ