ಆ್ಯಪ್ನಗರ

ಶಾಸಕರಿಗೆ ಚಿನ್ನದ ಬಿಸ್ಕೆಟ್‌ ಕೊಡಬೇಕಾಗಿಲ್ಲ: ವಾಟಾಳ್‌

ಶಾಸಕರಿಗೆ ಚಿನ್ನದ ಬಿಸ್ಕೇಟ್‌ ಕೊಡುವುದು ಬೇಕಾಗಿಲ್ಲ. ಏಕೆಂದರೆ ಅಸೆಂಬ್ಲಿಯಲ್ಲಿರುವವರೆಲ್ಲ ಚಿನ್ನದ ಬಿಸ್ಕೆಟ್‌ ಹೊಂದಿದ್ದಾರೆ. ಅವರಿಗೆ ಚಿನ್ನದ ಬಿಸ್ಕೆಟ್‌ ನೀಡುವುದು ಸಮಂಜಸವಲ್ಲ.

Vijaya Karnataka Web 16 Oct 2017, 2:41 pm
ಹುಬ್ಬಳ್ಳಿ: 'ಶಾಸಕರಿಗೆ ಚಿನ್ನದ ಬಿಸ್ಕೇಟ್‌ ಕೊಡುವುದು ಬೇಕಾಗಿಲ್ಲ. ಏಕೆಂದರೆ ಅಸೆಂಬ್ಲಿಯಲ್ಲಿರುವವರೆಲ್ಲ ಚಿನ್ನದ ಬಿಸ್ಕೆಟ್‌ ಹೊಂದಿದ್ದಾರೆ. ಅವರಿಗೆ ಚಿನ್ನದ ಬಿಸ್ಕೆಟ್‌ ನೀಡುವುದು ಸಮಂಜಸವಲ್ಲ.
Vijaya Karnataka Web gold biscuit gifts for mlas
ಶಾಸಕರಿಗೆ ಚಿನ್ನದ ಬಿಸ್ಕೆಟ್‌ ಕೊಡಬೇಕಾಗಿಲ್ಲ: ವಾಟಾಳ್‌

ಅದಕ್ಕೆ ನನ್ನ ವಿರೋಧವಿದೆ. ನಮ್ಮ ಸ್ಪೀಕರ್‌ಗೆ ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ,' ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ಷೇಪಿಸಿದ್ದಾರೆ.

ಕರ್ನಾಟಕದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಶಾಸನಸಭೆಯ ವಜ್ರಮಹೋತ್ಸವ ಬೇಕಾಗಿರಲಿಲ್ಲ. ತರಾತುರಿಯಲ್ಲಿ ಇವನ್ನೆಲ್ಲ ಮಾಡುವುದು ಸರಿಯಲ್ಲ, ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ವಾಟಾಳ್‌, ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಡೆದ ಹೋರಾಟ ಇತಿಹಾಸ. ಭಾರತದ ಇತಿಹಾಸದಲ್ಲಿ ಇಷ್ಟೊಂದು ದೀರ್ಘಕಾಲದ ಹೋರಾಟ ಯಾವುದೂ ನಡೆದಿಲ್ಲ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಅಕ್ಟೋಬರ್ ‌21 ರಂದು‌ ರಾಜಭವನ ಮುತ್ತಿಗೆ ಹಾಕಲಾಗುವುದು ಎಂದರು.

ದೇಶದ ಪ್ರಧಾನಿಗೆ ಚುನಾವಣೆ ಬಿಟ್ಟರೆ ರಾಜ್ಯದ ಅಭಿವೃದ್ಧಿ ಕಾಳಜಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕಾಗಿತ್ತು. ಅವರು ಬರದಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡಿದ ಅಗೌರವ. ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ಹೋರಾಟ ನಡೆಸಲಾಗುವುದು. ನಮ್ಮ ಸಂಸದರಿಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಬರುವುದಿಲ್ಲ. ಅದರಲ್ಲೂ ಬಿಜೆಪಿಯವರು ಸುಮ್ಮನಿದ್ದಾರೆ ಎಂದು ವಾಟಾಳ್‌ ಟೀಕಿಸಿದರು.

ವಾಟಾಳ್‌ ಅವರು ಹುಬ್ಬಳ್ಳಿಯ ವಿಶ್ವೇಶ್ವರ ನಗರದ ನಿವಾಸದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ‌ವಿಚಾರಿಸಿ ಸನ್ಮಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ