ಆ್ಯಪ್ನಗರ

ಹುಬ್ಬಳ್ಳಿ,ಧಾರವಾಡದಲ್ಲಿ ಗಣೇಶನಿಗೆ ಭಕ್ತಿಯ ವಿದಾಯ

ಧಾರವಾಡ/ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಗಣೇಶ ಚತುರ್ಥಿ ನಿಮಿತ್ತ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನ ಬುಧವಾರ ಕೆಲ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಯರು ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಿದರು.

Vijaya Karnataka Web 27 Aug 2020, 5:00 am
ಧಾರವಾಡ/ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಗಣೇಶ ಚತುರ್ಥಿ ನಿಮಿತ್ತ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನ ಬುಧವಾರ ಕೆಲ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಯರು ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಿದರು.
Vijaya Karnataka Web 26MALLU10_21
ಧಾರವಾಡ ಕೆಪಿ ಇ ಎಸ್‌ ಶಾಲೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.


ಧಾರವಾಡ ಸಪ್ತಾಪುರ ಭಾವಿ, ಮರಾಠಾ ಕಾಲನಿಯ ಗಣೇಶ ದೇವಸ್ಥಾನ ಬಳಿ, ಸಾಧನಕೇರಿ ಹಾಗೂ ಇತರ ಪ್ರದೇಶದಲ್ಲಿಪಾಲಿಕೆ ಹಾಗೂ ರೋಟರಿ ಕ್ಲಬ್‌ ವತಿಯಿಂದ ನಿರ್ಮಿಸಲಾಗಿದ್ದ ಕೃತಕ ಬಾವಿಯಲ್ಲಿಜನರು ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. ಅದೇ ರೀತಿ ಹುಬ್ಬಳ್ಳಿಯ ಉಣಕಲ್‌ ಕೆರೆ ಹಾಗೂ ಇಂದಿರಾ ಗಾಜಿನ ಮನೆ ಪಕ್ಕದ ಬಾವಿಯಲ್ಲಿ ಕೆಲ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಸಾರ್ವಜನಿಕರು ತಮ್ಮ ಮನೆಗಳಲ್ಲಿಪ್ರತಿಷ್ಠಾಪಿಸಿದ್ದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಸ್ಥಾಪಿಸಿದ್ದ ಗಣೇಶನ ಮೂರ್ತಿಗಳನ್ನು ಬುಧವಾರ ಸಂಜೆ 7 ರಿಂದ ವಿವಿಧ ಸ್ಥಳಗಳಲ್ಲಿಕೃತಕವಾಗಿ ನಿರ್ಮಿಸಲಾದ ಭಾವಿಯ ಬಳಿ ಗಣೇಶ ಮೂರ್ತಿ ತಂದು ಪೂಜೆ ಸಲ್ಲಿಸಿ, ವಿಸರ್ಜನೆ ಮಾಡಿದರು.

25 ಗಣೇಶ ಮೂರ್ತಿ ವಿಸರ್ಜನೆ: ಇಲ್ಲಿನ ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ ಅವರು ಅನಿವಾಸಿ ಭಾರತೀಯರು ಖರೀದಿಸಿದ್ದ 25 ಗಣೇಶ ಪ್ರತಿಷ್ಠಾಪಿಸಿದ್ದರು. ಅದರಂತೆ 5ನೇ ದಿನವಾದ ಬುಧವಾರ ಏಕಕಾಲಕ್ಕೆ 25 ಮೂರ್ತಿಗಳನ್ನು ಸ್ಥಳದಲ್ಲೇ ಟ್ಯಾಂಕರ್‌ ನೀರಿನಿಂದ ಕರಗಿಸುವ ಮೂಲಕ ವಿಶಿಷ್ಟವಾಗಿ ವಿಸರ್ಜಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ