ಆ್ಯಪ್ನಗರ

ಗೋಜನ್ಯ ಬಳಕೆಯಿಂದ ಆರೋಗ್ಯಯುತ ಜೀವನ

ಹುಬ್ಬಳ್ಳಿ : ಮಾಗೋ ಪ್ರಾಡಕ್ಟ್ ಕಂಪನಿ ಬೆಂಗಳೂರು ವತಿಯಿಂದ ಭಾರತೀಯ ಗೋವಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ‍್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಧಾರವಾಡ ಜಿಲ್ಲಾ ಕೋಶಾಧ್ಯಕ್ಷ ದಯಾನಂದ ರಾವ್‌ ತಿಳಿಸಿದರು.

Vijaya Karnataka 15 Dec 2018, 5:00 am
ಹುಬ್ಬಳ್ಳಿ : ಮಾಗೋ ಪ್ರಾಡಕ್ಟ್ ಕಂಪನಿ ಬೆಂಗಳೂರು ವತಿಯಿಂದ ಭಾರತೀಯ ಗೋವಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ‍್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಧಾರವಾಡ ಜಿಲ್ಲಾ ಕೋಶಾಧ್ಯಕ್ಷ ದಯಾನಂದ ರಾವ್‌ ತಿಳಿಸಿದರು.
Vijaya Karnataka Web healthy life with the use of goggles
ಗೋಜನ್ಯ ಬಳಕೆಯಿಂದ ಆರೋಗ್ಯಯುತ ಜೀವನ


ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಹಸುವಿನ ಹಾಲು, ಮೊಸರು, ಮೂತ್ರ, ಸಗಣಿಯಲ್ಲಿ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ಗುಣಗಳಿವೆ. ಅವುಗಳನ್ನು ಜನರ ಬಳಕೆ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದರು.

ಡಾ.ಡಿ.ಪಿ.ರಮೇಶ ಮಾತನಾಡಿ, ಪುರಾತನ ಆಯುರ್ವೇದ ವೈದ್ಯಕೀಯ ಶಾಸ್ತ್ರ ಗ್ರಂಥ ಪಂಚಲಹ್ಯದಲ್ಲಿ ಹಲವಾರು ರೋಗಗಳ ನಿವಾರಣೆ ಕುರಿತು ಮಾಹಿತಿ ಇದೆ. ಆಯುರ್ವೇದ ಚಿಕಿತ್ಸೆಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಸೋರಿಯಾಸಿಸ್‌, ಮೂಲವ್ಯಾದಿ, ಅಲರ್ಜಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಗೋಜನ್ಯ ವಸ್ತುಗಳಿಂದ ತಯಾರಿಸಿದ ಔಷಧದಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.

ಗೋ ಜನ್ಯವನ್ನು ಕೃಷಿಗೆ ಬೇಕಾಗುವ ಗೊಬ್ಬರ, ಕೀಟನಾಶಕ ಬಳಕೆ ಮಾಡಿ ಅತ್ಯುತ್ತಮ ಬೆಳೆ ಬೆಳೆಯಬಹುದು. ಸಾವಯವ ಕೃಷಿಯಲ್ಲ ಅತೀ ಹೆಚ್ಚು ರೈತರು ಗೋ ಜನ್ಯ ಬಳಕೆ ಮಾಡಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್‌ನಂತ ರೋಗ ವಾಸಿಯಾಗುವ ಬಗ್ಗೆ ಸಂಶೋಧನೆ ನಡೆಸುವ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ಗೋವಿನಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸಬೇಕು. ಡಿ.19ರಂದು ಬೆಳಗ್ಗೆ 11ಕ್ಕೆ ಮಿನಿವಿಧಾನಸೌಧದ ಎದುರಿನ ಶಿವಕೃಷ್ಣ ಮಂದಿರದಲ್ಲಿ ಉಚಿತ ಆರ್ಯುವೇದಿಕ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಬಸವರಾಜ ಅಂಗಡಿ, ದತ್ತಾತ್ರೇಯ ಭಟ್ಟ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ