ಆ್ಯಪ್ನಗರ

3 ತಿಂಗಳೊಳಗೆ ಕೊರತೆ ನಿವಾರಣೆ

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆಗಳ ಕುರಿತು ಮೂರು ತಿಂಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಹಾಗೂ ಎಸ್ಸಿ-ಎಸ್‌ಟಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶಶಿಧರ ಮಾಡ್ಯಾಳ ತಿಳಿಸಿದರು.

Vijaya Karnataka 15 Dec 2019, 5:00 am
ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆಗಳ ಕುರಿತು ಮೂರು ತಿಂಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಹಾಗೂ ಎಸ್ಸಿ-ಎಸ್‌ಟಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶಶಿಧರ ಮಾಡ್ಯಾಳ ತಿಳಿಸಿದರು.
Vijaya Karnataka Web deficit relief within 3 months
3 ತಿಂಗಳೊಳಗೆ ಕೊರತೆ ನಿವಾರಣೆ


ನಗರದ ಮಿನಿ ವಿಧಾನಸೌಧದಲ್ಲಿಶುಕ್ರವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆಗಳ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯದ ಬಹುತೇಕ ಸಮಸ್ಯೆಗಳು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತವೆ. ಇವುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಲಾಗುವುದು ಎಂದರು.

ಮುಕ್ತವಾಗಿ ದೂರು ನೀಡಿ
ಸರಕಾರದ ನಿರ್ದೇಶನದ ಮೇರೆಗೆ ಸಭೆ ಏರ್ಪಡಿಸಲಾಗಿದ್ದು, ಹಿಂಜರಿಕೆ ಇಲ್ಲದೆ ಮುಕ್ತವಾಗಿ ದೂರುಗಳನ್ನು ನೀಡಿ. ಸಂವಿಧಾನದಲ್ಲಿಸ್ಪಷ್ಟವಾಗಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಲಾಗಿದೆ. ಯಾವುದೇ ಗ್ರಾಮದಲ್ಲಿಕ್ಷೌರಿಕರು, ಚಹಾ ಅಂಗಡಿಯವರು ಅಸ್ಪೃಶ್ಯತೆ ಆಚರಿಸಿದರೆ ಪರವಾನಗಿ ರದ್ದುಪಡಿಸಬೇಕೆಂದು ಪಿಡಿಒಗಳಿಗೆ ಸೂಚನೆ ನೀಡಿದರು.

ಕುಸುಗಲ್‌ ಹಾಗೂ ಸುಳ್ಳ ಪಂಚಾಯತಿ ಪಿಡಿಒಗಳ ಕಾರ್ಯವೈಖರಿ ಬಗ್ಗೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿಮಾತನಾಡಿದ ತಹಸೀಲ್ದಾರ್‌, ಕುಸುಗಲ್‌ ಪಿಡಿಓ ಶಶಿಧರ ಮಂಟೂರ ಅವರಿಗೆ ಗ್ರಾಪಂ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದರು. ಇನ್ನು ಸುಳ್ಳ ಪಿಡಿಓ ಆದಷ್ಟೂ ಬೇಗ ನಿವೇಶನ ಹಂಚಿಕೆ ಕುರಿತು ಗ್ರಾಮಸಭೆ ನಡೆಸಬೇಕೆಂದು ತಿಳಿಸಿದರು.

ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಬೇಕೆಂದು ಪೊಲೀಸ್‌ ಅಧಿಕಾರಿಗೆ ಸಮಾಜದ ಮುಖಂಡರು ಮನವಿ ಮಾಡಿದರು. ವಿದ್ಯಾರ್ಥಿ ವೇತನ, ಕಾನೂನು ಪದವಿಧರರಿಗೆ ಭತ್ಯೆ, ಅಂತರ್‌ ಜಾತಿ ವಿವಾಹ ಪ್ರೋತ್ಸಾಹ ಧನ, ಸಾಲ ಸೌಲಭ್ಯಗಳನ್ನು ಸಕಾಲದಲ್ಲಿಒದಗಿಸುವಂತೆ ಒತ್ತಾಯಿಸಿದರು.

ಇಲ್ಲಿಯ ರೈಲ್ವೆ ನಿಲ್ದಾಣದ ಬಳಿಯ ಡಾ. ಅಂಬೇಡ್ಕರ್‌ ಮೂರ್ತಿ ಸ್ಥಳದಲ್ಲಿನೀರಿನ ವ್ಯವಸ್ಥೆ ಹಾಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಹಾಗೂ ಕಾನೂನು ನೆರವು ಕಾರ್ಯಕ್ರಮ ಮಾಡುವಂತೆ ಸಭೆಯಲ್ಲಿಮುಖಂಡರು ತಿಳಿಸಿದರು. ಛಬ್ಬಿ ಗ್ರಾಮದಲ್ಲಿಕರ್ನಾಟಕ ಹಾಲು ಉತ್ಪಾದಕರ ಸಂಘಕ್ಕೆ ನೀಡಿರುವ ಹರಿಜನರ ಭೂಮಿಯನ್ನು ಮರಳಿ ಪಡೆದು ದಲಿತರ ಕಲ್ಯಾಣಕ್ಕಾಗಿ ಮೀಸಲಿಡಬೇಕೆಂದು ಕೋರಲಾಯಿತು. ಮಂಟೂರು ಹಾಗೂ ಎಸ್‌.ಎಂ. ಕೃಷ್ಣನಗರಗಳಲ್ಲಿನಿರ್ಮಿಸಿರುವ ಅಂಬೇಡ್ಕರ್‌ ಭವನ ಉಸ್ತುವಾರಿಯನ್ನು ಸೂಕ್ತ ರೀತಿಯಲ್ಲಿನಿರ್ವಹಿಸುವಂತೆ ಒತ್ತಾಯಿಸಲಾಯಿತು.

ತಾಪಂ ಅಧ್ಯಕ್ಷೆ ಚನ್ನಮ್ಮಾ ಗೋಲ್‌ರ್‍, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ತಾಪಂ ಸಹಾಯಕ ನಿರ್ದೇಶಕ ಗಂಗಾಧರ ಕಂದಕೋರ, ಉಪನಗರ ಪೊಲೀಸ್‌ ಪಿಐ ಎನ್‌.ಸಿ. ಕಾಡದೇವರಮಠ, ಪಿತಾಂಬರಪ್ಪ ಬಿಳಾರದ, ಪ್ರೇಮನಾಥ ಚಿಕ್ಕತುಂಬಳ, ಗುರುನಾಥ ಉಳ್ಳಿಕಾಶಿ, ಸುರೇಶ ಖಾನಾಪುರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ