ಆ್ಯಪ್ನಗರ

ಧಾರವಾಡ ಕಟ್ಟಡ ದುರಂತ: ಸಾವಿನ ಸಂಖ್ಯೆ 16ಕ್ಕೇರಿಕೆ

ಕಟ್ಟಡ ತೆರವು ಕಾರ್ಯಾಚರಣೆ ಮುಕ್ತಾಯದ ನಂತರವೇ ಇಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯ ಸ್ಪಷ್ಟತೆ ಸಿಗಲಿದೆ.

Vijaya Karnataka 25 Mar 2019, 7:57 am
ಧಾರವಾಡ : ಬಹುಮಹಡಿ ಕಟ್ಟಡದಡಿ ಸಿಲುಕಿದವರ ರಕ್ಷಣಾ ಕಾರ್ಯ ಹಾಗೂ ಕಟ್ಟಡ ತೆರವು ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಭಾನುವಾರ ಬೆಳಗಿನ ಜಾವ ಬೈಲಹೊಂಗಲ ತಾಲೂಕಿನ ಈರಪ್ಪ ಹಡಪದ ಎಂಬುವವರ ಮೃತದೇಹ ಸಿಕ್ಕಿದ್ದು ಈ ವರೆಗೆ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ.
Vijaya Karnataka Web Dharwad Rescue


ಕಟ್ಟಡ ತೆರವು ಕಾರ್ಯಾಚರಣೆ ಮುಕ್ತಾಯದ ನಂತರವೇ ಇಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯ ಸ್ಪಷ್ಟತೆ ಸಿಗಲಿದೆ.

ಕಟ್ಟಡ ದುರಂತದಲ್ಲಿ ಒಟ್ಟು 54 ಮಂದಿ ರಕ್ಷಣೆಗೊಂಡಿದ್ದಾರೆ. ಈ ಪೈಕಿ ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಎಲ್ಲ 16 ಜನ ಮೃತರ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅಲ್ತಾಫ್‌ ಶೇಖ್‌, ಸಾಹೀಲ್‌ ಮಕಾಂದಾರ, ಮೊಹಮ್ಮದಗೌಸ್‌ ಯಾದಗಿರಿ, ಮೊಹಮ್ಮದಗೌಸ್‌ ಧಾರವಾಡ, ಯಲ್ಲಪ್ಪ ಭಂಗಿ ಘಟನಾ ಸ್ಥಳಕ್ಕೆ ಬಂದು ಅಲ್ಲಿ ತಮ್ಮ ಬೈಕ್‌, ಗಾರೆ ಕೆಲಸದ ಯಂತ್ರಗಳು ಸಿಲುಕಿಕೊಂಡಿವೆ ಎನ್ನುತ್ತಿದ್ದರು. ಅವುಗಳೇ ನಮ್ಮ ಜೀವಾಳ ಎಂದು ಹೇಳುತ್ತಿರುವುದು ಕಟ್ಟಡ ಜೀವ ಮಾತ್ರವಲ್ಲ ಉದ್ಯೋಗವನ್ನೂ ಕಸಿದುಕೊಂಡಿದೆ ಎಂಬುದನ್ನು ಸಾಕ್ಷಿಕರಿಸುವಂತಿತ್ತು.

ಕಟ್ಟಡ ಓರೆಯಾಗಿ ಬಿದ್ದಿದ್ದರಿಂದ ಇಲ್ಲಿ ಸಾವಿನ ಸಂಖ್ಯೆ ಕಡಿಮೆ ಆಗಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ವಿಕ ಕ್ಕೆ ತಿಳಿಸಿದ್ದಾರೆ. ಅದೇ ರೀತಿ ಘಟನೆಯಲ್ಲಿ ಪತಿ, ಮಾವನನ್ನು ಕಳೆದುಕೊಂಡ ಜ್ಯೋತಿ ಹಿರೇಮಠ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ