ಆ್ಯಪ್ನಗರ

ನಿರೀಕ್ಷೆ ಹೆಚ್ಚಿಸಿದ ನೇರ ರೈಲು ಮಾರ್ಗ

​ಹುಬ್ಬಳ್ಳಿ: ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಪೂರಕವಾಗಿ ಅಂತಿಮ ಸ್ಥಳ ಸಮೀಕ್ಷೆ ಮತ್ತು ವಿಸ್ತೃತ ವರದಿ ತಯಾರಿಸಲು ರೈಲ್ವೆ ಸಚಿವಾಲಯ ಸಿದ್ಧತೆ ಆರಂಭಿಸಿದ್ದು, 2020-21ರ ಬಜೆಟ್‌ದಲ್ಲಿಈ ಯೋಜನೆ ಸೇರ್ಪಡೆಯಾಗುವ ನಿರೀಕ್ಷೆ ಹೆಚ್ಚಿಸಿದೆ.

Vijaya Karnataka 13 Oct 2019, 5:00 am
ಕಾಶಪ್ಪ ಕರದಿನ
Vijaya Karnataka Web DHARWAD-BELGAUM-RAIL-LINE054526
ಧಾರವಾಡ-ಬೆಳಗಾವಿ ರೇಲ್‌ ಲೈನ್‌

ಹುಬ್ಬಳ್ಳಿ: ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಪೂರಕವಾಗಿ ಅಂತಿಮ ಸ್ಥಳ ಸಮೀಕ್ಷೆ ಮತ್ತು ವಿಸ್ತೃತ ವರದಿ ತಯಾರಿಸಲು ರೈಲ್ವೆ ಸಚಿವಾಲಯ ಸಿದ್ಧತೆ ಆರಂಭಿಸಿದ್ದು, 2020-21ರ ಬಜೆಟ್‌ದಲ್ಲಿಈ ಯೋಜನೆ ಸೇರ್ಪಡೆಯಾಗುವ ನಿರೀಕ್ಷೆ ಹೆಚ್ಚಿಸಿದೆ.

ಇದರೊಂದಿಗೆ ದಶಕಗಳ ಬೇಡಿಕೆ ಈಡೇರುವ ಕನಸಿಗೆ ಇಂಬು ನೀಡಿದಂತಾಗಿದೆ. ರೈಲ್ವೆ ಸಚಿವ ಸುರೇಶ ಅಂಗಡಿ ಕೂಡ ಮುತುವರ್ಜಿ ವಹಿಸಿದ್ದರಿಂದ ಯೋಜನೆಗೆ ಹೆಚ್ಚು ವೇಗ ಸಿಗಲಿದೆ ಎಂಬ ಆಶಾವಾದ ಜನರಲ್ಲಿದೆ.

ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ)ಲಿಮಿಟೆಡ್‌(ಕೆ-ರೈಡ್‌) ವತಿಯಿಂದ ಅಂತಿಮ ಸ್ಥಳ ಸಮೀಕ್ಷೆ(ಎಫ್‌ಎಸ್‌ಎಲ್‌) ಮತ್ತು ಸಮಗ್ರ ಯೋಜನಾ ವರದಿ(ಡಿಟೇಲ್‌ ಪ್ರಾಜೆಕ್ಟ್ ರಿಪೋರ್ಟ್‌-ಡಿಪಿಆರ್‌) ತಯಾರಿಸಲು ಅ.12ರಂದು ಟೆಂಡರ್‌ ಆಹ್ವಾನಿಸಲಾಗಿದೆ.

ಇದೇ ತಿಂಗಳು 25ರಂದೇ ಟೆಂಡರ್‌ ತೆರೆಯಲಾಗುತ್ತಿದ್ದು, ಸಮೀಕ್ಷೆ ವರದಿ ಮತ್ತು ಡಿಪಿಆರ್‌ ಅನ್ನು ಮುಂದಿನ ಮೂರು ತಿಂಗಳೊಳಗೆ ಸಲ್ಲಿಸುವಂತೆ ಇಲಾಖೆ ನಿರ್ದೇಶನ ನೀಡಿದೆ. ಇದಕ್ಕಾಗಿ 50.77 ಲಕ್ಷ ರೂ. ನಿಗದಿಪಡಿಸಿದೆ. ಎಲ್ಲವೂ ಅಂದುಕೊಂಡಂತೆ ಸಮೀಕ್ಷೆ ಮತ್ತು ಡಿಪಿಆರ್‌ ಸಲ್ಲಿಕೆಯಾದರೆ ವರ್ಷದೊಳಗೆ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆಗಳಿವೆ.

31 ಕಿ.ಮೀ. ಕಡಿಮೆ:
ಈ ಯೋಜನೆ ಜಾರಿಗೊಂಡರೆ ಧಾರವಾಡ-ಕಿತ್ತೂರ- ಹಿರೇಬಾಗೇವಾಡಿ-ಬೆಳಗಾವಿ(89 ಕಿ.ಮೀ.)ಗೆ ನೇರ ರೈಲು ಮಾರ್ಗ ನಿರ್ಮಾಣವಾಗಲಿದೆ. ಸದ್ಯ ಧಾರವಾಡ-ಅಳ್ನಾವರ-ಲೊಂಡಾ, ಖಾನಾಪುರ ಮಾರ್ಗವಾಗಿ ಬೆಳಗಾವಿ(120 ಕಿ.ಮೀ.) ತಲುಪಲು ಬರೋಬ್ಬರಿ ನಾಲ್ಕು ಗಂಟೆ ಬೇಕಾಗುತ್ತದೆ. ನೇರ ರೈಲು ಮಾರ್ಗದಿಂದ 31 ಕಿ.ಮೀ. ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಅಲ್ಲದೇ ಕೇವಲ ಒಂದೂವರೆ-ಎರಡು ತಾಸಿನಲ್ಲಿಬೆಳಗಾವಿ ತಲುಪಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ನೌಕರರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಹಾನಗರಗಳ ನಡುವಣ ಪಟ್ಟಣಗಳ ಅಭಿವೃದ್ಧಿಗೂ ಪೂರಕವಾಗಲಿದೆ. ಅಲ್ಲದೇ ಹುಬ್ಬಳ್ಳಿ ಸೇರಿ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ರೈಲು ಸಂಚಾರದ ಸಮಯ ಕಡಿಮೆಯಾಗಲಿದೆ.

''ಈ ಮೊದಲು 2013-14ನೇ ಸಾಲಿನಲ್ಲಿಬೆಳಗಾವಿ-ಧಾರವಾಡ ಮಾರ್ಗ ಸಮೀಕ್ಷೆ ನಡೆಸಲಾಗಿತ್ತು. ಆರು ವರ್ಷಗಳ ಕಳೆದಿರುವುದರಿಂದ ಭೂಸ್ವಾಧೀನ ಮತ್ತು ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುತ್ತದೆ. ಹಾಗಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುತ್ತಿದೆ'' ಎಂದು ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ