ಆ್ಯಪ್ನಗರ

ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಗುರುವಂದನೆ

ಹುಬ್ಬಳ್ಳಿ : ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಇಲ್ಲಿನ ನ್ಯೂ ಇಂಗ್ಲೀಷ್‌ ಶಾಲೆಯಲ್ಲಿ 1985-86ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 32 ವರ್ಷಗಳ ನಂತರ ''ಗುರುವಂದನೆ'' ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

Vijaya Karnataka 16 Dec 2018, 5:00 am
ಹುಬ್ಬಳ್ಳಿ : ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಇಲ್ಲಿನ ನ್ಯೂ ಇಂಗ್ಲೀಷ್‌ ಶಾಲೆಯಲ್ಲಿ 1985-86ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 32 ವರ್ಷಗಳ ನಂತರ ''ಗುರುವಂದನೆ'' ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
Vijaya Karnataka Web guruvanandan at new english school
ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಗುರುವಂದನೆ


ನಗರದ ಗೋಕುಲ ರಸ್ತೆಯ ಗಿಣಿಮಾವ ಸಮುದಾಯ ಭವನದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಶಾಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 1985 -86 ರಲ್ಲಿ ನ್ಯೂ ಇಂಗ್ಲೀಷ್‌ ಶಾಲೆಯಲ್ಲಿ ಕಲಿತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಒಂದೆಡೆ ಸೇರಿಸುವ ಸಂಕಲ್ಪವನ್ನು ಸಭೆಯಲ್ಲಿ ಮಾಡಲಾಯಿತು. ''ಗುರು ವಂದನೆ'' ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಮಿತಿ ರಚನೆ ಮಾಡಿ ಉಸ್ತುವಾರಿ ವಹಿಸಲಾಯಿತು. ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಮಂಜುನಾಥ ನೀಲಣ್ಣನವರ (98807-52659), ಪ್ರೇಮಸಿಂಗ ರಜಪೂತ (99161-51832), ಕ್ಷೀರಸಾಗರ(98862-95733), ರಾಜೀವ ಗಿಣಿಮಾವ (98450-12149), ಮನೋಜ ದೇಸಾಯಿ (99724-12319), ಶ್ಯಾಮ ಜವಳಕರ (93435-34855) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ