ಆ್ಯಪ್ನಗರ

ಕೂಡಿ ಬಾಳಿದರೆ ಸ್ವರ್ಗ

ಧಾರವಾಡ : ಮನುಷ್ಯನ ಅಹಂಕಾರದ ಜೀವನ ನಿಷ್ೊ್ರಯೋಜಕ ಎಂದು ಖ್ಯಾತ ಆಶುಕವಿ ಸಿದ್ಧಪ್ಪ ಬಿದರಿ ಹೇಳಿದರು. ನಗರದ ಇನ್ಸಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಸಭಾಂಗಣದಲ್ಲಿ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ಆಯೋಜಿಸಿದ್ದ ಮಾಸಿಕ ಕೌಂಟುಬಿಕ ಸಭೆಯಲ್ಲಿ ಮಾತನಾಡಿದರು.

Vijaya Karnataka 20 Dec 2018, 5:00 am
ಧಾರವಾಡ : ಮನುಷ್ಯನ ಅಹಂಕಾರದ ಜೀವನ ನಿಷ್ೊ್ರಯೋಜಕ ಎಂದು ಖ್ಯಾತ ಆಶುಕವಿ ಸಿದ್ಧಪ್ಪ ಬಿದರಿ ಹೇಳಿದರು. ನಗರದ ಇನ್ಸಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಸಭಾಂಗಣದಲ್ಲಿ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ಆಯೋಜಿಸಿದ್ದ ಮಾಸಿಕ ಕೌಂಟುಬಿಕ ಸಭೆಯಲ್ಲಿ ಮಾತನಾಡಿದರು.
Vijaya Karnataka Web heaven is a paradise
ಕೂಡಿ ಬಾಳಿದರೆ ಸ್ವರ್ಗ


ಹಿಂದಿನ ಕಾಲದಲ್ಲಿ ಜನ ಸತ್ಯ ಧರ್ಮದಿಂದ ಬದುಕನ್ನು ಸಾಗಿಸುತ್ತಿದ್ದರು. ಇಡೀ ಊರೇ ಒಂದು ಕುಟುಂಬದಂತೆ ಕೂಡಿ ಬಾಳುತ್ತಿದ್ದರು. ಆದರೆ, ಈಗಿನ ಪೀಳಿಗೆಯವರು ಅವಿಭಕ್ತ ಕುಟುಂಬ ಆಯ್ಕೆ ಮಾಡಿಕೊಂಡಿದ್ದಾರೆ. ಕೂಡಿ ಬಾಳುವುದನ್ನು ಮರೆತು ಜಾತಿ ವೈಷಮ್ಯಗಳ ನೆಪದಿಂದ ದ್ವೇಷ ಸಾರುತ್ತಿದ್ದಾರೆ. ಇಲ್ಲಿ ಎಲ್ಲರೂ ನಮ್ಮವರೇ. ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖವಿದೆ ಎಂದರು.

ಮನುಷ್ಯ ಪ್ರಾಯ, ಅಧಿಕಾರ ಹಾಗೂ ಹಣವಿದ್ದಾಗ ಯಾರ ಮಾತನ್ನು ಕೇಳುವುದಿಲ್ಲ. ಈ ಜಗವೇ ಒಂದು ನಾಟಕವಿದ್ದಂತೆ. ಇಲ್ಲಿ ನಾವೆಲ್ಲ ಪಾತ್ರಧಾರಿಗಳು. ದೇವರೇ ಇದಕ್ಕೆಲ್ಲ ಸೂತ್ರಧಾರಿ. ದೇವರು ಕಷ್ಟ ಕೊಟ್ಟಾಗ ಮರುಗದೇ ಮುಂದೆ ಸುಖ ಕೊಟ್ಟೆಕೊಡುತ್ತಾನೆ ಎಂಬ ಆಶಾಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಜೀವನದೊಳಗೆ ಸ್ಪೂರ್ತಿ ಬರಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಸಿದ್ಧಪ್ಪ ಬಿದರಿ ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಉಪಾಧ್ಯಕ್ಷ ಗುರುನಾಥ ಇನಾಮದಾರ, ಕಾರ್ಯದರ್ಶಿ ಸುಧೀಂದ್ರ ಜಾಲಿಹಾಳ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ