ಆ್ಯಪ್ನಗರ

ಜನಪದ ಸಂಗೀತ ಕಾರ್ಯಕ್ರಮ

ಹುಬ್ಬಳ್ಳಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮದ ನಿಮಿತ್ತ ಸೆ.18 ರಿಂದ 27 ರವರೆಗೆ ಸರಕಾರದ ಜನಪರ ಯೋಜನೆಗಳು ಹಾಗೂ ಪರಿಸರ ಜಾಗೃತಿ ಕುರಿತು ಮಹಿಳಾ ಕಲಾವಿದರಿಂದ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

Vijaya Karnataka 19 Sep 2019, 5:00 am
ಹುಬ್ಬಳ್ಳಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮದ ನಿಮಿತ್ತ ಸೆ.18 ರಿಂದ 27 ರವರೆಗೆ ಸರಕಾರದ ಜನಪರ ಯೋಜನೆಗಳು ಹಾಗೂ ಪರಿಸರ ಜಾಗೃತಿ ಕುರಿತು ಮಹಿಳಾ ಕಲಾವಿದರಿಂದ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
Vijaya Karnataka Web folk music program
ಜನಪದ ಸಂಗೀತ ಕಾರ್ಯಕ್ರಮ


ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳ ಮತ್ತು ಪರಸಾಪೂರ ಗ್ರಾಮಗಳಲ್ಲಿಬುಧವಾರ ನಡೆದ ಕಾರ್ಯಕ್ರಮದಲ್ಲಿಬಫೋ ವೆಂಚರ್ಸ್‌ ತಂಡದ ಮಹಿಳಾ ಕಲಾವಿದರಿಂದ ಬೀದಿನಾಟಕ ಹಾಗೂ ತಂತ್ರ ಸಂಸ್ಥೆಯ ಕಲಾವಿದರಿಂದ ಜನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಕಲಾವಿದರಾದ ಸುಕನ್ಯಾ ಗಡವೀರ, ಶಶಿಕಲಾ ಪುರೂಟಿ, ಕೌಶಲ್ಯ ಹೊಸಮನಿ, ಅರ್ಚನಾ ಕುಲಕರ್ಣಿ, ಪ್ರೇಮಾ ಕಾಳೆ, ಶೋಭಾ ಬಡಿಗೇರ, ನಾಗರತ್ನ ಮತ್ತಿತರರು ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಾರ್ತಾ ಇಲಾಖೆ ಮಲ್ಲಿಕಾರ್ಜುನ ಕಂಪಲಿ, ಅಕ್ಷಯ ದೊಡ್ಡಮನಿ ಮತ್ತಿತರರು ಇದ್ದರು.

ಕಾರ್ಯಕ್ರಮಗಳ ವಿವರ:
ಸೆ.19 ರಂದು ರಾಯನಾಳ ಮತ್ತು ರೇವಡಿಹಾಳ, 20 ರಂದು ಗಂಗಿವಾಳ ಮತ್ತು ಬಂಜಾರ ಕಾಲೊನಿ, 21 ರಂದು ಚನ್ನಾಪುರ, ರಾಮಾಪೂರ, 22 ರಂದು ಚವರಗುಡ್ಡ, ಅಗ್ರಹಾರ ತಿಮ್ಮಸಾಗರ, 23ರಂದು ಗಿರಿಯಾಲ, ಬುಡರಸಿಂಗಿ, 24 ರಂದು ಬೆಳಗಲಿ, ಇನಾಂವೀರಾಪೂರ, 25 ರಂದು ಬಮ್ಮಸಮುದ್ರ, ಪಾಳೆ, 26 ರಂದು ಕರಡಿಕೊಪ್ಪ, ಕುರ್ಡಿಕೇರಿ, 27 ರಂದು ವರೂರ , ಕಂಪ್ಲಿಕೊಪ್ಪ ಗ್ರಾಮಗಳಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ