ಆ್ಯಪ್ನಗರ

ಜನವರಿಯಲ್ಲಿ ಪೂರ್ಣ ಪ್ರಮಾಣದ ಸಂಸತ್‌ ಅಧಿವೇಶನ: ಕೇಂದ್ರ ಸಚಿವ ಜೋಶಿ

ನಾವು ಎಂಥದ್ದೆ ಅಭ್ಯರ್ಥಿ ಹಾಕಿದರೂ ಸಿದ್ದರಾಮಯ್ಯ ಗೆಲ್ಲಬೇಕಲ್ಲ, ಅಷ್ಟಕ್ಕೂ ಟೀಕೆಗಾಗಿ ಟೀಕೆ ಎಂಬಂತೆ ಸಿದ್ದರಾಮಯ್ಯ ನಡೆದುಕೊಂಡರು. ಪ್ರಧಾನಿ ಮೋದಿ ಅವರನ್ನು ತೆಗಳುವುದೆ ತನ್ನ ಗೆಲವಿಗೆ ಕಾರಣವಾಗಲಿದೆ ಎಂಬ ಭ್ರಮೆಯೂ ಅವರಿಗೆ ಮುಳುವಾಗಿದೆ

Vijaya Karnataka Web 19 Dec 2020, 11:41 pm
ಹುಬ್ಬಳ್ಳಿ: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ಹತೋಟಿಗೆ ಬಂದಿದ್ದು, ಜನವರಿಯಲ್ಲಿಇನ್ನಷ್ಟು ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಜನವರಿ ಅಂತ್ಯದಲ್ಲಿಪೂರ್ಣ ಪ್ರಮಾಣದ ಸಂಸತ್‌ ಅಧಿವೇಶನ ಕರೆಯಲು ಸರಕಾರ ಯೋಚಿಸಿದೆ ಎಂದು ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
Vijaya Karnataka Web ಪ್ರಹ್ಲಾದ್‌ ಜೋಶಿ
ಪ್ರಹ್ಲಾದ್‌ ಜೋಶಿ


ನಗರದ ಕಿಮ್ಸ್‌ನಲ್ಲಿ ಶನಿವಾರ ನಡೆದ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮದ ನಂತರ ಮಾತನಾಡಿದರು.

‘‘ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆಗಳು ಆರಂಭಗೊಂಡಿವೆ. ಜನವರಿ ಅಂತ್ಯದಲ್ಲಿ ಬಹುತೇಕ ಕಾರ್ಯಾಚರಣೆ ಶುರುವಾಗಲಿದೆ’’ ಎಂದು ತಿಳಿಸಿದರು.

ಸ್ವಂತ ತಪ್ಪಿನಿಂದ ಸಿದ್ದರಾಮಯ್ಯಗೆ ಸೋಲು

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಸ್ವಪಕ್ಷದವರೇ ನನ್ನ ಸೋಲಿಗೆ ಕಾರಾಣರಾದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ‘‘ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಏನನ್ನೂ ಮಾಡಲಿಲ್ಲ. ದುರಾಡಳಿತ, ಆಡಳಿತ ವೈಫಲ್ಯವೇ ಅವರ ಸೋಲಿಗೆ ಕಾರಣವಾಯಿತು. ಇದರ ಜತೆಗೆ ಅವರ ಪಕ್ಷದವರೂ ಸಾಥ್‌ ನೀಡಿದರು’’ ಎಂದು ಹೇಳಿದರು.

‘‘ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಸ್ವಪಕ್ಷೀಯರ ಹುನ್ನಾರವೂ ಸೇರಿ ತಮ್ಮ ತಪ್ಪಿನಿಂದ ಸೋತಿರುವ ಸಿದ್ದರಾಮಯ್ಯ, ಬಾದಾಮಿಯಲ್ಲಿಅಲ್ಪ ಮುನ್ನಡೆಯಿಂದ ಗೆದ್ದಿದ್ದಾರೆ. ಅವರ ಸಮಯ ಚೆನ್ನಾಗಿತ್ತು. ಪರಾಭವಗೊಂಡಿದ್ದರೆ ರಾಜಕೀಯ ಜೀವನ ಮುಗಿಯುತಿತ್ತು’’ ಎಂದರು.

ಬಿಜೆಪಿ ತನ್ನ ವಿರುದ್ಧ ಡಮ್ಮಿ ಅಭ್ಯರ್ಥಿ ಹಾಕಿತ್ತು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘‘ನಾವು ಎಂಥದ್ದೆ ಅಭ್ಯರ್ಥಿ ಹಾಕಿದರೂ ಸಿದ್ದರಾಮಯ್ಯ ಗೆಲ್ಲಬೇಕಲ್ಲ, ಅಷ್ಟಕ್ಕೂ ಟೀಕೆಗಾಗಿ ಟೀಕೆ ಎಂಬಂತೆ ಸಿದ್ದರಾಮಯ್ಯ ನಡೆದುಕೊಂಡರು. ಪ್ರಧಾನಿ ಮೋದಿ ಅವರನ್ನು ತೆಗಳುವುದೆ ತನ್ನ ಗೆಲವಿಗೆ ಕಾರಣವಾಗಲಿದೆ ಎಂಬ ಭ್ರಮೆಯೂ ಅವರಿಗೆ ಮುಳುವಾಗಿದೆ’’ ಎಂದರು.

‘‘ಕೊರೊನಾ ಕುರಿತು ಡಬ್ಲ್ಯುಎಚ್‌ಒ ತನಿಖೆಗೆ ಚೀನಾ ಒಪ್ಪಿಕೊಂಡಿದ್ದು, ರೋಗದ ಕುರಿತು ಸತ್ಯಾಂಶ ಬೆಳಕಿಗೆ ಬರಲಿದೆ’’ ಎಂದು ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ