ಆ್ಯಪ್ನಗರ

ದೇವರ ನಾಮಸ್ಮರಣೆಯಿಂದ ಕಷ್ಟ ದೂರ

ಕುಂದಗೋಳ : ಮನುಷ್ಯನು ಜೀವಿತಾವಧಿಯಲ್ಲಿ ದೇವರ ನಾಮಸ್ಮರಣೆ ಮಾಡದಿದ್ದರೆ ಮಾನವನಾಗಲು ಸಾಧ್ಯವಿಲ್ಲ ಎಂದು ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ತಾಲೂಕಿನ ಬೆನಕಹಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ದೇವರ ನಾಮಸ್ಮರಣೆ ವಿಷಯ ಕುರಿತು ಮಾತನಾಡಿದರು.

Vijaya Karnataka 3 Apr 2019, 5:00 am
ಕುಂದಗೋಳ : ಮನುಷ್ಯನು ಜೀವಿತಾವಧಿಯಲ್ಲಿ ದೇವರ ನಾಮಸ್ಮರಣೆ ಮಾಡದಿದ್ದರೆ ಮಾನವನಾಗಲು ಸಾಧ್ಯವಿಲ್ಲ ಎಂದು ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ತಾಲೂಕಿನ ಬೆನಕಹಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ದೇವರ ನಾಮಸ್ಮರಣೆ ವಿಷಯ ಕುರಿತು ಮಾತನಾಡಿದರು.
Vijaya Karnataka Web DRW-2KND4
ಕುಂದಗೋಳ ತಾಲೂಕಿನ ಬೆನಕಹಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಪ್ರವಚನ ನೀಡಿದರು.

ನಿತ್ಯದ ಕಾಯಕದಲ್ಲೇ ದೇವರ ನಾಮಸ್ಮರಣೆ ಮಾಡಿದರೆ ಅದೇ ಕಾಯಕದಲ್ಲಿ ನಾವು ಸಾಕ್ಷಾತ್‌ ದೇವನನ್ನು ಕಾಣಬಹುದಾಗಿದೆ. ಎಷ್ಟೇ ಕಷ್ಟ ಬಂದರೂ ನಾಮಸ್ಮರಣೆಯಲ್ಲಿ ಸಾಕಷ್ಟು ಶಕ್ತಿ ಇದ್ದು, ಕಷ್ಟ-ನಷ್ಟಗಳನ್ನು ದೂರಗೊಳಿಸುತ್ತದೆ. ಕೇವಲ ಆಡಂಬರದ ಪೂಜೆಯಾಗದೆ ಶ್ರದ್ಧೆ, ಭಕ್ತಿ, ನಿಷ್ಠೆಗಳಿಂದ ಪೂಜೆ-ಸ್ಮರಣೆಗಳು ಒಟ್ಟಿಗೆ ನಡೆದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಕರಿಕಟ್ಟಿ ಗುರುನಾಥ ಶಾಸ್ತ್ರಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ