ಆ್ಯಪ್ನಗರ

ವಿಷಯ ಜ್ಞಾನ ವೃದ್ಧಿಗೆ ಜ್ಞಾನತರಂಗ ಪೂರಕ

ಧಾರವಾಡ : ವಿದ್ಯಾರ್ಥಿಗಳನ್ನು ಶ್ರೇಷ್ಠ ನಾಗರಿಕರನ್ನಾಗಿಸಿ ಅವರಲ್ಲಿ ಉತ್ತಮ ಚಾರಿತ್ರ್ಯ, ಮಾನಸಿಕ ಸಾಮರ್ಥ್ಯ‌, ಬುದ್ಧಿಶಕ್ತಿ ಬೆಳೆಸಿ ಜ್ಞಾನಾರ್ಜನೆಗೆ ಇಂಬು ನೀಡಲು ಜ್ಞಾನ ತರಂಗ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

Vijaya Karnataka 14 Aug 2019, 5:00 am
ಧಾರವಾಡ : ವಿದ್ಯಾರ್ಥಿಗಳನ್ನು ಶ್ರೇಷ್ಠ ನಾಗರಿಕರನ್ನಾಗಿಸಿ ಅವರಲ್ಲಿ ಉತ್ತಮ ಚಾರಿತ್ರ್ಯ, ಮಾನಸಿಕ ಸಾಮರ್ಥ್ಯ‌, ಬುದ್ಧಿಶಕ್ತಿ ಬೆಳೆಸಿ ಜ್ಞಾನಾರ್ಜನೆಗೆ ಇಂಬು ನೀಡಲು ಜ್ಞಾನ ತರಂಗ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
Vijaya Karnataka Web DRW-13MAILAR09


ನಗರದ ಆಕಾಶವಾಣಿ ಕೇಂದ್ರದಲ್ಲಿ ಡಾ.ಎಚ್‌.ಎಫ್‌. ಕಟ್ಟಿಮನಿ ಪ್ರೌಢ ಶಿಕ್ಷ ಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳÜ ಫಲಿತಾಂಶ ಸುಧಾರಣೆಗಾಗಿ ಜ್ಞಾನ ತರಂಗ ಶೀರ್ಷಿಕೆಯಡಿ ರೇಡಿಯೋ ಸರಣಿಪಾಠಗಳ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಪ್ರೌಢ ಶಾಲಾ ಮಕ್ಕಳ ವಿಷಯ ಜ್ಞಾನದ ಆಳ ಅಧ್ಯಯನವನ್ನು ಹೆಚ್ಚು ಸಮೃದ್ಧಗೊಳಿಸಲು ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ ಅವರ ಕಲಿವಿನ ಫಲ ಸಂವರ್ಧನೆಗೆ ಈ ಕಾರ್ಯಕ್ರಮ ಇಂಬು ನೀಡಲಿದೆ ಎಂದರು.

ಶಾಲಾ ಸಂದರ್ಶನಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣಿತ, ಇಂಗ್ಲೀಷ್‌, ವಿಜ್ಞಾನ ವಿಷಯಗಳಲ್ಲಿ ಸುಧಾರಣೆಯಾಗಬೇಕಿರುವುದ್ದನ್ನು ಗುರುತಿಸಲಾಗಿದ್ದು, ಸುಧಾರಣೆಯ ಕೊರತೆ ನಿಗಿಸಲು ಆಕಾಶವಾಣಿ ಮೂಲಕ ಪಾಠಗಳ ಪ್ರಸಾರಕ್ಕೆ ಈಗ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 35 ಪರಿಣಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕ್ಲಿಷ್ಟಕರ ಪರಿಕಲ್ಪನೆಗಳನ್ನು ತಿಳಿಸಲಾಗುತ್ತಿದ್ದು, ಪರಿಹಾರವನ್ನು ಸ್ಥಳದಲ್ಲಿಯೇ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಣ ನಿರ್ದೇಶಕ ಡಾ. ಬಿ.ಕೆ.ಎಸ್‌. ವರ್ಧನ್‌ ಮಾತನಾಡಿ, ಈಗಾಗಲೇ ಇಲಾಖೆಯು ಗುರು ಪ್ರೇರಣಾ ತರಬೇತಿಯ ಮೂಲಕ 20,000 ಶಿಕ್ಷ ಕರನ್ನು ಸಿದ್ಧಗೊಳಿಸಿದೆ. ಜ್ಞಾನ ತರಂಗÜ ರೇಡಿಯೋ ಸರಣಿ ಪಾಠಗಳ ಪ್ರಸಾರದ ಮೂಲಕ ವಿದ್ಯಾರ್ಥಿಗಳು ಜ್ಞಾನದ ಉನ್ನತಿಯನ್ನು ಸಾಧಿಸಬೇಕಾಗಿದೆ ಎಂದರು.

ಜ್ಞಾನ ತರಂಗ ರೇಡಿಯೋ ಪಾಠಗಳ ಮೊದಲ ಆವೃತ್ತಿಯನ್ನು ನಡೆಸಿಕೊಟ್ಟ ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಸತೀಶ ಪರ್ವತಿಕರ ಮಾತನಾಡಿ, ಜ್ಞಾನ ತರಂಗ ಪ್ರತಿ ಮಂಗಳವಾರ ಮಧ್ಯಾಹ್ನ 2.35 ರಿಂದ 3.05ರ ವರೆಗೆ ಮೂಡಿ ಬರಲಿದೆ. ವಿದ್ಯಾರ್ಥಿ-ಶಿಕ್ಷ ಕರು ಆಲಿಸಿ, ದೂರವಾಣಿ ಮೂಲಕ ತಮ್ಮ ವ್ಯಾಸಂಗದ ಸಂದೇಹಗಳನ್ನು ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆಯ ಆಯುಕ್ತರ ಕಚೇರಿಯ ಪಿಆರ್‌ಓ ಉಮೇಶ ಬಮ್ಮಕ್ಕನವರ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ವಿಷಯ ಪರಿವೀಕ್ಷ ಕ ಪೂರ್ಣಿಮಾ ಮುಕ್ಕುಂದಿ, ಸಂಜಯ ಮಾಳಿ, ಸಂಜೀವಕುಮಾರ ಭೂಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ, ರಾಜು ಭೂಶೆಟ್ಟಿ, ಗಿರೀಶ ಪಾಟೀಲ ಸ್ಭೆರಿದಂತೆ ಇತರರು ಇದ್ದರು.

ಪ್ರೌಢ ಶಾಲೆಗಳಲ್ಲಿ ರೇಡಿಯೋ ಖರೀದಿ ಕಡ್ಡಾಯ
ಎಲ್ಲ ಪ್ರೌಢ ಶಾಲೆಗಳ ಮುಖ್ಯಾಧ್ಯಾಪಕರು ಕಡ್ಡಾಯವಾಗಿ ಶಾಲೆಯಲ್ಲಿರುವ ಸಂಚಿತ ನಿಧಿಯಿಂದ ರೇಡಿಯೋ ಖರೀದಿಸಿ ವಿದ್ಯಾರ್ಥಿಗಳಿಗೆ ತಪ್ಪದೇ ಎಲ್ಲ ಪಾಠಗಳನ್ನು ಕೇಳಿಸಬೇಕು. ಪ್ರತಿ ಪಾಠದ ಧ್ವನಿ ಮುದ್ರಿಕೆಯನ್ನು ಕಚೇರಿಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ತಮ್ಮ ಕಲಿಕಾ ಸಮಸ್ಯೆಗಳನ್ನು ಅಂಚೆ ಕಾರ್ಡದಲ್ಲಿ ನಮೂದಿಸಿ ಧಾರವಾಡ ಆಕಾಶವಾಣಿಗೆ ಕಳಿಸಿದಲ್ಲಿ ಅವುಗಳಿಗೆ ನುರಿತ ಶಿಕ್ಷ ಕರು ಈ ರೇಡಿಯೋ ಪಾಠಗಳಲ್ಲಿ ಉತ್ತರಿಸುತ್ತಾರೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ