ಆ್ಯಪ್ನಗರ

ಹಳೆ ಪಾಸ್‌ ತೋರಿಸಿ ಶಾಲೆಗೆ ಹೋಗಿ

ಹುಬ್ಬಳ್ಳಿ: ಹೊಸ ಬಸ್‌ ಪಾಸ್‌ ವಿತರಣೆಯಾಗುವವರೆಗೂ ಹಳೆ ಬಸ್‌ ಪಾಸ್‌ ತೋರಿಸಿ ಶಾಲೆ-ಕಾಲೇಜುಗಳಿಗೆ ತೆರಳಲು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.

Vijaya Karnataka 4 Jun 2019, 5:00 am
ಹುಬ್ಬಳ್ಳಿ: ಹೊಸ ಬಸ್‌ ಪಾಸ್‌ ವಿತರಣೆಯಾಗುವವರೆಗೂ ಹಳೆ ಬಸ್‌ ಪಾಸ್‌ ತೋರಿಸಿ ಶಾಲೆ-ಕಾಲೇಜುಗಳಿಗೆ ತೆರಳಲು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.
Vijaya Karnataka Web go to the old pass show school
ಹಳೆ ಪಾಸ್‌ ತೋರಿಸಿ ಶಾಲೆಗೆ ಹೋಗಿ


'ಶಾಲೆ ಆರಂಭವಾದ್ರೂ ಬಸ್‌ ಪಾಸ್‌ ಇಲ್ಲ' ಎಂಬ ಶೀರ್ಷಿಕೆಯಡಿ 'ವಿಜಯ ಕರ್ನಾಟಕ' ಪ್ರಕಟಿಸಿದ ವರದಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ ಹಳೆ ಬಸ್‌ಪಾಸ್‌ ತೋರಿಸಿದ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ನೀಡುವಂತೆ ಕಂಡಕ್ಟರ್‌ಗಳಿಗೆ ನಿರ್ದೇಶನ ನೀಡಿ ಜೂ.3ರಂದು ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು 2018-19ನೇ ಸಾಲಿನಲ್ಲಿ ಪಡೆದ ಪಾಸ್‌ ಜತೆಗೆ ಪ್ರಸಕ್ತ ಸಾಲಿನ ಬೋಧನಾ ಶುಲ್ಕ ರಸೀದಿ, ಗುರುತಿನ ಚೀಟಿಯನ್ನೂ ತೋರಿಸಬೇಕೆಂದು ಸೂಚಿಸಲಾಗಿದೆ.

ಹೊಸ ವಿದ್ಯಾರ್ಥಿಗಳಿಗಿಲ್ಲ:
ಶಾಲಾ-ಕಾಲೇಜುಗಳಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಯಾವುದೇ ಅವಕಾಶ ನೀಡಿಲ್ಲ. ಹೀಗಾಗಿ ಆ ವಿದ್ಯಾರ್ಥಿಗಳು ಟಿಕೆಟ್‌ ಪಡೆದು ಪ್ರಯಾಣ ಮಾಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ