ಆ್ಯಪ್ನಗರ

ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಿ

ಧಾರವಾಡ: ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅಗತ್ಯವಾಗಿದೆ. ಪ್ರಶ್ನಿಸುವ ಕೌಶಲ, ವೈಜ್ಞಾನಿಕ ಪ್ರಯೋಗ, ವಿಜ್ಞಾನದ ಮಾದರಿ, ವೈಜ್ಞಾನಿಕ ಚರ್ಚೆ ಮುಂತಾದ ವೈಜ್ಞಾನಿಕ ಚಟುವಟಿಕೆ ಮೂಲಕ ಮಕ್ಕಳಲ್ಲಿವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯ ಎಂದು ಡಯಟ್‌ ಉಪನಿರ್ದೇಶಕ ಹಾಗೂ ಪ್ರಾಚಾರ್ಯ ಅಬ್ದುಲ್‌ ವಾಜೀದ ಖಾಜಿ ಹೇಳಿದರು.

Vijaya Karnataka 6 Dec 2019, 5:00 am
ಧಾರವಾಡ: ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅಗತ್ಯವಾಗಿದೆ. ಪ್ರಶ್ನಿಸುವ ಕೌಶಲ, ವೈಜ್ಞಾನಿಕ ಪ್ರಯೋಗ, ವಿಜ್ಞಾನದ ಮಾದರಿ, ವೈಜ್ಞಾನಿಕ ಚರ್ಚೆ ಮುಂತಾದ ವೈಜ್ಞಾನಿಕ ಚಟುವಟಿಕೆ ಮೂಲಕ ಮಕ್ಕಳಲ್ಲಿವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯ ಎಂದು ಡಯಟ್‌ ಉಪನಿರ್ದೇಶಕ ಹಾಗೂ ಪ್ರಾಚಾರ್ಯ ಅಬ್ದುಲ್‌ ವಾಜೀದ ಖಾಜಿ ಹೇಳಿದರು.
Vijaya Karnataka Web develop a scientific mindset for children
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಿ

ಇಲ್ಲಿನ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಗುರುವಾರ ನಡೆದ ಮಾಳಮಡ್ಡಿ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಶಾಲೆಗಳ 6ರಿಂದ 8ನೇ ತರಗತಿಗಳ ಸುಮಾರು 150 ಮಕ್ಕಳು ಭಾಗವಹಿಸಿದ್ದರು. ನಂತರ ಮಕ್ಕಳಿಂದ ವಿಜ್ಞಾನ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ, ನೃತ್ಯಗಳು ಜರುಗಿದವು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಮೋದ ಮಹಾಲೆ, ಶಿವಲೀಲಾ ಕಳಸಣ್ಣವರ, ಗೋಪಾಲ ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ಅಡಿವೇರ, ಕೆ.ಎಫ್‌. ಜಾವೂರ, ಎಸ್‌.ಎಸ್‌.ಗಡೆಂಕನಹಳ್ಳಿ, ಬಿಆರ್‌ಪಿ ಡಿ.ವಿ.ಸಜ್ಜನ, ಪಿ.ಎಫ್‌.ಗುಡೇನಕಟ್ಟಿ, ಎಂ.ಟಿ.ಸುಂಕದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ