ಆ್ಯಪ್ನಗರ

ಸ್ನೇಹಸಿರಿ ಗ್ರಂಥ ಲೋಕಾರ್ಪಣೆ

ಧಾರವಾಡ: ಡಾ.ಎಸ್‌.ಎಚ್‌.ಪಾಟೀಲರು ತಮ್ಮ ಜೀವನವನ್ನು ಅಧ್ಯಯನ, ಬೋಧನೆ ಹಾಗೂ ಸಂಶೋಧನೆಗಳಿಗೆ ಮೀಸಲಿಟ್ಟು ಪ್ರಾಮಾಣಿಕ ಭಾವದಿಂದ ಶ್ರಮಿಸಿದವರು. ಜೊತೆಗೆ ಬದುಕಿನಲ್ಲಿಸಹನೆ, ಪ್ರೀತಿ, ವಿಶ್ವಾಸ, ನಂಬಿಕೆ, ವಿನಯಶೀಲತೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Vijaya Karnataka 13 Feb 2020, 5:00 am
ಧಾರವಾಡ: ಡಾ.ಎಸ್‌.ಎಚ್‌.ಪಾಟೀಲರು ತಮ್ಮ ಜೀವನವನ್ನು ಅಧ್ಯಯನ, ಬೋಧನೆ ಹಾಗೂ ಸಂಶೋಧನೆಗಳಿಗೆ ಮೀಸಲಿಟ್ಟು ಪ್ರಾಮಾಣಿಕ ಭಾವದಿಂದ ಶ್ರಮಿಸಿದವರು. ಜೊತೆಗೆ ಬದುಕಿನಲ್ಲಿಸಹನೆ, ಪ್ರೀತಿ, ವಿಶ್ವಾಸ, ನಂಬಿಕೆ, ವಿನಯಶೀಲತೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web friendship book
ಸ್ನೇಹಸಿರಿ ಗ್ರಂಥ ಲೋಕಾರ್ಪಣೆ


ನಗರದ ಆಲೂರ ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿಶುಕ್ರವಾರ ಏರ್ಪಡಿಸಿದ್ದ ಡಾ.ಎಸ್‌.ಎಚ್‌.ಪಾಟೀಲರ ನುಡಿನಮನ ಕಾರ್ಯಕ್ರಮದಲ್ಲಿಸ್ನೇಹಸಿರಿ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪಾರದರ್ಶಕ ವ್ಯಕ್ತಿತ್ವ, ಸರಳ ಸಜ್ಜನಿಕೆಯ ಹಾಗೂ ಬಸವ, ಗಾಂಧಿ ವಿಚಾರಗಳನ್ನು ಪಾಟೀಲರು ತಮ್ಮ ಜೀವನದಲ್ಲಿಅಳವಡಿಸಿಕೊಂಡಿದ್ದರು ಎಂದರು.

ವಿಶ್ರಾಂತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಮಾತನಾಡಿ, ಪ್ರಾಧ್ಯಾಪಕ ಎಸ್‌.ಎಚ್‌. ಪಾಟೀಲರು ಬದುಕಿನಲ್ಲಿಕಂಡ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಜೊತೆಗೆ ಸಂಶೋಧನಾ ಕಾರ್ಯದಲ್ಲಿಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಸ್ನೇಹಸಿರಿ ಗ್ರಂಥ ಸಂಪಾದಕ ಡಾ. ಎಸ್‌.ಎಸ್‌. ಪಟಗುಂದಿ, ಎಸ್‌.ಎಸ್‌. ಗೌತಿ, ಡಾ. ಸುನಂದಾ ಶಿರೂರ, ಪ್ರೊ. ಎನ್‌.ಆರ್‌. ಬಾಳಿಕಾಯಿ, ಲಿಂಗರಾಜ ಪಾಟೀಲ, ಡಾ. ಗೊಬ್ಬರಗುಂಪಿ, ಪ್ರಕಾಶ ಬಡಿಗೇರ, ಎಸ್‌.ಎಚ್‌. ಪಾಟೀಲ, ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ