ಆ್ಯಪ್ನಗರ

ಕ್ಷಮಾ ಗುಣ ವೀರರ ಲಕ್ಷಣ

ಧಾರವಾಡ : ಹೃದಯ ಶ್ರೀಮಂತಿಕೆ ಇಂದಿನ ಅವಶ್ಯಕತೆಯಾಗಿದ್ದು, ಮನಸ್ಸಿನಲ್ಲಿರುವ ಕೊಳೆ ಹೊರ ಹಾಕಿದರೆ ಮಾತ್ರ ಮುಖದಲ್ಲಿ ಕಳೆ ಬರಲು ಸಾಧ್ಯ ಎಂದು ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು.

Vijaya Karnataka 5 Sep 2019, 5:00 am
ಧಾರವಾಡ : ಹೃದಯ ಶ್ರೀಮಂತಿಕೆ ಇಂದಿನ ಅವಶ್ಯಕತೆಯಾಗಿದ್ದು, ಮನಸ್ಸಿನಲ್ಲಿರುವ ಕೊಳೆ ಹೊರ ಹಾಕಿದರೆ ಮಾತ್ರ ಮುಖದಲ್ಲಿ ಕಳೆ ಬರಲು ಸಾಧ್ಯ ಎಂದು ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು.
Vijaya Karnataka Web forgiveness is a heroic trait
ಕ್ಷಮಾ ಗುಣ ವೀರರ ಲಕ್ಷಣ


ನಗರದ ಸನ್ಮತಿ ಜೈನ ಮಂದಿರದಲ್ಲಿ ಜೆಎಸ್‌ಎಸ್‌ ಕಾಲೇಜು ಸೇರಿದಂತೆ ಜೈನ ಸಮುದಾಯದ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ದಶಲಕ್ಷ ಣ ಪರ್ವ ಹಾಗೂ ಜೈನ ಸಾಹಿತ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷ ಮಾ ಗುಣ ವೀರರ ಲಕ್ಷ ಣ. ಮನಸ್ಸು ಪರಿವರ್ತನೆಯಾದರೆ ಮಾತ್ರ ಕ್ಷ ಮಿಸಲು ಸಾಧ್ಯ. ಮನಸ್ಸಿನಲ್ಲಿರುವ ಕಷಾಯಗಳು ವ್ಯಕ್ತಿಯ ಚ್ಯಾರಿತ್ರ್ಯ ಹರಣ ಮಾಡುತ್ತವೆ ಎಂದರು.

ಜನತಾ ಶಿಕ್ಷ ಣ ಸಮಿತಿಯ ವಿತ್ತಾಧಿಕಾರಿ ಡಾ. ಅಜೀತ ಪ್ರಸಾದ ಕ್ಷ ಮಾ ಧರ್ಮ ಕುರಿತು ಮಾತನಾಡಿ, ನೋಡುವ ದೃಷ್ಟಿಯಿಂದ ಭಾವನೆಗಳು ರೂಪಗೊಳ್ಳುತ್ತವೆ. ನಮ್ಮ ಸುಖಕ್ಕೆ ತೊಂದರೆಯಾದರೆ ಕ್ರೋಧ ಉತ್ಪತ್ತಿಯಾಗುತ್ತದೆ. ಕೋಪ ಕೇವಲ ತಾತ್ಕಾಲಿಕವಾಗಿರಬೇಕು. ಸಹನೆ, ತಾಳ್ಮೆ ಇವೆಲ್ಲವು ಕ್ಷ ಮೆಗೆ ಅಡಿಪಾಯ. ಮನೆಯ ಕಿಚ್ಚು ಮನೆಯನ್ನೆ ಸುಡುವ ಹಾಗೇ ಕೋಪ ಮನುಷ್ಯನ ಚ್ಯಾರಿತ್ರ್ಯ ಹಾಳು ಮಾಡುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಎಲ್ಲರೂ ಸಹನೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

ದಿಗಂಬರ ಜೈನ್‌ ಸಮಾಜ ಟ್ರಸ್ಟನ ಅಧ್ಯಕ್ಷ ಡಾ.ಎ.ಬಿ.ಖೋತ ಮಾತನಾಡಿ, ಸಾತ್ವಿಕ ಜೀವನ ನಡೆಸುವುದೇ ಕ್ಷ ಮಾ ಧರ್ಮ. ಇಂದಿನ ಎಲ್ಲ ಸಮಸ್ಯೆಗಳಿಗೆ ಕ್ಷ ಮೆ ರಾಮಭಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸುರೇಶ ಪತ್ರಾವಳಿ, ವರ್ಧಮಾನ ಗೊಗಿ ಉಪಸ್ಥಿತರಿದ್ದರು. ನಂದಿನಿ ಬಗಿ ಪ್ರಾರ್ಥಿಸಿದರು. ಮಹಾವೀರ ಉಪಾಧ್ಯೆ ನಿರೂಪಿಸಿದರು. ಎ.ಎ.ಬಾಳಿಕಾಯಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ