ಆ್ಯಪ್ನಗರ

ಮಠಗಳಿಂದ ಉತ್ತಮ ಸಂಸ್ಕಾರ: ಖಂಡ್ರೆ

ಧಾರವಾಡ :ವೀರಶೈವ ಸಮಾಜದ ಮಠಗಳಿಗೆ ಉನ್ನತ ಇತಿಹಾಸವಿದೆ. ಬೇರೆ ಧರ್ಮಗಳ ಮಠಗಳು ಬರೀ ಧರ್ಮ ಪ್ರಚಾರ ಮಾತ್ರ ಮಾಡಿದರೆ ನಮ್ಮ ಮಠಗಳು ಯಾವುದೇ ಜಾತಿ-ಧರ್ಮದ ಎನ್ನದೇ ಶಿಕ್ಷ ಣ ಜತೆಗೆ ಸಂಸ್ಕಾರ ನೀಡಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Vijaya Karnataka 9 Sep 2018, 5:00 am
ಧಾರವಾಡ :ವೀರಶೈವ ಸಮಾಜದ ಮಠಗಳಿಗೆ ಉನ್ನತ ಇತಿಹಾಸವಿದೆ. ಬೇರೆ ಧರ್ಮಗಳ ಮಠಗಳು ಬರೀ ಧರ್ಮ ಪ್ರಚಾರ ಮಾತ್ರ ಮಾಡಿದರೆ ನಮ್ಮ ಮಠಗಳು ಯಾವುದೇ ಜಾತಿ-ಧರ್ಮದ ಎನ್ನದೇ ಶಿಕ್ಷ ಣ ಜತೆಗೆ ಸಂಸ್ಕಾರ ನೀಡಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
Vijaya Karnataka Web good monastery from monasteries khandre
ಮಠಗಳಿಂದ ಉತ್ತಮ ಸಂಸ್ಕಾರ: ಖಂಡ್ರೆ


ನಗರದ ಹಳಿಯಾಳ ರಸ್ತೆ ಬಳಿಯ ಲಿಂಗಾಯತ ಭವನದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಠಗಳು ಸರ್ವ ಜಾತಿಗಳ ಜನರಿಗೆ ಆಶ್ರಯ ನೀಡಿ ಉತ್ತಮ ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಿವೆ. ಈ ಹಿನ್ನೆಲೆಯಲ್ಲಿ ವೀರಶೈವರು, ಲಿಂಗಾಯತರು ಎನ್ನದೇ ಒಗ್ಗಟ್ಟಾಗಿ ಮುಂದೇ ಸಾಗೋಣ ಎಂದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ನಾವೆಲ್ಲರೂ ನಿಜವಾಗಿಯೂ ವೀರಶೈವ, ಲಿಂಗಾಯತರಾಗಿದ್ದರೆ ಶರಣರು ಹೇಳಿದಂತೆ ನಡೆಯಬೇಕು , ವೀರಶೈವ ಲಿಂಗಾಯತ ಧರ್ಮ,ಅದು ಜಾತಿ ಅಲ್ಲ ಎಂದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಜಿಲ್ಲೆಯ 62 ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 1500ರೂ.ನಗದು, ಗುಂಡಗಡಿಗೆ ನೀಡುವ ಮೂಲಕ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಅಂಬಡಗಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಪದಾಧಿಕಾರಿಗಳಾದ ಎ.ಎಸ್‌.ವೀರಣ್ಣ, ಸಚ್ಚಿದಾನಂದಮೂರ್ತಿ, ರೇಣುಕ ಪ್ರಸನ್ನ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ಬಸವರಾಜ ಬಿಕ್ಕಣ್ಣವರ, ವಿ.ಎಸ್‌.ಪಾಟೀಲ, ಶಾಂತವೀರ ಬೆಟಗೇರಿ, ಶಂಕರ ಕುಂಬಿ, ಸದಾನಂದ ಶಿವಳ್ಳಿ, ಮಲ್ಲಪ್ಪ ಬಾವಿ, ಡಾ.ಎ.ಎಸ್‌.ಪ್ರಭಾಕರ, ಸಿದ್ದು ಕಂಬಾರ, ಮಲ್ಲನಗೌಡ ಪಾಟೀಲ, ಪರಶುರಾಮ ಹಕ್ಕರಕಿ, ಕರೆಪ್ಪ ಅಮ್ಮಿನಬಾವಿ ಸೇರಿದಂತೆ ಇತರರು ಇದ್ದರು.

ಪ್ರೊ.ವಿ.ಸಿ.ಸವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಹುಕ್ಕೇರಿ ವಚನ ಗಾಯನ ಪ್ರಸ್ತುತ ಪಡಿಸಿದರು. ಡಾ.ನಳಿನಿ ಪ್ರಭಾಕರ ಸ್ವಾಗತಿಸಿದರು. ಸುರೇಖಾ ಸಂಕನಗೌಡರ ನಿರೂಪಿಸಿದರು.ಮೈಲಾರ ಉಪ್ಪಿನ ವಂದಿಸಿದರು.

ಬೆಲ್ಲದ ಕುಟುಂಬದ ವಿರುದ್ಧ ವಾಗ್ದಾಳಿ

ಲಿಂಗಾಯತ ಭವನ ವಿಚಾರವಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಕುಟುಂಬಸ್ಥರ ವಿರುದ್ಧ ಶಾಮನೂರ ಅವರು ನೇರವಾಗಿ ವಾಗ್ದಾಳಿ ನಡೆಸಿದರು. ಸಮಾಜದ ಅನೇಕ ಮುಖಂಡರು, ನಾಯಕರು ಹಾಗೂ ಜನರಿಂದ ಲಿಂಗಾಯತ ಭವನ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಬೆಲ್ಲದ ಕುಟುಂಬಕ್ಕೆ ನಾವು ಸಹಾಯ ಮಾಡಿದ್ದೇವೆ ,ಆದಾಗ್ಯೂ ಅವರು ತಮ್ಮ ಪ್ರತಿಷ್ಠೆಗಾಗಿ ಕುಟುಂಬದ ಹೆಸರು ಇಟ್ಟಿದ್ದರು. ಆಗ ಅನಿವಾರ್ಯವಾಗಿ ಮಹಾಸಭೆ ಮಧ್ಯ ಪ್ರವೇಶ ಮಾಡಿ ಬೆಲ್ಲದ ಅವರನ್ನು ಸಮಿತಿಯಿಂದ ಹೊರಹಾಕಿ ನೂತನ ಸಮಿತಿ ರಚಿಸಲಾಗಿದೆ. ಸದ್ಯ ಎಲ್ಲವು ಉತ್ತಮವಾಗಿ ನಡೆದಿದೆ ಎಂದು ಡಾ.ಶಾಮನೂರ ಶಿವಶಂಕರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ