ಆ್ಯಪ್ನಗರ

ದೂದ್‌ಸಾಗರ್‌ಬಳಿ ರೈಲ್ವೆಹಳಿ ಮೇಲೆ ಗುಡ್ಡಕುಸಿತ :ಗೋವಾ-ಕರ್ನಾಟಕ ರೈಲು ಸಂಚಾರ ಬಂದ್‌

ಹುಬ್ಬಳ್ಳಿ: ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕರ್ನಾಟಕ-ಗೋವಾ ಗಡಿಯ ದೂಧ್‌ ಸಾಗರದಲ್ಲಿ ಮಂಗಳವಾರ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಬಿದ್ದ ಪರಿಣಾಮ ರೈಲು ಸಂಚಾರ ಬಂದ್‌ ಆಗಿದೆ. ಕ್ಯಾಸಲ್‌ರಾಕ್‌ ಹಾಗೂ ಕೋಲಮ್‌ ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಯ ಮೇಲೆ ಬಂಡೆಗಲ್ಲು ಹಾಗೂ ಮಣ್ಣು ಕುಸಿದು ಬಿದ್ದಿದೆ. ರೈಲ್ವೆ ಸಿಬ್ಬಂದಿ ಇದನ್ನು ಗಮನಿಸಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಗೋವಾದಿಂದ ರಾಜ್ಯಕ್ಕೆ ಬರುತ್ತಿದ್ದ

Vijaya Karnataka 22 Aug 2018, 5:00 am
ಹುಬ್ಬಳ್ಳಿ: ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕರ್ನಾಟಕ-ಗೋವಾ ಗಡಿಯ ದೂಧ್‌ ಸಾಗರದಲ್ಲಿ ಮಂಗಳವಾರ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಬಿದ್ದ ಪರಿಣಾಮ ರೈಲು ಸಂಚಾರ ಬಂದ್‌ ಆಗಿದೆ. ಕ್ಯಾಸಲ್‌ರಾಕ್‌ ಹಾಗೂ ಕೋಲಮ್‌ ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಯ ಮೇಲೆ ಬಂಡೆಗಲ್ಲು ಹಾಗೂ ಮಣ್ಣು ಕುಸಿದು ಬಿದ್ದಿದೆ. ರೈಲ್ವೆ ಸಿಬ್ಬಂದಿ ಇದನ್ನು ಗಮನಿಸಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಗೋವಾದಿಂದ ರಾಜ್ಯಕ್ಕೆ ಬರುತ್ತಿದ್ದ ರೈಲಿನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರೈಲ್ವೆ ಹಳಿಯ ಮೇಲೆ ಬಿದ್ದಿರುವ ಕಲ್ಲು-ಮಣ್ಣು ರಾಶಿಯನ್ನು ತೆರವುಗೊಳಿಸಾಗುತ್ತಿದೆ. ತೆರವು ಕಾರ್ಯ ಮುಗಿಯುವವರೆಗೆ ಈ ರ್ಮಾದಿಂದ ಗೋವಾ-ಕರ್ನಾಟಕ ರೈಲ್ವೆ ಸಂಚಾರ ಬಂದ್‌ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web dudesagarbhali railroad hit by goa karnataka train traffic junction
ದೂದ್‌ಸಾಗರ್‌ಬಳಿ ರೈಲ್ವೆಹಳಿ ಮೇಲೆ ಗುಡ್ಡಕುಸಿತ :ಗೋವಾ-ಕರ್ನಾಟಕ ರೈಲು ಸಂಚಾರ ಬಂದ್‌


ಶಿರಸಿ ವರದಿ :

ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮಂಗಳವಾರ ಬೆಳಗ್ಗೆಯಿಂದ ಘಟ್ಟದ ಮೇಲಿನ ನಾನಾ ತಾಲೂಕುಗಳಲ್ಲಿ ಆಗಾಗ ರಭಸದಿಂದ ಸುರಿಯತೊಡಗಿದೆ. ನಗರ ಮಧ್ಯದ ಶಂಕರಹೊಂಡ ಕೆರೆಯ ಮೂಲೆಯ ಕೆಲವು ಭಾಗ ಮಂಗಳವಾರ ಕುಸಿದಿದೆ. ಅನೇಕ ದಿನಗಳಿಂದ ಒಂದೇ ಸಮನೆ ಸುರಿದ ವರ್ಷಾಧಾರೆಗೆ ಈ ಭಾಗದಲ್ಲಿ ವ್ಯಾಪಕವಾಗಿರುವ ಅಡಕೆ ತೋಟಗಳಿಗೆ ಮಾರಕವಾಗಿ ಪರಿಣಮಿಸಿದೆ. ಹಲವೆಡೆಗಳ ತೋಟಗಳಲ್ಲಿ ಅಡಕೆ ಕಾಯಿಗಳು ಕೊಳೆತು ಉದುರುತ್ತಿದ್ದು ಈಗ ಮತ್ತಷ್ಟು ಕಡೆಗಳಲ್ಲಿ ಕೊಳೆ ರೋಗ ವ್ಯಾಪಿಸುವ ಆತಂಕ ಅಳಲು ಬೆಳೆಗಾರರು ತೋಡಿಕೊಳ್ಳುತ್ತಿದ್ದಾರೆ.

ಸಿದ್ದಾಪುರ ವರದಿ:

ಎರಡು ತಿಂಗಳಿಂದ ತಾಲೂಕಿನಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು ಇಲ್ಲಿಯವರೆಗೆ 3519ಮಿಮೀ ಮಳೆಯಾಗಿದೆ. ವಾಡಿಕೆಯ ಮಳೆ 2257ಮಿಮೀ ಆಗಬೇಕಿದ್ದು ಸುಮಾರು 1300ಮಿಮೀ ಹೆಚ್ಚುವರಿ ಮಳೆಯಾಗಿದೆ. ಇದರಿಂದ ಪ್ರಮುಖ ಬೆಳೆಗಳಾದ ಅಡಕೆ ಮತ್ತು ಭತ್ತ ನಾಶವಾಗುವ ಹಂತ ತಲುಪಿವೆ.

ಕವಂಚೂರು ಗ್ರಾಪಂ ವ್ಯಾಪ್ತಿಯ ನೆಜ್ಜೂರು, ಅಕ್ಕಂಜಿ,ಅರೆಂದೂರು, ಶಿರಳಗಿ ಗ್ರಾಪಂ ವ್ಯಾಪ್ತಿಯ ಮುಗದೂರು,ಬಿಕ್ಕಳಸೆ ಭಾಗಗಳಲ್ಲಿ 186 ಎಕರೆ ಹಾಗೂ ಮನಮನೆ ಗ್ರಾಪಂ ವ್ಯಾಪ್ತಿಯ ಮನಮನೆ, ಮಳಲವಳ್ಳಿ, ಕಲ್ಲೂರು, ಹಸ್ವಂತೆ, ಹಲಗೇರಿ ಗ್ರಾಪಂ ವ್ಯಾಪ್ತಿಯ ಹಲಗೇರಿ ನಾಗರಬಾವಿ ಪ್ರದೇಶದಲ್ಲಿ ಸುಮಾರು 232 ಎಕರೆ ಭತ್ತದ ಬೆಳೆ ನೀರು ಪಾಲಾಗಿದೆ.

ಮತ್ತೆ ಜಿಟಿಜಿಟಿ :

ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಹಾಗೂ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಸ್ವಲ್ಪಮಟ್ಟಿಗೆ ಬಿಡುವು ನೀಡಿದ್ದ ಮಳೆ ಮಂಗಳವಾರ ಮತ್ತೆ ಜಿಟಿಜಿಟಿ ಸುರಿಯಿತು. ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಭಾಗಗಳಲ್ಲಿ ಹಾಗೂ ಹಾವೇರಿ ಜಿಲ್ಲೆಯ ಕೆಲವೆಡೆ ತುಂತುರು ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ