ಆ್ಯಪ್ನಗರ

ಸುಂದರ ಬಡಾವಣೆ ರೂಪಿಸುವ ಕನಸು ಶೀಘ್ರ ನನಸು: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ : ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸುಂದರ ಬಡಾವಣೆಗಳನ್ನಾಗಿ ರೂಪಿಸಿ ಕ್ಷೇತ್ರದ ಎಲ್ಲಕಾಲೊನಿಗಳನ್ನು ಮಾದರಿಯನ್ನಾಗಿ ನಿರ್ಮಿಸುವ ಕನಸು ಶೀಘ್ರ ನನಸಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Vijaya Karnataka 25 Nov 2019, 5:00 am
ಹುಬ್ಬಳ್ಳಿ : ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸುಂದರ ಬಡಾವಣೆಗಳನ್ನಾಗಿ ರೂಪಿಸಿ ಕ್ಷೇತ್ರದ ಎಲ್ಲಕಾಲೊನಿಗಳನ್ನು ಮಾದರಿಯನ್ನಾಗಿ ನಿರ್ಮಿಸುವ ಕನಸು ಶೀಘ್ರ ನನಸಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
Vijaya Karnataka Web dreaming of a beautiful project prasad abbayya
ಸುಂದರ ಬಡಾವಣೆ ರೂಪಿಸುವ ಕನಸು ಶೀಘ್ರ ನನಸು: ಪ್ರಸಾದ ಅಬ್ಬಯ್ಯ


ವಿವಿಧ ಯೋಜನೆಗಳಡಿ ಮಂಜೂರಾದ ಅನುದಾನದಲ್ಲಿಮಂಟೂರು ರಸ್ತೆಯ ಗಣೇಶ ಕಾಲೊನಿ ಹಾಗೂ ಶಾ ಕಾಲೊನಿಯಲ್ಲಿಕೈಗೊಂಡಿರುವ 2 ಕೋಟಿ ವೆಚ್ಚದ ಕಾಂಕ್ರಿಟ್‌ ರಸ್ತೆ ಮತ್ತು 76 ಲಕ್ಷ ರೂ. ವೆಚ್ಚದಲ್ಲಿಬಾಸೆಲ್‌ ಮಿಶನ್‌ ಚರ್ಚ್ ಬಳಿಯ ಒಳಚರಂಡಿ ಕೊಳವೆ ಅಳವಡಿಕೆ ಸೇರಿದಂತೆ ಒಟ್ಟು 2.76 ಕೋಟಿ ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆಲವೇ ವರ್ಷಗಳ ಹಿಂದೆ ಕಾಲಿಡಲೂ ಆಗದಂಥ ಪರಿಸ್ಥಿತಿಯಿದ್ದ ಮಂಟೂರು ರಸ್ತೆ ಭಾಗದ ಪ್ರದೇಶಗಳಲ್ಲಿಗ ವಾಹನಗಳು ಸಲೀಸಾಗಿ ಓಡಾಡುವಂತಾಗಿದೆ. ಎಲ್ಲೆಡೆ ಕಾಂಕ್ರಿಟ್‌ ರಸ್ತೆ, ಗಟಾರ, ಫುಟಪಾತ್‌, ಕುಡಿಯುವ ನೀರಿನ ವ್ಯವಸ್ಥೆ, ಯುಜಿಡಿ, ಬೀದಿದೀಪ, ಸ್ಮಶಾನ ಅಭಿವೃದ್ಧಿ, ಕಿರುಸೇತುವೆ ನಿರ್ಮಾಣ ಸೇರಿದಂತೆ ಹತ್ತಾರು ಕೋಟಿ ವೆಚ್ಚದಲ್ಲಿವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದೇ ವೇಳೆ ಮಿಶನ್‌ ಕಾಂಪೌಂಡ್‌ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿಶಾ ಕಾಲನಿ, ಗುಂಜಾಳ ಪ್ಲಾಟ್‌ನ ನೀರಿನ ಸಮಸ್ಯೆ ನಿವಾರಣೆಗಾಗಿ ಬೋರವೆಲ್‌ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಡಾ. ಎ. ಗಿಡಿಯಾನ್‌, ಕ್ರಿಸ್ಟಾನಂದ ಕೆ., ಶರೀಫ್‌ ಅದವಾನಿ, ಯಲ್ಲಪ್ಪ ಮೆಹರವಾಡೆ, ರಾಜಾರಾವ್‌, ಸುಬ್ರಮಣೀ, ಅಬ್ದುಲ್‌ ಅಜೀಂ ಚಿತ್ತೇವಾಲೆ, ನಜೀರ್‌ ಚಿತ್ತೇವಾಲೆ, ವಿ. ರಮೇಶ, ಹನುಮಂತ ಅನಂತಪುರ, ಸುಬ್ಬಾರಾವ್‌, ಮೋಹನ, ಅನ್ನಾ ಆಂಟೋನಿ, ಪಿ. ಜೋಬ್‌, ಎಂ.ಪಿ. ಅಣ್ಣಿಗೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ