ಆ್ಯಪ್ನಗರ

ಸ್ವಯಂ ಆರೋಗ್ಯ ರಕ್ಷಣೆಗೆ ಮನೆಯೇ ವೈದ್ಯಶಾಲೆ

ಧಾರವಾಡ : ಸ್ವಯಂ ಆರೋಗ್ಯ ರಕ್ಷ ಣೆಗೆ ಮನೆಯೇ ಮೊದಲ ವೈದ್ಯಶಾಲೆ ಆಗಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ವೈದ್ಯ ನೇರ್ಲಿಗೆ ಗುರುಸಿದ್ದಪ್ಪ ಹೇಳಿದರು.

Vijaya Karnataka 14 Jun 2019, 5:00 am
ಧಾರವಾಡ : ಸ್ವಯಂ ಆರೋಗ್ಯ ರಕ್ಷ ಣೆಗೆ ಮನೆಯೇ ಮೊದಲ ವೈದ್ಯಶಾಲೆ ಆಗಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ವೈದ್ಯ ನೇರ್ಲಿಗೆ ಗುರುಸಿದ್ದಪ್ಪ ಹೇಳಿದರು.
Vijaya Karnataka Web home is a home for self health care
ಸ್ವಯಂ ಆರೋಗ್ಯ ರಕ್ಷಣೆಗೆ ಮನೆಯೇ ವೈದ್ಯಶಾಲೆ


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ಜಿಲ್ಲಾ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಪ್ರಾಥಮಿಕ ಹಂತದ ಆರೋಗ್ಯದಲ್ಲಿ ಬರುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲಿರುವ ಸಾಂಬಾರ ಪದಾರ್ಥಗಳು ಮತ್ತು ಸುತ್ತಮುತ್ತಲಿನ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಸ್ವಯಂ ಆರೋಗ್ಯ ರಕ್ಷ ಣೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಜಿಲ್ಲಾ ವೈದ್ಯ ಪರಿಷತ್‌ ವತಿಯಿಂದ ಹಮ್ಮಿಕೊಳ್ಳಬೇಕು ಎಂದರು.

ಉದ್ಘಾಟಿಸಿ ಮಾತನಾಡಿದ ಕ್ರಿಯಾಶೀಲ ಗೆಳೆಯರ ಬಳಗದ ಮುಕುಂದ ಮೈಗೂರ್‌, ಪಾರಂಪರಿಕ ವೈದ್ಯರ ಜ್ಞಾನದ ದಾಖಲೀಕರಣದ ಅವಶ್ಯಕತೆ ಇದ್ದು, ಪ್ರತಿಯೊಂದು ಜಿಲ್ಲೆಯಲ್ಲಿರುವ ಪಾರಂಪರಿಕ ವೈದ್ಯರ ಜ್ಞಾನದ ದಾಖಲೀಕರಣ ವೈದ್ಯ ಪರಿಷತ್‌ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಪರಿಸರವಾದಿ ಮುಂಜಿ ಮಾತನಾಡಿ, ಪ್ರಕೃತಿಯಲ್ಲಿರುವ ಸಸಿ ಉಪಯೋಗಿಸುವ ಬದಲು ಗಿಡಮರ ಬಳಸಿ ಉಪಯೋಗಿಸಿ ಪ್ರಕೃತಿ ಸಂಪತ್ತನ್ನು ಸಂರಕ್ಷಿಸಬೇಕು ಎಂದರು.

ವೈದ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಶಾಂತವೀರಪ್ಪ, ಬೆಳಗಾವಿ ಜಿಲ್ಲಾ ಸಂಚಾಲಕ ದೇವೇಂದ್ರ ಕಾಂಬ್ಳೆ, ಮೇಲಗಿರಿಗೌಡ, ಹಿರಿಯ ವೈದ್ಯರಾದ ಸಂಗಯ್ಯಸ್ವಾಮಿ ಇತರರು ಇದ್ದರು. ವೈದ್ಯ ಶಶಿಧರ ಹೆಗಡೆ ಸ್ವಾಗತಿಸಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ