ಆ್ಯಪ್ನಗರ

ಪರಿಸರ ನಾಶದಿಂದ ರೈತರ ಬದುಕು ಹಾಳು

ಧಾರವಾಡ : ತಾಲೂಕಿನ ಗರಗದ ಎಸ್‌ಜಿಎಂ ಪದವಿಪೂರ್ಪ ಮಹಾವಿದ್ಯಾಲಯದಲ್ಲಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಓ) ಸಂಘಟನೆಯ 53ನೇ ಸಂಸ್ಥಾಪನಾ ದಿನ ಕಾರ್ಯಕ್ರಮಕ್ಕೆ ಸಂಸ್ಥೆ ಅಧ್ಯಕ್ಷ ಮಡಿವಾಳಗೌಡರ ಪಾಟೀಲ್‌ ಅವರು ಸಸಿ ನೆಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು.

Vijaya Karnataka 30 Jun 2019, 5:00 am
ಧಾರವಾಡ : ತಾಲೂಕಿನ ಗರಗದ ಎಸ್‌ಜಿಎಂ ಪದವಿಪೂರ್ಪ ಮಹಾವಿದ್ಯಾಲಯದಲ್ಲಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಓ) ಸಂಘಟನೆಯ 53ನೇ ಸಂಸ್ಥಾಪನಾ ದಿನ ಕಾರ್ಯಕ್ರಮಕ್ಕೆ ಸಂಸ್ಥೆ ಅಧ್ಯಕ್ಷ ಮಡಿವಾಳಗೌಡರ ಪಾಟೀಲ್‌ ಅವರು ಸಸಿ ನೆಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
Vijaya Karnataka Web destroy the lives of farmers by environmental destruction
ಪರಿಸರ ನಾಶದಿಂದ ರೈತರ ಬದುಕು ಹಾಳು


ಬಳಿಕ ಮಾತನಾಡಿದ ಅವರು, ಪ್ರಸ್ತುತವಾಗಿ ಪರಿಸರ ನಾಶದಿಂದ ರೈತರ ಬದುಕು ಹೈರಾಣಾಗಿದೆ. ಪರಿಸರ ರಕ್ಷ ಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳ ಸುತ್ತಮುತ್ತ ಪರಿಸರದಲ್ಲಿ ಗಿಡಗಳನ್ನು ನೆಡುವ ಪ್ರತಿಜ್ಞೆ ಮಾಡಬೇಕು ಎಂದರು.

ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ್‌ ಎಸ್‌.ಗೌಡ ಮಾತನಾಡಿ, ಎಐಡಿವೈಓ ಸಂಘಟನೆಯ ಮೂಲಕ ಯುವಜನರ ಜ್ವಲಂತ ಸಮಸ್ಯೆಗಳ ಕುರಿತು ಸರಕಾರದ ವಿರುದ್ಧ ಹೋರಾಟಗಳನ್ನು ನಡೆಸುತ್ತಿದೆ. ಯುವಜನರಲ್ಲಿ ಉನ್ನತವಾದ ನೀತಿ ನೈತಿಕತೆಗಳನ್ನು ಬೆಳೆಸುವ ಮೂಲಕ ಪಶುಗಳಿಗೆ ಲಸಿಕಾ ಕಾರ್ಯಕ್ರಮ, ಗ್ರಾಮೀಣ ಕ್ರೀಡಾಕೂಟಗಳು, ಮಹಾನ್‌ ವ್ಯಕ್ತಿಗಳ ಸೂಕ್ತಿಗಳ ಪ್ರದರ್ಶನದ ಕಾರ್ಯಕ್ರಮಗಳ ಈ ಸಂಘಟನೆ ಮಾಡುತ್ತಿದೆ ಎಂದರು.
ಕಾಲೇಜಿನ ಉಪನ್ಯಾಸಕ ಆರ್‌.ಎಲ್‌.ಲಮಾಣಿ, ಆನಂದ ತೋಟಗಿ, ಭಾಗ್ಯಶ್ರೀ ಕುಲಕರ್ಣಿ, ಜಯಶ್ರೀ, ಹನುಮೇಶ ಹುಡೇದ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಐಡಿವೈಓ ಜಿಲ್ಲಾಧ್ಯಕ್ಷ ರಮೇಶ ಹೊಸಮನಿ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ