ಆ್ಯಪ್ನಗರ

ಧಾರವಾಡ ಮೃತ್ಯುಂಜಯ ಕಾಲೇಜ್‌ನಲ್ಲಿ ಜಾನಪದ ಹಬ್ಬ

ಧಾರವಾಡ : ಜನರ ಬಾಯಿಯಿಂದ ಬಂದಂತ ನುಡಿಗಳೇ ಜಾನಪದವಾಗಿದ್ದು ಪ್ರಾರಂಭಕಾಲದಲ್ಲಿ ತಿರಸ್ಕಾರ ಮಾಡಲಾಗಿತ್ತು, ಅದನ್ನು ಸಾಹಿತ್ಯವೆಂದು ಪರಿಗಣಿಸಲೇ ಇಲ್ಲ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ಹೇಳಿದರು.

Vijaya Karnataka 27 Mar 2019, 5:00 am
ಧಾರವಾಡ : ಜನರ ಬಾಯಿಯಿಂದ ಬಂದಂತ ನುಡಿಗಳೇ ಜಾನಪದವಾಗಿದ್ದು ಪ್ರಾರಂಭಕಾಲದಲ್ಲಿ ತಿರಸ್ಕಾರ ಮಾಡಲಾಗಿತ್ತು, ಅದನ್ನು ಸಾಹಿತ್ಯವೆಂದು ಪರಿಗಣಿಸಲೇ ಇಲ್ಲ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ಹೇಳಿದರು.
Vijaya Karnataka Web folk festival at dharwad muttiahunjaya college
ಧಾರವಾಡ ಮೃತ್ಯುಂಜಯ ಕಾಲೇಜ್‌ನಲ್ಲಿ ಜಾನಪದ ಹಬ್ಬ


ನಗರದ ಕೆ.ಎಲ್‌.ಇ ಸಂಸ್ಥೆಯ ಮೃತ್ಯುಂಜಯ ಮಹಾವಿದ್ಯಾಲಯ ಮತ್ತು ಜಾನಪದ ಪರಿಷತ್ತು ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಜನಪದೀಯರ ಕೊಡುಗೆ ಅಪಾರವಾಗಿದೆ. ಜಾನಪದವನ್ನು ಅಕ್ಷ ರಗಳಲ್ಲಿ ಹಿಡಿದಿಟ್ಟು ಮುಂದಿನ ಪೀಳಿಗೆಗೆ ಅವು ಸಿಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಡಾ.ಅನುರಾಧಾ ಮಾತನಾಡಿ, ಮೃತ್ಯುಂಜಯ ಶ್ರೀಗಳ ಆಶೀರ್ವಾದ ಈ ಮಹಾವಿದ್ಯಾಲಯದ ಮೇಲೆ ಇದ್ದು ಇಲ್ಲಿ ಸಂಸ್ಕ್ರತಿಯ ಕೊರತೆಯೇ ಇಲ್ಲ, ಈ ಜಾನಪದ ಹಬ್ಬ ಸಂಸ್ಕ್ರತಿಯ ಪ್ರತೀಕವಾಗಿದೆ ಎಂದರು. ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿದರು.

ನಂತರ ವಿವಿಧ ಕಡೆಗಳಿಂದ ಬಂದ ಕಲಾ ತಂಡಗಳಿಂದ ಮತ್ತು ವಿದ್ಯಾರ್ಥಿಗಳಿಂದ ಜಾನಪದ ಹಾಡು ಮತ್ತು ನೃತ್ಯ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಲಾ ತಂಡಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಹಳ್ಳಿಯ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು.

ಪ್ರೊ.ವಿಶ್ವನಾಥ ಜಿ, ಪ್ರೊ.ಆಶಾ ನಿಡವಣಿ, ಪ್ರೊ.ಶ್ರೀದೇವಿ ಸಂಗೊಳ್ಳಿ, ಪ್ರೊ.ನೀಲಕ್ಕ ಪಾಟೀಲ, ಪ್ರೊ.ಶಿಲ್ಪಾ ಕೊಂಗಿ, ಪ್ರೊ.ಶಿಲ್ಪಾ ದಾನಪ್ಪನವರ, ಪ್ರೊ.ಶಶಾಂಕ, ಪ್ರೊ ವಿದ್ಯಾಬಟ್‌, ಪ್ರೊ.ಸೌಮ್ಯ, ಎಸ್‌.ಸಿ.ಅಕ್ಕಿ , ಪ್ರೊ.ವನಜಾ, ಪ್ರೊ.ಬಿ.ಡಿ.ಮಠಪತಿ, ಪ್ರೊ.ಶಣ್ಮೂಖ, ಪ್ರೊ.ಶಿವಲೀಲಾ ಬೆಟಗೇರಿ, ಪ್ರೊ.ಶೈಲಜಾ, .ಆರ್‌.ಡಿ.ಬಿರಾದಾರ, ವನಿತಾ ವಾಲಿ ಉಪಸ್ಥಿತರಿದ್ದರು.

ಚಿತ್ರಾ ಗೌಡಾ ಪ್ರಾರ್ಥಿಸಿದರು, ಡಾ.ಕೆ.ಎಫ್‌.ಪವಾರ ಸ್ವಾಗತಿಸಿದರು. ಜಾನಪದ ಹಬ್ಬದ ಸಂಚಾಲಕ ಡಾ. ತಾರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಆನಂದ ಜಕ್ಕಣ್ಣವರ ನಿರೂಪಿಸಿದರು. ಪ್ರೊ.ಬಿ.ಎ.ಬೆಣ್ಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ