ಆ್ಯಪ್ನಗರ

ಮಕ್ಕಳ ಭವಿಷ್ಯ ಹಾಳುಗೆಡವಬೇಡಿ

ಧಾರವಾಡ:ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸ ಹಾಗೂ ಕಾರ್ಖಾನೆ ಹಾಗೂ ಹೋಟೆಲ್‌ಗಳಲ್ಲಿ

ವಿಕ ಸುದ್ದಿಲೋಕ 13 Jun 2017, 5:00 am

ಧಾರವಾಡ:ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸ ಹಾಗೂ ಕಾರ್ಖಾನೆ ಹಾಗೂ ಹೋಟೆಲ್‌ಗಳಲ್ಲಿ ಬಳಸಿಕೊಳ್ಳಬಾರದು. ಈ ಮೂಲಕ ಬಾಲಕಾರ್ಮಿಕ ಪದ್ಧತಿ ಪ್ರೋತ್ಸಾಹಿಸುವ ತಂದೆ ತಾಯಿ ಹಾಗೂ ದುಡಿಸಿಕೊಳ್ಳುವ ಮಾಲೀಕರಿಗೆ ಕಾನೂನಾತ್ಮಕ ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು.

ನಗರದ ಭಾರತ ಹೈಸ್ಕೂಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಿಂದ ಬಳಲುವ ಜನ ತಮ್ಮ ಆರ್ಥಿಕ ಸಂಕಷ್ಟಗಳ ಕಾರಣದಿಂದ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಡಿ ಕೆಲಸಕ್ಕೆ ಕಳುಹಿಸುವದು ಸರಿಯಲ್ಲ. ಇದರಿಂದ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಾರೆ.ಅವರ ಭವಿಷ್ಯ ಹಾಳಾಗುತ್ತದೆ. ಸರಕಾರ ಕಡ್ಡಾಯ ಶಿಕ್ಷ ಣ ಹಕ್ಕು ಕಾಯ್ದೆಯ ಮೂಲಕ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷ ಣ, ಪಠ್ಯಪುಸ್ತಕ, ಸಮವಸ್ತ್ರ,ಬೈಸಿಕಲ್‌,ಹಾಸ್ಟೇಲ್‌ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸಮಾಜದ ಪ್ರಜ್ಞಾವಂತ ನಾಗರಿಕರೂ ಸಹ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿದು ದುಡಿಯುವ ಸ್ಥಳಗಳಲ್ಲಿ ಕಂಡು ಬಂದರೆ ತಕ್ಷ ಣ , ಉಚಿತವಾಗಿರುವ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಸಂಪರ್ಕಿಸಿ ,ಮಾಹಿತಿ ನೀಡಬೇಕು. ಮಕ್ಕಳು ಶಿಕ್ಷ ಣ ಪಡೆಯಲು ಪ್ರೇರೆಪಿಸುವ ಕಾರ್ಯ ಮಾಡಬೇಕು ಎಂದರು.

ಜಿ.ಪಂ.ಸಿಇಓ ಸ್ನೇಹಲ್‌ ರಾಯಮಾನೆ ಮಾತನಾಡಿ,ಮಕ್ಕಳು ಶಿಸ್ತಿನ ಜೀವನ ನಡೆಸಲು ಶಿಕ್ಷ ಣ ಅವಶ್ಯ.ಬಸ್‌ನಿಲ್ದಾಣ ,ಮಾರುಕಟ್ಟೆ ಮತ್ತಿತರ ಸ್ಥಳಗಳಲ್ಲಿ ಮಕ್ಕಳು ದುಡಿಯುವ ಅಥವಾ ಭಿಕ್ಷಾಟನೆಯಲ್ಲಿ ತೊಡಗಿದ್ದು ಕಂಡು ಬಂದರೆ ಸಾರ್ವಜನಿಕರು ಪೊಲೀಸ್‌ ಕಂಟ್ರೋಲ್‌ ರೂಮ್‌ ಸಂಖ್ಯೆ 100 ಅಥವಾ ಮಕ್ಕಳ ಸಹಾಯವಾಣಿ 1098 ಗೆ ಉಚಿತ ಕರೆ ಮಾಡಿ,ತಿಳಿಸಬೇಕು ಎಂದರು.

ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ,ಸಹಾಯಕ ಕಾರ್ಮಿಕ ಆಯುಕ್ತ ರೇವಣ್ಣ,ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಬಿ.ಎಸ್‌.ಸಂಗಟಿ ಮಾತನಾಡಿದರು.

ಇದೇ ಸಂದರ್ಭ ಕುಂದಗೋಳ ತಾಲ್ಲೂಕು ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಸದಸ್ಯರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ನಾಟಕ ಅಭಿನಯಿಸಿದರು.

ಭಾರತ ಹೈಸ್ಕೂಲ್‌ ಶಿಕ್ಷ ಣ ಸಂಸ್ಥೆಯ ಪದಾಧಿಕಾರಿಗಳಾದ ವಿಜಯ ಭೋಸ್ಲೆ,ಮಂಜುನಾಥ ಕದಂ,ನವೀನ ಕದಂ ಮತ್ತಿತರರು ಇದ್ದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌.ಚಿನ್ನಣ್ಣವರ್‌ ಸ್ವಾಗತಿಸಿದರು. ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಆರ್‌.ಬಿ.ಪತ್ತಾರ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಸರಸ್ವತಿ ಬುದ್ಧಿಸ್ಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ