ಆ್ಯಪ್ನಗರ

ಕಲಘಟಗಿಯಲ್ಲಿ ಬೃಹದಾಕಾರದ ಕಾಮಣ್ಣನ ಪ್ರತಿಷ್ಠಾಪನೆ

ಕಲಘಟಗಿ : ಪಟ್ಟಣದ ಶ್ರೀ ಗುರು ಕೆತೇಶ್ವರ ಯುವಕ ಮಂಡಳ ಹಾಗೂ ಮೇದಾರ ಸಮಾಜದ ಹಿರಿಯರು ಹಾಗೂ ಯುವಕರು ಸೇರಿ ಬಿದರಿನಿಂದ ಬೃಹದಾಕಾರದ ಕಾಮಣ್ಣನನ್ನು ನಿರ್ಮಿಸಿ ಮೇದಾರ ಓಣಿಯ ಕರಿಯಮ್ಮ ದೇವಿ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗಿದೆ.

Vijaya Karnataka 21 Mar 2019, 5:00 am
ಕಲಘಟಗಿ : ಪಟ್ಟಣದ ಶ್ರೀ ಗುರು ಕೆತೇಶ್ವರ ಯುವಕ ಮಂಡಳ ಹಾಗೂ ಮೇದಾರ ಸಮಾಜದ ಹಿರಿಯರು ಹಾಗೂ ಯುವಕರು ಸೇರಿ ಬಿದರಿನಿಂದ ಬೃಹದಾಕಾರದ ಕಾಮಣ್ಣನನ್ನು ನಿರ್ಮಿಸಿ ಮೇದಾರ ಓಣಿಯ ಕರಿಯಮ್ಮ ದೇವಿ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗಿದೆ.
Vijaya Karnataka Web DRW-29 KLG 1
ಕಲಘಟಗಿ ಪಟ್ಟಣದ ಮೇದಾರ ಓಣಿಯಲ್ಲಿ ಬೃಹದಾಕಾರದ ಕಾಮಣ್ಣನ ಪ್ರತಿಷ್ಠಾಪನೆ ಮಾಡಿರುವುದು.


ಹಲವು ವರ್ಷಗಳಿಂದ ಬೃಹದಾಕಾರದ ಕಾಮಣ್ಣನನ್ನು ನಿರ್ಮಿಸುವುದು ಮೇದಾರ ಓಣಿಯಲ್ಲಿ ಸಾಂಪ್ರದಾಯಿಕವಾಗಿ ನಡದು ಬಂದಿದೆ. ಬೃಹದಾಕಾರ ದೇಹಸಿರಿ ಹೊಂದಿರುವ ಈ ಸುಂದರನಿಗೆ ಈಗ 56 ವರ್ಷ. ಆದರೂ ಇತ ಇಂದಿಗೂ ಹೆಸರಿಗೆ ತಕ್ಕ ಹಾಗೇ ಮನ್ಮಥನೇ.

56 ವರ್ಷದಿಂದ ಇಲ್ಲಿನ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಾಂಪ್ರದಾಯ ಮುಂದುವರೆಸಿದ್ದು, ಕಾಮನ ಮುಖವು ಕಾಷ್ಟ (ಕಟ್ಟಿಗೆ)ಯಲ್ಲಿ ತಯಾರಿಸಲಾಗಿದೆ. ಗುಣಮಟ್ಟದ ಬಣ್ಣ ಬಳೆಯಲಾಗುತ್ತದೆ. ಉಳಿದ ದೇಹವನ್ನು ಬಿದಿರು ಬಳಸಿ ತಯಾರಿಸಲಾಗಿದೆ.

ತಮ್ಮ ಹಿರಿಯರು ನಡೆಸಿಕೊಂಡು ಬಂದ ಆಚರಣೆಯನ್ನು ತಲೆ ತಲಾಂತರಗಳಿಗೆ ಕೊಂಡೋಯ್ಯುವ ನಿಟ್ಟಿನಲ್ಲಿ ಸ್ಥಳೀಯ ಶ್ರೀ ಗುರು ಕೆತೇಶ್ವರ ಯುವಕ ಮಂಡಳ ಹಾಗೂ ಮೇದಾರ ಸಮಾಜದ ಹಿರಿಯರು ಹಾಗೂ ಯುವಕರು ಪ್ರತಿ ವರ್ಷ ಕಾಮ ದಹನಕ್ಕೆ ಬೃಹದಾಕಾರದ ಮನ್ಮಥನನ್ನು ರಚಿಸುವ ಮೂಲಕ ಸಂಪ್ರದಾಯ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ.

ಮನ್ಮಥನ ದರ್ಶನಕ್ಕೆ ಪಟ್ಟಣದ ಚಿಣ್ಣರು, ಮಹಿಳೆಯರು ಆಗಮಿಸುವುದು ವಿಶೇಷವಾಗಿದೆ. ಕಾಮಣ್ಣನಿಗೆ ಸಕ್ಕರೆ ಹಾರ ಸಮರ್ಪಿಸಲಾಗುತ್ತದೆ. ಐದು ದಿನದ ಪ್ರದರ್ಶನದ ನಂತರ ಭಕ್ತರು ಹೋಳಿ ದಿನ ಕಾಮಣ್ಣನ ಪ್ರತಿಮೆ ದಹಿಸಿ ಯುವಕರು ಬಣ್ಣದಾಟದಲ್ಲಿ ತೊಡಗುವುದು ಇಲ್ಲಿಯ ವಾಡಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ