ಆ್ಯಪ್ನಗರ

ಬಾಂಗ್ಲಾ ನುಸುಳಿಕೋರರನ್ನು ಗಡಿಪಾರು ಮಾಡಿ

ಧಾರವಾಡ :ಅಕ್ರಮವಾಗಿ ದೇಶದಲ್ಲಿ ನುಸಿಳಿರುವ ಬಾಂಗ್ಲಾ ದೇಶದ ನುಸುಳುಕೋರರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನಾ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 7 Aug 2018, 5:00 am
ಧಾರವಾಡ :ಅಕ್ರಮವಾಗಿ ದೇಶದಲ್ಲಿ ನುಸಿಳಿರುವ ಬಾಂಗ್ಲಾ ದೇಶದ ನುಸುಳುಕೋರರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನಾ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web deport the bangladeshi infiltrators
ಬಾಂಗ್ಲಾ ನುಸುಳಿಕೋರರನ್ನು ಗಡಿಪಾರು ಮಾಡಿ


ಆಸಾಂ ರಾಜ್ಯದಲ್ಲಿ ನಡೆದ ಪೌರತ್ವ ನೋಂದಣಿ ಅಭಿಯಾನದಲ್ಲಿ 40 ಲಕ್ಷಕ್ಕೂ ಹೆಚ್ಚು ಅಕ್ರಮಣ ಬಾಂಗ್ಲಾ ನುಸುಳುಕೋರರು ಇರುವುದು ಬೆಳಕಿಗೆ ಬಂದಿರುವುದು ಆಘಾತಕಾರಿ ಸಂಗತಿ. ಹಾಗೆಯೇ ದೇಶದಲ್ಲಿ ಕೋಟ್ಯಂತರ ಬಾಂಗ್ಲಾ ನುಸುಳುಕೋರರು ಇದ್ದಾರೆ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ದೇಶದ ಆಂತರಿಕ ಭದ್ರತೆ ಜತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಉದ್ಯೋಗ ಸೇರಿದಂತೆ ಇನ್ನೂ ಹವು ಸಮಸ್ಯೆಗಳಿಗೆ ನುಸುಳುಕೋರರು ಕಂಠಕ ಆಗಿದ್ದಾರೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಧಾರವಾಡ ನಗರ ಪ್ರಮುಖ ಮಂಜು ಕವಳಿ, ರಾಜು ಖಾನಪ್ಪನವರ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ