ಆ್ಯಪ್ನಗರ

ರೈತ ಸಾವು: ಮುಂದುವರಿದ ಧರಣಿ

ಹುಬ್ಬಳ್ಳಿ : ಇಲ್ಲಿನ ಕಿಮ್ಸ್‌ನಲ್ಲಿ ದಾಖಲಾಗಿದ್ದ ರೈತನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಗುರುವಾರ ರೈತ ಸೇನಾ ರಾಜ್ಯ ಸಮಿತಿ ಸದಸ್ಯರು ಕಿಮ್ಸ್‌ ಆವರಣದಲ್ಲಿ ನಡೆಸಿದ ಧರಣಿ ಶುಕ್ರವಾರವೂ ಮುಂದುವರೆಯಿತು.

Vijaya Karnataka 5 Jan 2019, 5:00 am
ಹುಬ್ಬಳ್ಳಿ : ಇಲ್ಲಿನ ಕಿಮ್ಸ್‌ನಲ್ಲಿ ದಾಖಲಾಗಿದ್ದ ರೈತನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಗುರುವಾರ ರೈತ ಸೇನಾ ರಾಜ್ಯ ಸಮಿತಿ ಸದಸ್ಯರು ಕಿಮ್ಸ್‌ ಆವರಣದಲ್ಲಿ ನಡೆಸಿದ ಧರಣಿ ಶುಕ್ರವಾರವೂ ಮುಂದುವರೆಯಿತು.
Vijaya Karnataka Web farmers death continued saturn
ರೈತ ಸಾವು: ಮುಂದುವರಿದ ಧರಣಿ

ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಮೌನೇಶಪ್ಪ ಮುಳ್ಳೂರ (58) ಮೃತಪಟ್ಟ ರೈತ. ರೈತ ಸೇನಾ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಮತ್ತಿತರರು ಪ್ರತಿಭಟನೆ ಮುಂದುವರಿಸಿದ್ದು, ಮೃತನ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವವರೆಗೂ ಕಿಮ್ಸ್‌ ಎದುರು ಅಹೋ ರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಧರಣಿಯಲ್ಲಿ ಮೃತ ರೈತನ ಪತ್ನಿ ಶಂಕ್ರವ್ವ, ಕುಮಾರ ಹಕಾರಿ, ಗುರು ರಾಯನಗೌಡ್ರ, ಗಂಗಾಧರ ಧರಿಯಣ್ಣವರ, ಸುಭಾಷ ಗಿರಿಯಣ್ಣವರ, ಫಕ್ಕೀರಪ್ಪ ಜೋಗಣ್ಣವರ, ಪರಪ್ಪ ಗಾಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ