ಆ್ಯಪ್ನಗರ

ಸಾಕ್ಷರತೆಯಿಂದ ಆರ್ಥಿಕ ಸಾಧನೆ ಸಾಧ್ಯ

ಧಾರವಾಡ : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಆರ್ಥಿಕ ಸಾಕ್ಷ ರತೆ ಹೊಂದಿದ್ದರೆ ಹಣಕಾಸಿನ ವಿಚಾರದಲ್ಲಿ ಮೆಲುಗೈ ಸಾಧಿಸಲು ಸಾಧ್ಯ ಎಂದು ನಿಟ್‌ ಫೌಂಡೇಶನ್‌ನ ಯೋಜನಾ ಸಂಯೋಜಕ ಸುನೀಲಕುಮಾರ ಹೇಳಿದರು.

Vijaya Karnataka 29 May 2019, 5:00 am
ಧಾರವಾಡ : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಆರ್ಥಿಕ ಸಾಕ್ಷ ರತೆ ಹೊಂದಿದ್ದರೆ ಹಣಕಾಸಿನ ವಿಚಾರದಲ್ಲಿ ಮೆಲುಗೈ ಸಾಧಿಸಲು ಸಾಧ್ಯ ಎಂದು ನಿಟ್‌ ಫೌಂಡೇಶನ್‌ನ ಯೋಜನಾ ಸಂಯೋಜಕ ಸುನೀಲಕುಮಾರ ಹೇಳಿದರು.
Vijaya Karnataka Web DRW-28MAILAR02
ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ನಡೆದ ಆರ್ಥಿಕ ಸಾಕ್ಷ ರತೆ ವಿಷಯದ ಕುರಿತು ನಿಟ್‌ ಫೌಂಡೇಶನ್‌ನ ಯೋಜನಾ ಸಂಯೋಜಕ ಸುನೀಲಕುಮಾರ ಉಪನ್ಯಾಸ ನೀಡಿದರು.


ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ನಡೆದ ಆರ್ಥಿಕ ಸಾಕ್ಷ ರತೆ ವಿಷಯದ ಮೇಲೆ ಅತಿಥಿ ಉಪನ್ಯಾಸ ನೀಡಿ ಅವರು ಸೋಮವಾರ ಮಾತನಾಡಿದರು.

ವಿದ್ಯಾರ್ಥಿಗಳು ಆರ್ಥಿಕ ದಿನಚರಿಯನ್ನು ರೂಢಿಯಲ್ಲಿ ಇರಿಸಿಕೊಂಡರೆ ಯಾವುದೇ ಹಣಕಾಸಿನ ತೊಂದರೆ ಆಗದ ರೀತಿಯಲ್ಲಿ ತಮ್ಮ ಜೀವನ ಸಾಗಿಸಬಹುದು. ಪ್ರತಿ ವಿದ್ಯಾರ್ಥಿಗಳು ತಮ್ಮ ಆದಾಯ, ಖರ್ಚು, ವೆಚ್ಚಗಳ ಕುರಿತು ಸರಿಯಾದ ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದರು.

ಅಲ್ಲದೇ ನಾಗರಿಕರಿಗೆ ಬ್ಯಾಂಕ್‌ಗಳಲ್ಲಿ ಸಿಗುವ ಸೌಲಭ್ಯಗಳು, ನಗದು ರಹಿತ ಮತ್ತು ಸಹಿತ ವ್ಯವಹಾರಗಳು, ಅಂಚೆ ಇಲಾಖೆಯ ನೂತನ ಯೋಜನೆಗಳು ಹಾಗೂ ವಿವಿಧ ರೀತಿಯ ವಿಮಾ ಯೋಜನೆಗಳ ಮಾಹಿತಿಯನ್ನು ನೀಡಿದರು.

ಇದೇ ವೇಳೆ ಕಾರ್ಯಾಗಾರದಲ್ಲಿ ಐಟಿಐ ನಂತರ ಸ್ವ-ಉದ್ಯೋಗಕ್ಕೆ ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲ ಸೌಲಭ್ಯ ಮತ್ತು ಮರು ಪಾವತಿಗೆ ಸಿಗುವ ರಿಯಾಯತಿ ಹಾಗೂ ವಿವಿಧ ವಿಚಾರಗಳ ಮಾಹಿತಿ ನೀಡಿದರು.

ಮಹೇಶ ಬಡಿಗೇರ, ಸಿದ್ಧಲಿಂಗಯ್ಯಾ ಹಿರೇಮಠ, ವಿನಾಯಕ ಗವಳಿ, ಶೋಭಾ ಕಮ್ಮಾರ, ವಿಶಾಲಕುಮಾರ ಭಜಂತ್ರಿ ಸೇರಿದಂತೆ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಶೋಕ ಜಿಗಳೂರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ