ಆ್ಯಪ್ನಗರ

ಪರಿಸರ ರಕ್ಷ ಣೆ ನಮ್ಮೆಲ್ಲರ ಆದ್ಯ ಕರ್ತವ್ಯ

ಧಾರವಾಡ : ನಗರದ ಫ್ರೆಂಡ್ಸ್‌ ಸೋಶಿಯಲ್‌ ಕ್ಲಬ್‌, ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಹಾಗೂ ಜೀವನ ಶಾಲಾ ವತಿಯಿಂದ ಧಾರವಾಡ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ವೃಕ್ಷಾ ಬಂಧನ ಅಭಿಯಾನಕ್ಕೆ ಜಿಲ್ಲಾಧಿಕಾರಿ ದೀಪಾ ಎಂ. ಗುರುವಾರ ಚಾಲನೆ ನೀಡಿದರು.

Vijaya Karnataka 17 Aug 2019, 5:00 am
ಧಾರವಾಡ : ನಗರದ ಫ್ರೆಂಡ್ಸ್‌ ಸೋಶಿಯಲ್‌ ಕ್ಲಬ್‌, ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಹಾಗೂ ಜೀವನ ಶಾಲಾ ವತಿಯಿಂದ ಧಾರವಾಡ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ವೃಕ್ಷಾ ಬಂಧನ ಅಭಿಯಾನಕ್ಕೆ ಜಿಲ್ಲಾಧಿಕಾರಿ ದೀಪಾ ಎಂ. ಗುರುವಾರ ಚಾಲನೆ ನೀಡಿದರು.
Vijaya Karnataka Web DRW-15NIJAGUNI4
ಧಾರವಾಡ ಮಿನಿ ವಿಧಾನಸೌಧದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವೃಕ್ಷಾ ಬಂಧನ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಂ.ದೀಪಾ ಚಾಲನೆ ನೀಡಿದರು.


ಪರಿಸರ ರಕ್ಷ ಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ರಕ್ಷಾ ಬಂಧನ. ಇದನ್ನು ವೃಕ್ಷಾ ಬಂಧನ ರೂಪದಲ್ಲಿ ಆಚರಣೆ ಮಾಡುತ್ತಿರುವುದು ಅಭಿನಂದನೀಯ. ತಾವೆಲ್ಲ ಗಿಡಗಳನ್ನು ಬೆಳೆಸಿ, ಅವುಗಳ ರಕ್ಷ ಣೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿನಾಯಕ ಪಾಲನಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಪ್ರೊಬೇಷನರಿ ಐ.ಎ.ಎಸ್‌. ಅಧಿಕಾರಿ ಆಕೃತಿ ಬನ್ಸಾಲ್‌, ಮಲ್ಲಿಕಾರ್ಜುನ ಚಿಕ್ಕಮಠ ಮುಂತಾದವರು ವೃಕ್ಷಾ ಬಂಧನ ಮಾಡುವ ಮೂಲಕ ಪರಿಸರ ರಕ್ಷ ಣೆಯ ಅಭಿಯಾನದಲ್ಲಿ ಪಾಲ್ಗೊಂಡರು.

ಫ್ರೆಂಡ್ಸ್‌ ಸೋಶಿಯಲ್‌ ಕ್ಲಬ್‌ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ವಿನೋದ ಕುಸುಗಲ್‌, ಪ್ರಕಾಶ ಬಾಳಿಕಾಯಿ, ಜೀವನ ಮುಳ್ಳೊಳ್ಳಿ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಅನಿಲ ಪುರಾಣಿಕ, ಡಿಮ್ಹಾನ್ಸ್‌ನ ಅಶೋಕಕುಮಾರ ಕೋರಿ, ಉಮೇಶ ಕಾರಬಾರಿ, ನವೀನ ಸಾಸ್ವಿಹಳ್ಳಿ, ಅಮೃತ ತೋಡಕರ, ತಾಜು, ಸಂದೇಶ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ