ಆ್ಯಪ್ನಗರ

ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡಿ

ಧಾರವಾಡ: ಕುರುಬ ಸಮಾಜದ ನಾಯಕರಾದ ಎಚ್‌. ವಿಶ್ವನಾಥ, ಎಂಬಿಟಿ ನಾಗರಾಜ್‌, ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠ ಡಾ. ಬಸವರಾಜ ದೇವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬರಲು ಕುರುಬ ಸಮಾಜವೂ ಕಾರಣ. ಹೀಗಾಗಿ ಸಮಾಜದ

Vijaya Karnataka 11 Feb 2020, 5:00 am
ಧಾರವಾಡ: ಕುರುಬ ಸಮಾಜದ ನಾಯಕರಾದ ಎಚ್‌. ವಿಶ್ವನಾಥ, ಎಂಬಿಟಿ ನಾಗರಾಜ್‌, ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠ ಡಾ. ಬಸವರಾಜ ದೇವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬರಲು ಕುರುಬ ಸಮಾಜವೂ ಕಾರಣ. ಹೀಗಾಗಿ ಸಮಾಜದ ನಾಯಕರಿಗೆ ಮಂತ್ರಿಗಿರಿ ನೀಡಬೇಕು. ಇಲ್ಲದಿದ್ದರೆ ಸಮಾಜದ ವಿರೋಧವನ್ನು ಸರಕಾರ ಕಟ್ಟಿಕೊಳ್ಳಬೇಕಾಗಲಿದೆ ಎಂದಿದ್ದಾರೆ.ಬಿಜೆಪಿಯು ಉಪಮುಖ್ಯಮಂತ್ರಿ ಪಟ್ಟವನ್ನು ಸಚಿವ ಕೆ ಎಸ್‌ ಈಶ್ವರಪ್ಪರವರಿಗೂ ನೀಡದಿರುವುದು ಅಕ್ಷಮ್ಯ. ಸಮಾಜದ ಏಕೈಕ ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪೂರರಂಥವವರನ್ನು ನಿರ್ಲಕ್ಷತ್ರ್ಯ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಮುಂಬರುವ ಬಜೆಟ್‌ನಲ್ಲಿಕುರಿಗಾರರ ಸಮಸ್ಯೆ ನಿವಾರಣೆಗೆ ಅನುದಾನ ನೀಡಬೇಕು. ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಮಾಡಬೇಕು. ನಿಗಮ ಮಂಡಳಿಗಳಿಗೆ ಸಮಾಜದ ಮುಖಂಡರನ್ನು ನೇಮಿಸಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
Vijaya Karnataka Web give ministerial position to shepherd society
ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ