ಆ್ಯಪ್ನಗರ

ಮಕ್ಕಳ ಕ್ರಿಯಾಶೀಲತೆ ಪ್ರೋತ್ಸಾಹಿಸಿ: ಕೆ.ಎಚ್‌.ನಾಯಕ

ಧಾರವಾಡ : ಮಕ್ಕಳು ನಕ್ಷ ತ್ರಗಳು ಇದ್ದ ಹಾಗೆ, ಸದಾ ಚಲನಶೀಲರಾಗಿರುತ್ತಾರೆ. ಆ ಚಲನಶೀಲತೆಗೆ ಒಂದು ಲಯವನ್ನು ಒದಗಿಸುವ ಕಾರ್ಯ ಶಾಲೆಗಳಲ್ಲಿ ನಡೆಯಬೇಕಿದೆ ಎಂದು ಮಕ್ಕಳ ಸಾಹಿತಿ ಕೆ.ಎಚ್‌. ನಾಯಕ ಹೇಳಿದರು.

Vijaya Karnataka 13 Dec 2018, 5:00 am
ಧಾರವಾಡ : ಮಕ್ಕಳು ನಕ್ಷ ತ್ರಗಳು ಇದ್ದ ಹಾಗೆ, ಸದಾ ಚಲನಶೀಲರಾಗಿರುತ್ತಾರೆ. ಆ ಚಲನಶೀಲತೆಗೆ ಒಂದು ಲಯವನ್ನು ಒದಗಿಸುವ ಕಾರ್ಯ ಶಾಲೆಗಳಲ್ಲಿ ನಡೆಯಬೇಕಿದೆ ಎಂದು ಮಕ್ಕಳ ಸಾಹಿತಿ ಕೆ.ಎಚ್‌. ನಾಯಕ ಹೇಳಿದರು.
Vijaya Karnataka Web encourage childrens activation kh nayak
ಮಕ್ಕಳ ಕ್ರಿಯಾಶೀಲತೆ ಪ್ರೋತ್ಸಾಹಿಸಿ: ಕೆ.ಎಚ್‌.ನಾಯಕ


ನಗರದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ವಿಭಾಗ ಮಟ್ಟದ 3ನೇ ದಿನದ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಮಕ್ಕಳಲ್ಲಿ ಬದುಕಿನ ಅನುಭವ ತುಂಬಿಕೊಂಡಿರುತ್ತದೆ. ಹೀಗಾಗಿ ನಾಟಕಗಳನ್ನು ಅದೂ ಮಕ್ಕಳ ಸಮಸ್ಯೆಯ ನಾಟಕಗಳನ್ನು ಲೀಲಾಜಾಲವಾಗಿ ಮಾಡಬಲ್ಲರು. ಅವರು ಕಷ್ಟಗಳನ್ನು, ಸಮಸ್ಸೆಗಳನ್ನು ನಿತ್ಯ ಎದುರಿಸುತ್ತಲೇ ಶಾಲೆಗೆ ಹೋಗುವರು. ಅಲ್ಲದೇ ಗ್ರಾಮೀಣ ಮಕ್ಕಳಲ್ಲಿ ಹೊಂದಾನಿಕೆ ಮನೋಭಾವನೆ ಜೊತೆಗೆ ಒಟ್ಟಿಗೆ ನಡೆಯುವ ಗುಣ ಸಹಜವಾಗಿ ಬೆಳೆದು ಬಂದಿರುತ್ತದೆ. ಹೀಗಾಗಿ ಅಂಕಗಳಿಸುವಲ್ಲಿ ಹಿಂದಿದ್ದರೆನಿಸಿದರೂ ಬದುಕು ಹೇಗೆ ಸಾಗಿಸಬೇಕು ಎಂಬ ಅರಿವು ಅವರು ಹೆಚ್ಚು ಹೊಂದಿರುತ್ತಾರೆ ಎಂದರು.

ಹುಬ್ಬಳ್ಳಿ ತಾಲೂಕ ಸುತಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನವಲೂರಿನ ಸರಕಾರಿ ಪ್ರೌಢ ಶಾಲೆಯೆ ಹತ್ತನೇ ತರಗತಿ ವಿದ್ಯಾರ್ಥಿನಿ ಬಿಂದು ಮತ್ತಿಕಟ್ಟಿ ಬರೆದ 'ಸಮಸ್ಯೆಗಳನ್ನು ಮೆಟ್ಟಿ ನಿಂತ ಬಾಲೆ ನಾಟಕವನ್ನು ಧಾರವಾಡದ ಗಣಕರ ರಂಗ ಸಂಸ್ಥೆ, ವಿಜೇಂದ್ರ ದೊಡಮನಿ ನಿರ್ದೇಶನದಲ್ಲಿ ಪ್ರದರ್ಶಿಸಿದರು. ನಂತರ ಹೆಣ್ಣೊಂದು ಕಲಿತರೆ ನಾಟಕ, ಬಾಗಲಕೋಟಿಯ ಸೂಳಿಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆಡಿದರು. ನವಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಬರೆದ ನೀರಜಾ ಜಗದಾಳ ಈ ನಾಟಕವನ್ನು ಅಮ್ಮಿನಗಡದ ಸಿರಿಗನ್ನಡ ಕಲೆ, ಸಾಹಿತ್ಯ ಸಮಸ್ಕೃತಿ ಪ್ರತಿಷ್ಠಾನ ನಾಟಕ ತಂಡ ಶ್ರೀಹರಿ ಧೂಪದ ನಿರ್ದೇಶನದಲ್ಲಿ ಪ್ರದರ್ಶನ ನೀಡಿತು.

ವಿಷಯ ಜೇವೂರ, ಡಾ. ಆನಂದ ಪಾಟೀಲ, ವಿ.ಎನ್‌. ಕೀರ್ತಿವತಿ, ಶಂಕರ ಹಲಗತ್ತಿ, ಎಂ.ಎಂ. ಚಿಕ್ಕಮಠ, ಸುನಂದ ನಿಂಬನಗೌಡರ, ಡಾ. ಎ. ಎಲ್‌. ದೇಸಾಯಿ, ಸನ್ಮತಿ ಅಂಗಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ