ಆ್ಯಪ್ನಗರ

ಎಲ್ಲರೂ ಕಡ್ಡಾಯವಾಗಿ ಮತಹಾಕಿ: ಡಿಸಿ

ಧಾರವಾಡ : ಮತದಾನ ನಮ್ಮ ಸಂವಿಧಾನ ನೀಡಿರುವ ಅಮೂಲ್ಯ ಹಕ್ಕು. ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಂ ದೀಪಾ ಹೇಳಿದರು.

Vijaya Karnataka 28 Feb 2019, 5:00 am
ಧಾರವಾಡ : ಮತದಾನ ನಮ್ಮ ಸಂವಿಧಾನ ನೀಡಿರುವ ಅಮೂಲ್ಯ ಹಕ್ಕು. ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಂ ದೀಪಾ ಹೇಳಿದರು.
Vijaya Karnataka Web DRW-26MAILAR08
ಧಾರವಾಡ ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗೆ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ದೀಪಾ ಮಾತನಾಡಿದರು.


ನಗರದ ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಇವಿಎಂ ಮತಯಂತ್ರ ಹಾಗೂ ವಿವಿ. ಪ್ಯಾಟ್‌ ಪ್ರಾತ್ಯಕ್ಷಿಕೆ ತೋರಿಸುವ ಮೂಲಕ ಮತದಾರರ ಜಾಗೃತಿ ಅಭಿಯಾನÜ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಬ್ಯಾಲೆಟ್‌ ಪೇಪರ್‌ ಬದಲಿಗೆ ಇವಿಎಂ ಮತಯಂತ್ರಗಳನ್ನು ಮತದಾನಕ್ಕಾಗಿ ಬಳಸಲಾಗುತ್ತಿದ್ದು, ಮತದಾನದ ಖಾತ್ರಿಗಾಗಿ ಹಾಗೂ ಇಚ್ಛಿಸಿದ ಅಭ್ಯರ್ಥಿಗೆ ಮತ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್‌ ಬಳಸಲಾಗುತ್ತಿದೆ. ಹೀಗಾಗಿ ಮತದಾರರು ಯಾವುದೇ ರೀತಿಯ ಗೊಂದಲಗಳಿಲ್ಲದೇ ಮತದಾರರು ನಿರಾಳವಾಗಿ ಮತ ಚಲಾಯಿಸಬಹುದು ಎಂದರು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಉಚಿತ ದೂ.1950ಗೆ ಸಂಪರ್ಕಿಸಿ ಎಂದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಕೆ.ಭೂತೆ ಮಾತನಾಡಿ, ಮತದಾನ ನಮ್ಮ ಹೆಮ್ಮೆಯ ಸಂಕೇತ. ಬದಲಾವಣೆಗೆ ಇರುವ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ. ಪ್ರತಿಯೊಬ್ಬರು ತಪ್ಪದೇ ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ಸ್ವೀಪ್‌ ನೋಡೆಲ್‌ ಅಧಿಕಾರಿ ಡಾ. ಬಿ.ಸಿ. ಸತೀಶ ಅವರು ಮತಯಂತ್ರ ಮತ್ತು ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ತೋರಿಸುವ ಮೂಲಕ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ, ಮತದಾರರ ಪಟ್ಟಿ, ಮತದಾನ ಇತ್ಯಾದಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ ಎಸ್‌.ವಿ., ಹೊಸಮನಿ ಸಿದ್ದಪ್ಪ ಎಚ್‌, ಸಾವಿತ್ರಿ ಎಸ್‌. ಕುಜ್ಜಿ, ಮಮತಾ ಡಿ., ಸುಜಾತಾ, ವಿಜಯಲಕ್ಷ್ಮಿ ಗಾನಾಪುರ, ಕುರಣಿಕಾಂತ ಧಾಕು, ಪರಿಮಳ ತುಬಾಕಿ, ತರಬೇತಿ ನ್ಯಾಯಾಧೀಶ ಆಕರ್ಷ ಎಂ., ಲತಾಶ್ರೀ ಬಿ.ವಿ, ಶೃತಿ ಶ್ರೀ ಎಸ್‌., ಜಿಲ್ಲಾ ನ್ಯಾಯಾಲಯದ ಪ್ರಭಾರಿ ಮುಖ್ಯ ಆಡಳಿತಾಧಿಕಾರಿ ಎಸ್‌.ಜೆ. ಜಾಧವ, ಎಂ.ಸಿ. ಹಿರೇಗೌಡರ ಸೇರಿದಂತೆ ಇತರರು ಇದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌.ಎಸ್‌. ಚಿಣ್ಣನ್ನವರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ