ಆ್ಯಪ್ನಗರ

ಸದಾ ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ

ಅಳ್ನಾವರ: ಸದಾ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪರೀಕ್ಷೆ ಎಂಬ ಭಯ ಬೇಡ, ವರ್ಷವಿಡೀ ಕಲಿತ ವಿದ್ಯೆಯನ್ನು ಪರೀಕ್ಷೆಯಲ್ಲಿಸಮರ್ಥವಾಗಿ ಬರೆದು ಉತ್ತಮ ಅಂಕ ಗಳಿಸಬೇಕು. ಸತತ ಪ್ರಯತ್ನ, ಸಮಯ ಪಾಲನೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಯಶಸ್ಸು ನಿಮ್ಮ ಪಾಲಾಗುತ್ತದೆ ಎಂದು ಪ್ರಾಂಶುಪಾಲ ಫಾದರ್‌ ಎಸ್‌.ಲೂಕಾಸ್‌ ಹೇಳಿದರು.

Vijaya Karnataka 30 Jan 2020, 5:00 am
ಅಳ್ನಾವರ: ಸದಾ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪರೀಕ್ಷೆ ಎಂಬ ಭಯ ಬೇಡ, ವರ್ಷವಿಡೀ ಕಲಿತ ವಿದ್ಯೆಯನ್ನು ಪರೀಕ್ಷೆಯಲ್ಲಿಸಮರ್ಥವಾಗಿ ಬರೆದು ಉತ್ತಮ ಅಂಕ ಗಳಿಸಬೇಕು. ಸತತ ಪ್ರಯತ್ನ, ಸಮಯ ಪಾಲನೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಯಶಸ್ಸು ನಿಮ್ಮ ಪಾಲಾಗುತ್ತದೆ ಎಂದು ಪ್ರಾಂಶುಪಾಲ ಫಾದರ್‌ ಎಸ್‌.ಲೂಕಾಸ್‌ ಹೇಳಿದರು.
Vijaya Karnataka Web develop a reading habit
ಸದಾ ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ


ಇಲ್ಲಿನ ಸೇಂಟ್‌ ತೆರೇಸಾ ಪಿಯು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಶುಭ ಹಾರೈಸಿದ ನಂತರ ಅವರು ಮಾತನಾಡಿ, ಪಠ್ಯದ ವಿಷಯವನ್ನು ಮನನ ಮಾಡಿಕೊಂಡು ಛಲ, ಆತ್ಮಸೈರ್ಯದಿಂದ ಮುಂದೆ ಸಾಗಿ ಎಂದರು.

ಸೇಂಟ್‌ ತೆರೇಸಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್‌ ರೆನಿಟಾ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆ. ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಬೇಕು. ಬದುಕಿನ ಎಲ್ಲಹಂತದಲ್ಲಿಕಲಿಕೆ ಮುಂದುವರೆದರೆ ಅದು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಡಿಜಿಟಲ್‌ ಪ್ರಪಂಚದ ವೇಗಕ್ಕೆ ತಕ್ಕಂತೆ ಬೆಳೆದು ನಿಮ್ಮ ಭವಿಷ್ಯ ಕಟ್ಟಿಕೊಳ್ಳಿ ಎಂದರು.

ಪ್ರಾಧ್ಯಾಪಕ ಎಸ್‌.ಎ.ಕುಂಬಾರ ಮಾತನಾಡಿದರು. ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹೇಳಿಕೊಂಡರು. ಮಕ್ಕಳ ಮನರಂಜನೆ ಕಾರ್ಯಕ್ರಮಗಳು ನೆರೆದವರ ಮನ ತಣಿಸಿದವು. ವಿದ್ಯಾರ್ಥಿಗಳು ಕಾಲೇಜಿಗೆ ನೆನಪಿನ ಕಾಣಿಕೆ ಅರ್ಪಿಸಿದರು.

ಬಿ.ಎಲ್‌.ದಾರ್ಲಾ, ಎಂ.ಬಿ.ಮಾಳಣ್ಣವರ, ಕೆ.ರಾಧಾ, ಜಯಲಕ್ಷಿತ್ರ್ಮ ಸಾವಂತ, ಕಿರಣ ಡಿ, ಜಾನ್ಸನ್‌ ಕರ್ಲೆಕರ ,ಮಂಜುನಾಥ ಬೆಂಡಿಗೇರಿ, ಪ್ರಕಾಶ ಬೀಡಿಕರ, ವಿ.ಬಿ. ಪಾಟೀಲ, ಲಕ್ಷತ್ರ್ಮಣ ಕಿತ್ತೂರ ಇದ್ದರು. ಶಿವಾನಂದ ಹಡಪದ ಸ್ವಾಗತಿಸಿದರು. ನಿಧಿ ಪೋಕಾರ ಮತ್ತು ನಾಜಿಯಾ ಮುಜಾವರ ನಿರೂಪಿಸಿದರು. ವೀಣಾ ಧುಮೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ