ಆ್ಯಪ್ನಗರ

ಸಿದ್ಧಾರೂಢ ಮಠದಿಂದ ಆಹಾರ ವಿತರಣೆ

ಹುಬ್ಬಳ್ಳಿ: ಸಿದ್ಧಾರೂಢ ಮಠದ ವತಿಯಿಂದ ನಗರದ ಕೆಲವು ಪ್ರದೇಶಗಳಲ್ಲಿಅನ್ನಪ್ರಸಾದ ವ್ಯವಸ್ಥೆ ಆರಂಭಿಸಲಾಗಿದೆ. ಲಾಕ್‌ಡೌನ್‌ ವೇಳೆ ಬಹಳಷ್ಟು ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು, ದೂರದ ಊರಿನಿಂದ ಕೆಲಸ ಅರಸಿ ಬಂದವರಿಗೆ ಆಹಾರ ಸಿಗುತ್ತಿಲ್ಲ.

Vijaya Karnataka 4 Apr 2020, 5:00 am
ಹುಬ್ಬಳ್ಳಿ: ಸಿದ್ಧಾರೂಢ ಮಠದ ವತಿಯಿಂದ ನಗರದ ಕೆಲವು ಪ್ರದೇಶಗಳಲ್ಲಿಅನ್ನಪ್ರಸಾದ ವ್ಯವಸ್ಥೆ ಆರಂಭಿಸಲಾಗಿದೆ. ಲಾಕ್‌ಡೌನ್‌ ವೇಳೆ ಬಹಳಷ್ಟು ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು, ದೂರದ ಊರಿನಿಂದ ಕೆಲಸ ಅರಸಿ ಬಂದವರಿಗೆ ಆಹಾರ ಸಿಗುತ್ತಿಲ್ಲ. ಇದನ್ನು ಅರಿತ ಶ್ರೀಮಠದ ಆಡಳಿತಾಧಿಕಾರಿ ಮತ್ತು ಪ್ರಧಾನ ಜಿಲ್ಲಾಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಅವರ ಸೂಚನೆ ಮೇರೆಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದ ಪ್ರದೇಶಗಳಲ್ಲಿಅನ್ನ ಪ್ರಸಾದ ಮಾಡಲಾಗುವುದು ಎಂದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮೀಟಿ ಚೇರಮನ್‌ ದೇವೇಂದ್ರಪ್ಪ ಮಾಳಗಿ, ಗೌರವ ಕಾಯದರ್ಶಿ ಸಿದ್ರಾಮಪ್ಪ ಕೋಳೂರ ಅವರು ತಿಳಿಸಿದ್ದಾರೆ.
Vijaya Karnataka Web distribution of food from the ready math
ಸಿದ್ಧಾರೂಢ ಮಠದಿಂದ ಆಹಾರ ವಿತರಣೆ


ಅನ್ನಪ್ರಸಾದ ನಡೆಯುವ ಸ್ಥಳ: ನೇಕಾರ ನಗರದ ಹೊರ ವಲಯದ ಗೊಲ್ಲರ ಕಾಲೊನಿ, ದುರ್ಗಾ ಪರಮೇಶ್ವರಿ ಕಾಲೊನಿ, ತಿಮ್ಮಸಾಗರ ಕಾಲೊನಿ, ಬಂಕಾಪೂರ ಚೌಕ್‌ ಸೇರಿದಂತೆ ಹಲವೆಡೆ ಸಂಜೆ ಅನ್ನ ಪ್ರಸಾದ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ