ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಮನವಿ

ಧಾರವಾಡ: ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿ (ಎಸ್‌ವಿಎಸ್‌) ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಾಲಕರು Nೕರಾವ್‌ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.

Vijaya Karnataka 16 Dec 2019, 5:00 am
ಧಾರವಾಡ: ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿ (ಎಸ್‌ವಿಎಸ್‌) ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಾಲಕರು Nೕರಾವ್‌ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.
Vijaya Karnataka Web demands appeal to fulfillment
ಬೇಡಿಕೆ ಈಡೇರಿಕೆಗೆ ಮನವಿ


ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿಯು ನೋಂದಣಿಯಾಗಿದ್ದರೂ ನಾಲ್ಕು ವರ್ಷಗಳಿಂದ ನವೀಕರಣಗೊಂಡಿಲ್ಲ. ಅಲ್ಲದೇ ಎಸ್‌ವಿಎಸ್‌ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಸ್‌.ಆರ್‌.ಮಾನೆ ಮತ್ತೇ ಆಡಳಿತ ನಡೆಸುತ್ತಿದ್ದಾರೆ. ಆಡಳಿತ ಮಂಡಳಿ ಸಮಿತಿಯ ಬೈಲಾ ಉಲ್ಲಂಘಿಸಿ ಮನಬಂದಂತೆ ಆಡಳಿತ ನಿರ್ವಹಿಸುತ್ತಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲಎಂದು ಪಾಲಕರು ಆರೋಪಿಸಿದರು.

ಅಲ್ಲದೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿಕಳೆದ ಹಲವು ವರ್ಷಗಳಿಂದ ಕಳಪೆ ಶಿಕ್ಷಣ ನೀಡುತ್ತಿದ್ದು, ಶಿಕ್ಷಕರ ನಡುವೆ ಹೊಂದಾಣಿಕೆ ಕೊರತೆಯಿದೆ. ಶಾಲೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲ. ಶಿಕ್ಷಕರಿಬ್ಬರು ಪರಸ್ಪರ ಹೊಡೆದಾಡಿಕೊಂಡರು ಆಡಳಿತ ಮಂಡಳಿಯಾಗಲಿ, ಶಿಕ್ಷಣ ಇಲಾಖೆಯಾಗಲಿ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಳೆಯ ಆಡಳಿತ ಮಂಡಳಿ ರದ್ದುಪಡಿಸಿ, ಹೊಸದಾಗಿ ಸದಸ್ಯರ ಚುನಾಯಿಸಬೇಕು ಮತ್ತು ತಪ್ಪಿತಸ್ಥ ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಸಭೆಯು ಆಡಳಿತ ಮಂಡಳಿ ಬೈಲಾ ಉಲ್ಲಂಘಿಸಿ ಮನಬಂದಂತೆ ಕಾರ್ಯ ನಿರ್ವಹಿಸುತ್ತಿದೆ. ಸಮಿತಿಗೆ ಹೊಸದಾಗಿ ಸಾರ್ವಜನಿಕರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡು ಚುನಾವಣೆ ನಡೆಸಬೇಕು. ಅಲ್ಲದೆ, ಆಡಳಿತ ಮಂಡಳಿಯಲ್ಲಿಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಪಟ್ಟುಹಿಡಿದರು. ನಂತರ ಪಾಲಕರ ಒತ್ತಡಕ್ಕೆ ಮಣಿದು ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ಎಚ್‌.ವಿ.ಡಂಬಳ ಅವರು ಮುಂದಿನ ಎರಡು ತಿಂಗಳಲ್ಲಿಹೊಸದಾಗಿ ಆಡಳಿತ ಮಂಡಳಿ ಚುನಾವಣೆ ನಡೆಸಿ, ಹೊಸ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಶಾಲೆಯ ಆವರಣದಲ್ಲಿಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಎಸೈ ಪ್ರಮೋದ ಯಲಿಗಾರ ಅವರು ಪಾಲಕರಿಗೆ ಸಮಾಧಾನ ಪಡಿಸಿ, ಆಡಳಿತ ಮಂಡಳಿಯವರಿಗೆ ಸದರಿ ಗೊಂದಲದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.

ಆನಂದ ಉದ್ದಣ್ಣವರ, ಮಂಜುನಾಥ ಕಾಳಿ, ಮುದಕೇಶ್ವರ ಮಾದರ, ಶಂಕರ ಮಗಳಿ, ವಿಶ್ವನಾಥ ಪಟಾತ್‌, ಬಿ.ಡಿ.ಮಾದರ, ಪಿ.ಡಿ.ಸುಣಗಾರ, ಎನ್‌.ಎಲ್‌.ಹಂಚಿನಾಳ, ಮಂಜು ಕಾಳಿ, ಸಾಧನಕೇರಿ, ಕೆಲಗೇರಿಯ ಪಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ