ಆ್ಯಪ್ನಗರ

ಗಜಾನನ ಅರ್ಬನ್‌ ಕ್ರೆಡಿಟ್‌ ಸೊಸೈಟಿ ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಡ್‌

ಹುಬ್ಬಳ್ಳಿ : ನಗರದ ಶ್ರೀಗಜಾನನ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತಿಚೇಗೆ ಇಲ್ಲಿನ ವಾಳ್ವೇಕರ್‌ ಗಲ್ಲಿಯ ಸೊಸೈಟಿ ಸಭಾಭವನದಲ್ಲಿ ನಡೆಯಿತು.

Vijaya Karnataka 13 Aug 2019, 5:00 am
ಹುಬ್ಬಳ್ಳಿ : ನಗರದ ಶ್ರೀಗಜಾನನ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತಿಚೇಗೆ ಇಲ್ಲಿನ ವಾಳ್ವೇಕರ್‌ ಗಲ್ಲಿಯ ಸೊಸೈಟಿ ಸಭಾಭವನದಲ್ಲಿ ನಡೆಯಿತು.
Vijaya Karnataka Web gajanan urban credit society 15 per cent dividend
ಗಜಾನನ ಅರ್ಬನ್‌ ಕ್ರೆಡಿಟ್‌ ಸೊಸೈಟಿ ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಡ್‌


ಆರಂಭದಲ್ಲಿ ಸೊಸೈಟಿಯಲ್ಲಿ ಕೇವಲ 29,47,230 ಇದ್ದ ಠೇವಣಿಯು ಇಂದು 21ನೇ ವರ್ಷಕ್ಕೆ 186 ಕೋಟಿಯಷ್ಟಾಗಿದೆ. ದುಡಿಯುವ ಬಂಡವಾಳ 200 ಕೋಟಿ ದಾಟಿದೆ. ನಾಲ್ಕು ಶಾಖೆಯನ್ನು ಹೊಂದಿದ್ದು, ಅಂದಾಜು 7 ಸಾವಿರ ಸದಸ್ಯರನ್ನು ಒಳಗೊಂಡಿದೆ. ಸಂಘವು ತನ್ನ ಸದಸ್ಯರಿಗೆ 2008-09 ರಿಂದ ಸತತ 10 ವರ್ಷಗಳಿಂದ ಶೇ. 15ರಷ್ಟು ಡಿವಿಡೆಂಡ್‌ನ್ನು ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಹಳೇ ಹುಬ್ಬಳ್ಳಿ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ಕಸಬಾಪೇಟ ಮುಖ್ಯ ರಸ್ತೆಯ ಶಕುಂತಲಾ ಆರ್ಕೆಟ್‌ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ. ಸಮಘವು ತನ್ನ ಎಲ್ಲಾ ಶಾಖೆಯಲ್ಲಿ ಆನ್‌ಲೈನ್‌ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರಿಗೆ ಮುದ್ದತ್‌ ಠೇವಣೆ ಮೇಲೆ ಶೇ.10.50ರಷ್ಟು ಬಡ್ಡಿ ಕೊಡುತ್ತಿದೆ. ಹಿರಿಯ ನಾಗರಿಕರಿಗೆ ಶೇ.0.50ರಷ್ಟು (ಶೇ.11) ಹೆಚ್ಚಿನ ಬಡ್ಡಿ ಕೊಡುತ್ತಲಿದೆ. ಎಲ್ಲ ಗ್ರಾಹಕರಿಗೂ ಸೂಕ್ತ ಸಾಲಸೌಲಭ್ಯವನ್ನು ನೀಡುತ್ತಿದೆ.

ಹರಿದಾಸ್‌ ಎನ್‌.ಶೆಟ್ಟಿ, ಹಿತೇಶಕುಮಾರ ಮೊದಿ, ಹರೀಶ ಮಹಾಜನ, ಗುರುಸಿದ್ದಪ್ಪ ಯಕಲಾಸಪುರ, ಮಹಾಬಳೇಶ್ವರ ಹೆಗಡೆ, ಮಹಾದೇವಪ್ಪ ಬೆಣಗಿ, ಸಂಗಪ್ಪ ಸವದತ್ತಿ, ಬಿ.ಎಸ್‌.ಹಿರೇಮಠ, ವಿಜಯ ಮೆಹರವಾಡೆ, ಪ್ರಭಾವತಿ ಎಸ್‌.ಇಂಗಳಹಳ್ಳಿ, ಅಪರ್ಣಾ ಆರ್‌.ಅಂಕೋಲೆಕರ, ಮ್ಯಾನೇಜರ್‌ ಲಕ್ಷ್ಮೇ ಬಿ.ಪಾಟೀಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ