ಆ್ಯಪ್ನಗರ

ಪ್ರಚಾರಪ್ರಿಯ ಸಂಸ್ಥೆಗಳಿಗೆ ಅನುದಾನ: ಸಿಂಘಿ ಬೇಸರ

ಹುಬ್ಬಳ್ಳಿ : ಪ್ರಾಮಾಣಿಕವಾಗಿ ಬಡವರ ಹಾಗೂ ನಿರ್ಗತಿಕರ ಪರವಾಗಿ ಸೇವೆ ಸಲ್ಲಿಸುವ ಸಂಘ-ಸಂಸ್ಥೆಗಳಿಗೆ ಸರಕಾರಗಳು ಅನುದಾನ ನೀಡದೇ, ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ನೀಡುತ್ತವೆ ಎಂದು ಮಹಾವೀರ್‌ ಲಿಂಬ ಸೆಂಟರ್‌ ಅಧ್ಯಕ್ಷ ಮಹೇಂದ್ರ ಸಿಂಘಿ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 4 Jul 2019, 5:00 am
ಹುಬ್ಬಳ್ಳಿ : ಪ್ರಾಮಾಣಿಕವಾಗಿ ಬಡವರ ಹಾಗೂ ನಿರ್ಗತಿಕರ ಪರವಾಗಿ ಸೇವೆ ಸಲ್ಲಿಸುವ ಸಂಘ-ಸಂಸ್ಥೆಗಳಿಗೆ ಸರಕಾರಗಳು ಅನುದಾನ ನೀಡದೇ, ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ನೀಡುತ್ತವೆ ಎಂದು ಮಹಾವೀರ್‌ ಲಿಂಬ ಸೆಂಟರ್‌ ಅಧ್ಯಕ್ಷ ಮಹೇಂದ್ರ ಸಿಂಘಿ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web DRW-3MANJU2


ನಗರದ ಕಿಮ್ಸ್‌ ಆವರಣದಲ್ಲಿರುವ ಮಹಾವೀರ ಲಿಂಬ್‌ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರಗಳು ಸೇವಾ ಸಂಸ್ಥೆಗಳಿಗೆಂದು ಪ್ರತಿವರ್ಷವೂ ನೂರಾರು ಕೋಟಿ ಅನುದಾನವನ್ನು ಮೀಸಲಿಡುತ್ತದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಸ್ಥೆಗಳಿಗೆ ನೀಡದೇ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.

ಈಗಾಗಲೇ ಮಂಗಳೂರು, ಹೈದರಬಾದ, ಮುಂಬೈ ಹಾಗೂ ಹುಬ್ಬಳ್ಳಿಯಲ್ಲಿ ಮಹಾವೀರ ಲಿಂಬ್‌ ಸೆಂಟರ್‌ ಸೇವೆ ಸಲ್ಲಿಸುತ್ತಿದೆ. ಲಿಂಬ್‌ ಸೆಂಟರ್‌ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೇಘರಾಜ ಬಲಘಟ್‌, ಮಹಾವೀರ ಪಿ., ಪ್ರಕಾಶ ಬಾಪಣ, ಕೇಸರಿಚಂದ ಗೋಲೇಚ, ಸುರೇಶ ಮೆಹ್ತಾ, ಮಹೇಂದ್ರ ಜೈನ,ದಿನೇಶ ಸಿಂಘ್ವಿ, ರಮೇಶ ಓಸ್ತವಾಲ್‌ ಸೇರಿದಂತೆ ಅನೇಕರು ಹಾಜರಿದ್ದರು.

20 ಜನರಿಗೆ ಕೃತಕ ಕಾಲು ಜೋಡನೆ... : ಶಿಬಿರದಲ್ಲಿ 20 ಜನರಿಗೆ ಕೃತಕ ಕಾಲು ಜೋಡಿಸಲಾಯಿತು. ಗೋಪನಕೊಪ್ಪದ ಎಂಟು ವರ್ಷದ ಬಾಲಕಿ ಸರಸ್ವತಿಗೆ ಬಾಲ್ಯದಿಂದಲೇ ಒಂದು ಕಾಲು ಕಳೆದುಕೊಂಡಿದ್ದಳು. ಆಕೆಗೆ ಶಿಬಿರದಲ್ಲಿ ಕೃತಕ ಕಾಲು ಜೋಡಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ