ಆ್ಯಪ್ನಗರ

ಧಾರವಾಡ ಜಿಲ್ಲೆಯ ರಸ್ತೆ, ಸೇತುವೆ ಜಖಂ

​ಧಾರವಾಡ: ಹು-ಧಾ ಸೇರಿದಂತೆ ಜಿಲ್ಲೆಯಾದ್ಯಂತ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದ್ದು, ಹಲವು ಆವಾಂತರಗಳು ಸಂಭವಿಸಿವೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ, ನಗರ ಪ್ರದೇಶದ ರಸ್ತೆ ಸೇರಿ 887 ಕಿ.ಮೀ. ಸಾರ್ವಜನಿಕ ರಸ್ತೆಗಳು ಹಾನಿಯಾಗಿವೆ.

Vijaya Karnataka 23 Sep 2020, 5:00 am
ಮಲ್ಲಿಕಾರ್ಜುನ ಬಾಳನಗೌಡ್ರ
Vijaya Karnataka Web 22MALLU1B_21
ಧಾರವಾಡದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಡಾಂಬರ್‌ ಮಳೆಯಿಂದ ಕಿತ್ತು ಗುಂಡಿಗಳು ಬಿದ್ದಿರುವುದು.

ಧಾರವಾಡ: ಹು-ಧಾ ಸೇರಿದಂತೆ ಜಿಲ್ಲೆಯಾದ್ಯಂತ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದ್ದು, ಹಲವು ಆವಾಂತರಗಳು ಸಂಭವಿಸಿವೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ, ನಗರ ಪ್ರದೇಶದ ರಸ್ತೆ ಸೇರಿ 887 ಕಿ.ಮೀ. ಸಾರ್ವಜನಿಕ ರಸ್ತೆಗಳು ಹಾನಿಯಾಗಿವೆ.

-ಕಿತ್ತು ಹೋದ 80 ಕೋಟಿ ವೆಚ್ಚದ ರಸ್ತೆಗಳು
-ಸೇತುವೆಗಳು ಬಿದ್ದಿದ್ದರಿಂದ 23.35 ಕೋಟಿ ರೂ. ನಷ್ಟ

ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯ ನೂರಾರು ಗ್ರಾಮಗಳಲ್ಲಿಹಾಗೂ ನಗರ ಪ್ರದೇಶದಲ್ಲಿನಿರಂತರ ಸುರಿದ ಮಳೆಗೆ ರಸ್ತೆಗಳು ಕಿತ್ತು ಹೋಗಿವೆ. ನವಲಗುಂದ, ಧಾರವಾಡ, ಅಣ್ಣಿಗೇರಿ ತಾಲೂಕುಗಳ ಬಹುತೇಕ ಪ್ರದೇಶದಲ್ಲಿಬೆಣ್ಣೆಹಳ್ಳ, ತುಪ್ಪರಿ ಹಳ್ಳಗಳು ತುಂಬಿ ಹರಿದಿವೆ. ಇದರಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿಇತರ ಹಳ್ಳಗಳಿಂದ ಸೃಷ್ಟಿಯಾದ ಪ್ರವಾಹದಿಂದ ಅಪಾರ ಪ್ರಮಾಣದ ರಸ್ತೆಗಳು ಹಾಗೂ ಸೇತುವೆ ಮಳೆಗೆ ಕೊಚ್ಚಿ ಹೋಗಿವೆ. ಹೀಗಾಗಿ ಅಂದಾಜು 80 ಕೋಟಿ ರೂ. ರಸ್ತೆ ಹಾಳಾಗಿದೆ ಎನ್ನುತ್ತಾರೆ ಅಧಿಕಾರಿಗಳು.

887.08 ಕಿಮೀ ಹಾನಿ:
ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಡಿ 185.92 ಕಿಮೀ ರಸ್ತೆ ಹಾನಿಯಾಗಿದ್ದು, 33.33 ಕೋಟಿ ರೂ. ನಷ್ಟವಾಗಿದೆ. ಪಂಚಾಯತ ರಾಜ್‌ ಎಂಜನಿಯರಿಂಗ್‌ ಇಲಾಖೆ ವ್ಯಾಪ್ತಿಯಲ್ಲಿ553.92 ಕಿಮೀ ರಸ್ತೆಗಳು ಗರಿಷ್ಠ ಪ್ರಮಾಣದಲ್ಲಿಹಾಳಾಗಿದ್ದು, 17.13 ಕೋಟಿ ರೂ. ನಷ್ಟ್ಟವಾಗಿದೆ. ಇದರಂತೆ ನಗರ ಪ್ರದೇಶ ಹಾಗೂ ಇತರ ವ್ಯಾಪ್ತಿಯಲ್ಲಿ147.24 ಕಿ.ಮೀ.ನಷ್ಟು ರಸ್ತೆಗಳು ಕಿತ್ತು ಹೋಗಿದ್ದು, 29.70 ಕೋಟಿ ರೂ. ಹಾನಿಯಾಗಿದೆ. ಇದರಿಂದ ಒಟ್ಟಾರೆ ಮಳೆಗೆ 80.16 ಕೋಟಿ ರೂ. ವೆಚ್ಚದ ರಸ್ತೆಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿಅಂದಾಜಿಸಿದ್ದಾರೆ.

ಇತ್ತೀಚೆಗೆ ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ ಕೇಂದ್ರ ಅಧ್ಯಯನ ತಂಡಕ್ಕೆ ಈ ಬಗ್ಗೆ ಸಮಗ್ರ ವರದಿ ನೀಡಲಾಗಿದ್ದು, ಇದರಿಂದ ಜಿಲ್ಲೆಗೆ ಸೂಕ್ತವಾದ ಪರಿಹಾರ ದೊರಕುವ ವಿಶ್ವಾಸವಿದೆ ಎಂಬ ನಿರೀಕ್ಷೆಯಲ್ಲಿಜಿಲ್ಲಾಡಳಿತವಿದೆ.

ಪ್ರತಿವರ್ಷ ಮಳೆಯಿಂದ ಸೇತುವೆ, ರಸ್ತೆ ಹಾನಿಗೀಡಾಗುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿರೈತರು, ಸಾರ್ವಜನಿಕರು ನಗರ ಪ್ರದೇಶಕ್ಕೆ ಬರಲು ಹಾಗೂ ತಮ್ಮ ಹೊಲ, ಊರು, ಮನೆಗಳಿಗೆ ಹೋಗಿ ಬರಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸರಕಾರ ಹಾಗೂ ಜಿಲ್ಲಾಡಳಿತ ಆದಷ್ಟು ಶೀಘ್ರ ಹದಗೆಟ್ಟು ಹೋದ ರಸ್ತೆಗಳ ದುರಸ್ತಿ ಕಾರ್ಯ ನಡೆಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

100 ಸೇತುವೆಗೆ ಹಾನಿ
ನಿರಂತರ ಸುರಿದ ಮಳೆಗೆ ಕೇವಲ ರಸ್ತೆಗಳು ಅಷ್ಟೇ ಅಲ್ಲದೇ, ವಿವಿಧ ಹಳ್ಳಗಳಿಗೆ ನಿರ್ಮಿಸಿರುವ ಸೇತುವೆಗಳೂ ಕೊಚ್ಚಿ ಹೋಗಿವೆ. ಧಾರವಾಡ ಜಿಲ್ಲೆಯಲ್ಲಿಒಟ್ಟು 100 ಸೇತುವೆಗಳು ಹಾನಿಗೆ ಒಳಗಾಗಿವೆ. ಅದರಲ್ಲಿಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ41 ಸೇತುವೆಗಳು ಹಾಳಾಗಿದ್ದು, 19.47 ಕೋಟಿ ರೂ. ಮತ್ತು ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ವ್ಯಾಪ್ತಿಯ 59 ಸೇತುವೆಗಳು ಹಾನಿಯಾಗಿದ್ದು, 3.88 ಕೋಟಿ ರೂ. ಹಾನಿಯಾಗಿದೆ. ಜಿಲ್ಲೆಯಲ್ಲಿ23.35 ಕೋಟಿ ರೂ. ನಷ್ಟವಾಗಿದೆ ಎನ್ನುತ್ತಾರೆ ಸಮೀಕ್ಷೆ ಮಾಡಿದ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ