ಆ್ಯಪ್ನಗರ

ಸತತ 3ನೇ ಬಾರಿ ಕಿಮ್ಸ್‌ ಆಡಳಿತ ಮಂಡಳಿಗೆ ಡಾ.ಸತ್ತೂರ ನೇಮಕ

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ಯ ಆಡಳಿತ ಮಂಡಳಿಗೆ ಸರಕಾರದ ನಾಮ ನಿರ್ದೇಶನ ಸದಸ್ಯರಾಗಿ ಖ್ಯಾತ ವೈದ್ಯ ಡಾ. ಜಿ.ಬಿ.ಸತ್ತೂರ ನೇಮಕಗೊಂಡಿದ್ದಾರೆ.

Vijaya Karnataka 29 Sep 2020, 5:00 am
ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ಯ ಆಡಳಿತ ಮಂಡಳಿಗೆ ಸರಕಾರದ ನಾಮ ನಿರ್ದೇಶನ ಸದಸ್ಯರಾಗಿ ಖ್ಯಾತ ವೈದ್ಯ ಡಾ. ಜಿ.ಬಿ.ಸತ್ತೂರ ನೇಮಕಗೊಂಡಿದ್ದಾರೆ.
Vijaya Karnataka Web 28 SATTUR083802
ಡಾ. ಸತ್ತೂರ


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ.ಡಿ.ಸಿ.ರಾವ್‌ ಅವಾರ್ಡ್‌ ಪುರಸ್ಕೃತ ಹಾಗೂ ಅಸೋಸಿಯೇಶನ್‌ ಆಫ್‌ ಫಿಜಿಸಿಯನ್ಸ್‌ ಆಫ್‌ ಇಂಡಿಯಾದ ಚೇರಮನ್‌ ಡಾ. ಸತ್ತೂರ ಅವರು ಸತತ ಮೂರನೇ ಬಾರಿಗೆ ನಾಮ ನಿರ್ದೇಶನ ಸದಸ್ಯರಾಗಿರುವುದು ವಿಶೇಷ.

ದಾವಣಗೆರೆ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್‌ನ ಸಹ ಪ್ರಾಧ್ಯಾಪಕಿ ಡಾ.ದೀಪಶ್ರೀ ಕಂಬಳಿಮಠ ಅವರ ಸ್ಥಾನಕ್ಕೆ ಡಾ. ಸತ್ತೂರ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ