ಆ್ಯಪ್ನಗರ

ಹಿಂದಿ ಭಾಷೆ ಭಾರತೀಯರ ಜೀವನಾಡಿ

ಧಾರವಾಡ: ನಗರದ ಹಳಿಯಾಳ ಮುಖ್ಯರಸ್ತೆಯ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಹಿಂದಿ ದಿನಾಚರಣೆ ಆಚರಿಸಲಾಯಿತು. ಹಿಂದಿ ಪ್ರಚಾರ ಸಭಾ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಸಂಜಯ ಎಲ್‌. ಮಾದಾರ ಮಾತನಾಡಿ, ಹಿಂದಿ ಭಾಷೆ ಹೃದಯಕ್ಕೆ ಮತ್ತು

Vijaya Karnataka 18 Sep 2019, 5:00 am
ಧಾರವಾಡ: ನಗರದ ಹಳಿಯಾಳ ಮುಖ್ಯರಸ್ತೆಯ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಹಿಂದಿ ದಿನಾಚರಣೆ ಆಚರಿಸಲಾಯಿತು.
Vijaya Karnataka Web hindi is the lifeblood of indians
ಹಿಂದಿ ಭಾಷೆ ಭಾರತೀಯರ ಜೀವನಾಡಿ

ಹಿಂದಿ ಪ್ರಚಾರ ಸಭಾ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಸಂಜಯ ಎಲ್‌. ಮಾದಾರ ಮಾತನಾಡಿ, ಹಿಂದಿ ಭಾಷೆ ಹೃದಯಕ್ಕೆ ಮತ್ತು ಮಿದುಳಿಗೆ ಸಂಬಂಧಿಸಿದ ಭಾಷೆಯಾಗಿದೆ. ಹಿಂದಿ ಭಾಷೆ ಭಾರತೀಯರ ಜೀವ ನಾಡಿ. ಈ ಭಾಷೆಯನ್ನು ಜನಸಾಮಾನ್ಯರು ಸಹಜವಾಗಿ ಅರ್ಥಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಆಸಕ್ತಿಯಿಂದ ಕಲಿಯಬೇಕು ಎಂದರು.

ಪ್ರಿನ್ಸಿಪಾಲ ಉಮೇಶ ಪುರೋಹಿತ ಮಾತನಾಡಿ, ದೇಶದಲ್ಲಿ ಅಖಂಡತೆ ಎತ್ತಿ ಹಿಡಿಯುವ ಕಾರ್ಯ ಹಿಂದಿ ಭಾಷೆ ನೇರವೇರಿಸುತ್ತಿದೆ. ಹಿಂದಿ ಸ್ವಾತಂತ್ರತ್ರ್ಯ ಚಳುವಳಿಯಲ್ಲಿರಾಷ್ಟ್ರೀಯ ಭಾವನೆ ಮೂಡಿಸುವಲ್ಲಿಪ್ರಮುಖ ಪಾತ್ರವಹಿಸಿತ್ತು.ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿಹಿಂದಿ ಕಲಿಯುತ್ತಿದ್ದಾರೆ ಎಂದು ತಿಳಿಸಿದರು.

ಹಿಂದಿ ದಿವಸದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನಿಬಂಧ, ಭಾಷಣ, ರಸಪ್ರಶ್ನೆ, ಹಾಗೂ ಕವಾಲಿ ಮತು ಶಾಯರಿ ಸ್ಪರ್ಧೆ ನಡೆಸಲಾಯಿತು. ವಿದ್ಯಾರ್ಥಿನಿ ಯುಕ್ತಾ ಜೋಶಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಉಪಪ್ರಿನ್ಸಿಪಾಲ ಮಹಾಲಿಂಗ ಕಮತಗಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಮಮತಾ ಕಳಿಹೊಳೆ ಸ್ವಾಗತಿಸಿ ನಿರೂಪಿಸಿದರು. ಜಿ.ಸುರಭಿ ಸುರೇಶ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ