ಆ್ಯಪ್ನಗರ

ಅಭಿವೃದ್ಧಿ ಕಾರ್ಯಗಳೇ ಕೈ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ

ಹುಬ್ಬಳ್ಳಿ : ಮಾಜಿ ಸಚಿವ ದಿ. ಸಿ.ಎಸ್‌. ಶಿವಳ್ಳಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಲಿಡ್ಕರ್‌ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Vijaya Karnataka 9 May 2019, 5:00 am
ಹುಬ್ಬಳ್ಳಿ : ಮಾಜಿ ಸಚಿವ ದಿ. ಸಿ.ಎಸ್‌. ಶಿವಳ್ಳಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಲಿಡ್ಕರ್‌ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
Vijaya Karnataka Web DRW-8 NADAF 11
ಕುಂದಗೋಳ ವಿಧಾನಸಭೆ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಲಿಡ್ಕರ್‌ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ವಿವಿಧ ಗ್ರಾಮದ ದಲಿತ ಕಾಲೊನಿಗಳಿಗೆ ಭೇಟೆ ನೀಡಿ ಮತಯಾಚಿಸಿದರು.


ಅವರು ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಕಳಸ, ಸುಲ್ತಾನಪುರ, ಹರ್ಲಾಪುರ, ಸಂಕ್ಲೀಪುರ ಸೇರಿದಂತೆ ವಿವಿಧ ಗ್ರಾಮದ ದಲಿತ ಕಾಲೊನಿಗಳಿಗೆ ಭೇಟೆ ನೀಡಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮತಯಾಚನೆ ಮಾಡುತ್ತಾ ಮಾತನಾಡಿದ ಅವರು, ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಿ.ಎಸ್‌. ಶಿವಳ್ಳಿ ಮಾಡಿರುವುದು ಅವರ ಪತ್ನಿ ಗೆಲುವಿಗೆ ಸಹಕಾರಿಯಾಗಲಿದೆ. ಈ ಕ್ಷೇತ್ರದಲ್ಲಿ ಬಡವರ, ಶೋಷಿತರ ಪರವಾಗಿ ನಿಂತು ಅವರ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತಿದ್ದರು. ಅವರ ಈ ಕಾರ್ಯ ವಿರೋಧಿಗಳು ಕೂಡಾ ಒಪ್ಪುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯಥೀ ಕುಸುಮಾ ಶಿವಳ್ಳಿ, ಪ್ರಮುಖರಾದ ಪಕ್ಕೀರೆಶ ಮೇಲಿಮನಿ, ಮಲ್ಲಪ್ಪ ನೆರತಿ, ಸುರೇಶ ಪೂಜಾರ,ಗಣೇಶ ಹಳ್ಳಿಕೇರಿ, ಸುರೇಶ ಮುಳ್ಳೋಳ್ಳಿ ಕಲ್ಲಪ್ಪ ದೊಡ್ಡಮನಿ, ನಾಗರಾಜ ಕುರಿ , ಪಕ್ಕಿರೇಶ ಹೊಸಮನಿ, ಮಹಾಂತೇಶ ಮೇಲಿನಮನಿ, ರಮೇಶ ಕನ್ನಮ್ಮನವರ, ಚಂದ್ರಶೇಖರ ಕಾಳೆ, ಶೇಖರ ಮುಳಗುಂದ, ಯಲ್ಲಪ್ಪ ಕಾಳೆ, ಗಂಗಾಧರ ಹರಕುಣಿ, ಪ್ರವೀಣ ಪೂಜಾರ ಹೊನ್ನಪ್ಪ ದೊಡ್ಮನಿ, ಶಿವರಾಜ ದೇವರಮನಿ, ರಾಮಣ್ಣ ಪೂಜಾರ, ಶ್ರೀಕಾಂತ ದೊಡ್ಮನಿ, ಗುರುನಾಥ ಚಲುವಾದಿ, ವಿಜನಗೌಡಾ ಪಾಟೀಲ್‌, ಪ್ರಸನ್ನ ಮಿರಜಕರ್‌, ಪ್ರಭು ಪ್ರಭಾಕರ, ಪಕ್ಕಿರೇಶ ಮುಖಾಶಿ, ವೆಂಕನಗೌಡ ಪೋಲಿಸ್‌ ಪಾಟೀಲ್‌, ನಿಂಗಪ್ಪ ಮುಳಗುಂದ, ಗಣೇಶ ದೊಡ್ಮನಿ ಇನ್ನೀತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ