ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಪಡೆದ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌!

ಪ್ಲಾಸ್ಮಾ ಥೆರಪಿ ಪಡೆದು ಗುಣಮುಖಗೊಂಡ ಹುಬ್ಬಳ್ಳಿಯ ವ್ಯಕ್ತಿಯನ್ನು ಕಿಮ್ಸ್‌ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದಂತಾಗಿದೆ.

Vijaya Karnataka Web 17 Jun 2020, 11:41 pm
ಹುಬ್ಬಳ್ಳಿ: ಪ್ಲಾಸ್ಮಾ ಥೆರಪಿ ಪಡೆದು ಗುಣಮುಖಗೊಂಡ ಹುಬ್ಬಳ್ಳಿಯ ವ್ಯಕ್ತಿಯನ್ನು ಕಿಮ್ಸ್‌ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದಂತಾಗಿದೆ. ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ವ್ಯಕ್ತಿಗೆ ಹೂ ಗುಚ್ಛ ನೀಡಿ ಬೀಳ್ಕೊಟ್ಟರು.
Vijaya Karnataka Web corona


ಗುಣಮುಖಗೊಂಡ 65 ವರ್ಷದ ವ್ಯಕ್ತಿ ಸ್ಥಳೀಯ ವಿನಾಯಕ ನಗರದವರು. ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆಯಲ್ಲಿಕೊರೊನಾ ವೈರಸ್‌ ತಗುಲಿತ್ತು. ತೀವ್ರ ಉಸಿರಾಟ, ಕೆಮ್ಮ, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ ಇವರನ್ನು ಮೇ 27ರಂದು ಕಿಮ್ಸ್‌ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿತ್ತು.

ಚಿಂತಾಜನಕ ಸ್ಥಿತಿಯಲ್ಲಿದ್ದ ಇವರಿಗೆ ಆಕ್ಸಿಜನ್‌ ಒದಗಿಸಲಾಗಿತ್ತು. ಪಿ-363 ವ್ಯಕ್ತಿಯಿಂದ ಪಡೆಯಲಾಗಿದ್ದ ಪ್ಲಾಸ್ಮಾವನ್ನು ಮೇ 29ರಂದು ಸೋಂಕಿತ ವ್ಯಕ್ತಿಗೆ ನೀಡಲಾಗಿತ್ತು. ಇದಾದ ಎರಡನೇ ದಿನದಲ್ಲಿಸೋಂಕಿತ ವ್ಯಕ್ತಿಯ ಆರೋಗ್ಯದಲ್ಲಿಚೇತರಿಕೆ ಕಂಡು ಬಂದಿತ್ತು.

ಚೀನಾ ವಿರುದ್ಧ ಮಾರುಕಟ್ಟೆಯನ್ನೇ ಅಸ್ತ್ರವಾಗಿಸಲು ಭಾರತದ ಸಿದ್ಧತೆ!

ಆಕ್ಸಿಜನ್‌ ರಹಿತ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಕಳೆದ ವಾರವೇ ಸಂಪೂರ್ಣ ಗುಣಮುಖಗೊಂಡಿದ್ದರು. ಪ್ಲಾಸ್ಮಾ ಥೆರಪಿ ನೀಡಿದ್ದರಿಂದ ವ್ಯಕ್ತಿಯ ಮೇಲೆ ಇನ್ನಷ್ಟು ದಿನ ನಿಗಾ ವಹಿಸಿ ಬಳಿಕ ಬಿಡುಗಡೆಗೊಳಿಸುವ ಕುರಿತಾಗಿ ವೈದ್ಯರು ನಿರ್ಧರಿಸಿದ್ದರು. ಇದೀಗ ಆರೋಗ್ಯ ಪೂರ್ಣ ಸುಧಾರಣೆಯಾಗಿದ್ದರಿಂದ ಬಿಡುಗಡೆಗೊಳಿಸಲಾಯಿತು. ಅವರಿಗೆ 28 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಸಚಿವ ಜಗದೀಶ ಶೆಟ್ಟರ್‌ ಕಿಮ್ಸ್‌ ವೈದ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೀಳ್ಕೊಡುವ ವೇಳೆ ಜಿಲ್ಲಾಧಿಕಾರಿ ದೀಪಾ ಎಂ., ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಸಿಎಒ ರಾಜಶ್ರೀ ಜೈನಾಪುರ, ಅಧೀಕ್ಷಕ ಡಾ.ಅರುಣಕುಮಾರ, ಉಪ ಅಧೀಕ್ಷಕ ಡಾ.ಎಸ್‌.ವೈ. ಮುಲ್ಕಿ ಪಾಟೀಲ, ಡಾ. ದ್ಯಾಬೇರಿ ಸೇರಿದಂತೆ ಹಲವು ವೈದ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ