ಆ್ಯಪ್ನಗರ

ಕ್ಷತ್ರಿಯ ಸಮಾಜ ಸಂಘಟನೆಗೆ ಬೃಹತ್‌ ಸಮಾವೇಶಕ್ಕೆ ನಿರ್ಧಾರ

ಹುಬ್ಬಳ್ಳಿ : ರಾಜ್ಯದ ಒಟ್ಟು ಜನಸಂಖ್ಯೆಯ 25ರಷ್ಟಿರುವ ಕ್ಷತ್ರಿಯ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿದೆ. ಸಮಾಜ ಸಂಘಟನೆಗೆ ನೀಡಲಾಗಿದ್ದು, ಹರಿದು ಹಂಚಿಹೋಗಿರುವ 33 ಒಳಪಂಗಡಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಕರ್ನಾಟಕ ಕ್ಷ ತ್ರಿಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್‌ ಹೇಳಿದರು.

Vijaya Karnataka 12 Feb 2019, 5:50 pm
ಹುಬ್ಬಳ್ಳಿ : ರಾಜ್ಯದ ಒಟ್ಟು ಜನಸಂಖ್ಯೆಯ 25ರಷ್ಟಿರುವ ಕ್ಷತ್ರಿಯ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿದೆ. ಸಮಾಜ ಸಂಘಟನೆಗೆ ನೀಡಲಾಗಿದ್ದು, ಹರಿದು ಹಂಚಿಹೋಗಿರುವ 33 ಒಳಪಂಗಡಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಕರ್ನಾಟಕ ಕ್ಷ ತ್ರಿಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್‌ ಹೇಳಿದರು.
Vijaya Karnataka Web decision for massive convention for kshatriya society
ಕ್ಷತ್ರಿಯ ಸಮಾಜ ಸಂಘಟನೆಗೆ ಬೃಹತ್‌ ಸಮಾವೇಶಕ್ಕೆ ನಿರ್ಧಾರ

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸಮಾಜ ಸಂಘಟನೆ ಪೂರ್ವಭಾವಿಯಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಸಮಸ್ಯೆಗಳು ಮತ್ತು ವಾಸ್ತವ ಸ್ಥಿತಿಯ ವರದಿ ಪಡೆದುಕೊಳ್ಳಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಮಾವೇಶದ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಶೇ. 15ರಷ್ಟು ಜನಸಂಖ್ಯೆ ಹೊಂದಿರುವ ಕೆಲ ಸಮಾಜಗಳು ರಾಜಕೀಯ ಅಧಿಕಾರ ಗಳಿಸಿ ಸಾಕಷ್ಟು ಪ್ರಭಾವ ಬೀರುತ್ತಿವೆ. ಕ್ಷತ್ರಿಯ ಸಮಾಜ ಪ್ರತಿಯೊಂದಕ್ಕೂ ಮತ್ತೊಬ್ಬರ ಎದುರು ಕೈ ಚಾಚುವ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಎಲ್ಲ ಸಮಾಜದವರು ಸಹ ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜಕೀಯ, ಶೈಕ್ಷ ಣಿಕ, ಆರ್ಥಿಕ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಸಮಾಜದ 33 ಒಳ ಪಂಗಡಗಳನ್ನು ಒಟ್ಟುಗೂಡಿಸಿಕೊಂಡು ನಾವು ಸಹ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತೆವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಅರುಣ ಜಾಧವ, ಅಪ್ಪಾಸಾಹೇಬ್‌ ಚೌವ್ಹಾಣ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ