ಆ್ಯಪ್ನಗರ

ಬರದ್ವಾಡಕ್ಕೆ ಗ್ರಾಪಂ ಕೇಂದ್ರ ಸ್ಥಾನ ಕೊಡಿ : ಸಚಿವ ಶಿವಳ್ಳಿಗೆ ಘೇರಾವ್‌

ಕುಂದಗೋಳ : ಕೊಡ್ಲಿವಾಡ ಗ್ರಾಮ ಸೇರಿಸಿ ಕೂಡಲೇ ಗ್ರಾಮಕ್ಕೆ ಪಂಚಾಯಿತಿ ಕೇಂದ್ರ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ಬರದ್ವಾಡ ಗ್ರಾಮಸ್ಥರು ರಾಜ್ಯ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರಿಗೆ ಸೋಮವಾರ ಘೇರಾವ್‌ ಹಾಕಿದರು.

Vijaya Karnataka 6 Mar 2019, 5:00 am
ಕುಂದಗೋಳ : ಕೊಡ್ಲಿವಾಡ ಗ್ರಾಮ ಸೇರಿಸಿ ಕೂಡಲೇ ಗ್ರಾಮಕ್ಕೆ ಪಂಚಾಯಿತಿ ಕೇಂದ್ರ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ಬರದ್ವಾಡ ಗ್ರಾಮಸ್ಥರು ರಾಜ್ಯ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರಿಗೆ ಸೋಮವಾರ ಘೇರಾವ್‌ ಹಾಕಿದರು.
Vijaya Karnataka Web DRW-05KND4A
ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮಸ್ಥರು ಗ್ರಾಪಂ ಕೇಂದ್ರಸ್ತಾನಕ್ಕೆ ಆಗ್ರಹಿಸಿ ಸಚಿವ ಸಿ.ಎಸ್‌.ಶಿವಳ್ಳಿ ಅವರಿಗೆ ಘೇರಾವ ಹಾಕಿ ಪ್ರಶ್ನಿಸಿದರು.


ಈಗಾಗಲೇ ಈ ಗ್ರಾಮದಲ್ಲಿ ಪಂಚಾಯಿತಿ ಸ್ಥಾಪನೆಯಾಗಬೇಕೆಂಬ ಬೇಡಿಕೆಗೆ ಜಿಲ್ಲಾಧಿಕಾರಿಗಳ ಅನುಮೋದನೆ ದೊರಕಿದೆ. ಅಲ್ಲದೇ ಪಂಚಾಯತ ರಾಜ್‌ ಇಲಾಖೆಯಿಂದಲೂ ಒಪ್ಪಿಗೆ ಸಿಕ್ಕಿದೆ. ಹೀಗಿದ್ದಾಗೂ ನೀವು ಏಕೆ ನಮ್ಮ ಗ್ರಾಮ ನಿರ್ಲಕ್ಷಿಸುತ್ತಿದ್ದೀರಿ ಎಂದು ಗ್ರಾಮಸ್ಥರು ಸಚಿವರಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶಿವಳ್ಳಿ 'ನನ್ನ ತಾಲೂಕಿಗೆ ಹೆಚ್ಚಿನ ಪಂಚಾಯತಿ ಕೇಂದ್ರ ಸಿಗುತ್ತಿದೆ ಎಂದರೆ ನಾನೇಕೆ ಬಿಡಲಿ? ನಿಮ್ಮ ಗ್ರಾಮಕ್ಕೆ ಪಂಚಾಯತಿ ಸಿಗಲೆಂದು ನಾನೂ ಪ್ರಯತ್ನಿಸುತ್ತಿದ್ದೇನೆ 'ಎಂದು ಹೇಳಿದಾಗ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಮುಖ್ಯವಾಗಿ ಬೇಕಾದ ಪಂಚಾಯಿತಿಯನ್ನು ನೀಡಿದ ನಂತರವೇ ನಿಮನ್ನು ಗೌರವಿಸುತ್ತೇವೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸಚಿವರು ಈ ಕಾರ್ಯ ಆದಷ್ಟು ಬೇಗ ಆಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದಾಗ ಗ್ರಾಮಸ್ಥರು ಸಚಿವರಿಗೆ ಜೈಕಾರ ಕೂಗಿದರು.

ಸಚಿವ ಸಿ.ಎಸ್‌.ಶಿವಳ್ಳಿ ಅವರು ಕೊಡ್ಲಿವಾಡ-ಬರದ್ವಾಡ ರಸ್ತೆ ಮಧ್ಯದ ಮೇಲ್ಸೆತುವೆ ,ಬರದ್ವಾಡ-ಹಿರೇಗುಂಜಳ ರಸ್ತೆ ಮಧ್ಯದ ಕೆಳಸೇತುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲು ಬರದ್ವಾಡಕ್ಕೆ ಬಂದಾಗ ಗ್ರಾಮಸ್ಥರು ಆಕ್ರೋಶಿತರಾಗಿ ಸಚಿವರಿಗೆ ಘೇರಾವ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ