ಆ್ಯಪ್ನಗರ

ಧಾರವಾಡ ಅಪಘಾತ: ಹೊಸ ವಾಹನ ಖರೀದಿಸುವ ಕನಸು ಕಂಡಿದ್ದವ ಮಸಣ ಸೇರಿದ...

ಶವಾಗಾರದ ಎದುರು ಕ್ಲೀನರ್‌ ಮಲ್ಲಿಕಾರ್ಜುನ ಉಡಗಟ್ಟಿ (27) ಕುಟುಂಬದವರ ರೋದನ ಮುಗಿಲುಮುಟ್ಟಿತ್ತು. ರಾಣೇಬೆನ್ನೂರಿನಿಂದ ಆಗಮಿಸಿದ್ದ ಪಾಲಕರು, ಸಂಬಂಧಿಕರು ಶವವನ್ನು ನೋಡಲಾಗದೇ ಕುಸಿದು ಬಿದ್ದರು. ಎಸ್ಸೆಸ್ಸೆಲ್ಸಿ ಬಳಿಕವೇ ವಾಹನ ಓಡಿಸುತ್ತಿದ್ದ ಮಲ್ಲಿಕಾರ್ಜುನ.

Vijaya Karnataka Web 15 Jan 2021, 8:40 pm
ಹುಬ್ಬಳ್ಳಿ: ಧಾರವಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಹತ್ತಕ್ಕೂ ಹೆಚ್ಚು ಮಂದಿ. ಮೃತರ ಸಂಬಂಧಿಕರ ಈಗ ಮುಗಿಲು ಮುಟ್ಟಿದೆ. ತಮ್ಮವರು ಮೃತಪಟ್ಟರು ಎಂಬ ಸುದ್ದಿ ತಿಳಿದು ನಗರದ ಕಿಮ್ಸ್‌ ಆಸ್ಪತ್ರೆಗೆ ಓಡೋಡಿ ಬಂದ ಮೃತರ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತು.
Vijaya Karnataka Web ಧಾರವಾಡ ರಸ್ತೆ ಅಪಘಾತ
ಧಾರವಾಡ ರಸ್ತೆ ಅಪಘಾತ


11 ಮೃತದೇಹಗಳನ್ನು ಒಂದೇ ಕಡೆ ಮರಣೋತ್ತರ ಪರೀಕ್ಷೆ ಮಾಡಲು ಸಾಧ್ಯವಾಗದ ಕಾರಣ 7 ಶವಗಳನ್ನು ಹುಬ್ಬಳ್ಳಿಯ ಕಿಮ್ಸ್‌ನ ಶವಾಗಾರಕ್ಕೆ ತರಲಾಯಿತು. ಇನ್ನುಳಿದ 4 ಶವಗಳ ಮರಣೋತ್ತರ ಪರೀಕ್ಷೆಯನ್ನು ಧಾರವಾಡದಲ್ಲಿ ಮಾಡಲಾಯಿತು. ಇಡೀ ದೇಹ ಮತ್ತು ಮುಖ ಛಿದ್ರಗೊಂಡಿದ್ದರಿಂದ ಯಾರ ಶವ ಎಲ್ಲಿದೆ ಎಂದು ತಿಳಿಯುವುದು ಸಂಬಂಧಿಕರಿಗೆ ಸವಾಲಾಗಿತ್ತು. ದುಃಖದ ನಡುವೆ ಸಂಬಂಧಿಕರು ತಮ್ಮವರ ಶವಕ್ಕಾಗಿ ಅಲೆಯುವುದು ಕಲ್ಲೆದೆಯನ್ನೂ ಕರಗಿಸುವಂತಿತ್ತು.

ಈ ವೇಳೆ ಶವಾಗಾರದ ಎದುರು ಕ್ಲೀನರ್‌ ಮಲ್ಲಿಕಾರ್ಜುನ ಉಡಗಟ್ಟಿ (27) ಕುಟುಂಬ ಸದಸ್ಯರ ರೋದನ ಮುಗಿಲುಮುಟ್ಟಿತ್ತು. ರಾಣೇಬೆನ್ನೂರಿನಿಂದ ಆಗಮಿಸಿದ್ದ ಪಾಲಕರು, ಸಂಬಂಧಿಕರು ಶವವನ್ನು ನೋಡಲಾಗದೇ ಕುಸಿದು ಬಿದ್ದರು. ಎಸ್ಸೆಸ್ಸೆಲ್ಸಿ ಬಳಿಕವೇ ವಾಹನ ಓಡಿಸುತ್ತಿದ್ದ ಮಲ್ಲಿಕಾರ್ಜುನ. ಈಚೆಗೆ ಕ್ಲೀನರ್‌ ಕೆಲಸ ಸಹ ಮಾಡುತ್ತಿದ್ದ. ಮುಂದೊಂದು ದಿನ ತಾನೇ ಹೊಸ ಗಾಡಿ ಖರೀದಿಸುವ ಕನಸು ಕಟ್ಟಿಕೊಂಡಿದ್ದ ಎಂದು ಮೃತನ ಸಹೋದರರು ಕಣ್ಣೀರು ಸುರಿಸುತ್ತಿದ್ದ ಘಟನೆ ಮನ ಕಲಕುವಂತಿತ್ತು. ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ಜನರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಸೆಕ್ಯೂರ್‌ ಆಸ್ಪತ್ರೆಯಲ್ಲಿಇಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್‌ ವೈದ್ಯರೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ