ಆ್ಯಪ್ನಗರ

ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟಿ: ವಿದ್ಯಾ ನಾಡಗೇರ

ಧಾರವಾಡ : ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟುವುದರ ಮೂಲಕ ಪ್ರತಿಯೊಬ್ಬರು ಸರಕಾರದ ಭಾಗವಾಗಬೇಕೆಂದು ಗ್ರಾಮೀಣ ಕ್ಷೇತ್ರಶಿಕ್ಷ ಣಾಧಿಕಾರಿ ವಿದ್ಯಾ ನಾಡಗೇರ ಹೇಳಿದರು.

Vijaya Karnataka 28 Dec 2018, 5:00 am
ಧಾರವಾಡ : ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟುವುದರ ಮೂಲಕ ಪ್ರತಿಯೊಬ್ಬರು ಸರಕಾರದ ಭಾಗವಾಗಬೇಕೆಂದು ಗ್ರಾಮೀಣ ಕ್ಷೇತ್ರಶಿಕ್ಷ ಣಾಧಿಕಾರಿ ವಿದ್ಯಾ ನಾಡಗೇರ ಹೇಳಿದರು.
Vijaya Karnataka Web DRW-27RANGA04


ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘ ಮತ್ತು ಎಕ್ಸೈಡ್‌ ಲೈಫ್‌ ಇನ್ಶೂರೆನ್ಸ್‌ ಧಾರವಾಡ ಆಶ್ರಯದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷ ಕರಿಗಾಗಿ ನಗರದ ತಾಲೂಕು ಶಿಕ್ಷ ಕರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಆದಾಯ ತೆರಿಗೆ ಮಾಹಿತಿ ಕಾರಾರ‍ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

'ಸಂಸಾರವೆಂಬುದೊಂದು ಗಾಳಿಯ ಸೊಡರು, ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ, ಇದ ನೆಚ್ಚಿ ಕೆಡಬೇಡ' ಎಂಬ ಶರಣರ ವಾಣಿಯಂತೆ ನಾವು ಇಂದು ಜೀವಿಸಬೇಕಾಗಿದೆ. ಈ ವರ್ಷದಿಂದ ಕರ್ನಾಟಕ ಸರಕಾರ ಸ್ವಲ್ಪ ಬದಲಾವಣೆಯೊಂದಿಗೆ ಆದಾಯ ತೆರಿಗೆ ಸಂಗ್ರಹಿಸುತ್ತಿದೆ. ಇದರ ಮಾಹಿತಿ ಪ್ರತಿಯೊಬ್ಬರಿಗೂ ಇರಬೇಕಾಗಿರುವುದು ಅವಶ್ಯ ಎಂದರು.

ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಆರ್‌.ಎಸ್‌. ಮುಳ್ಳೂರ ಮಾತನಾಡಿ, ಇಂತಹ ಕಾರ್ಯಾಗಾರಗಳನ್ನು ಇಲಾಖೆ ಬದಲಾಗಿ ಶಿಕ್ಷ ಕರ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಚಾರ್ಟೆಡ್‌ ಅಕೌಂಟೆಟ್‌ ಸುಭಾಸ ಪಾಟೀಲ ನೂತನ ಆದಾಯ ತೆರಿಗೆ ಬಗ್ಗೆ ಉಪನ್ಯಾಸ ನೀಡಿದರು.

ಎಕ್ಸೈಡ್‌ ಲೈಫ್‌ ಇನ್ಸುರೆನ್ಸ್‌ ನ ಏಜನ್ಸಿ ಲೀಡರ್‌ ಅಜಿತಸಿಂಗ್‌ ರಜಪೂತ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ಗುರು ಪೋಳ, ಉಪಾಧ್ಯಕ್ಷ ಗುರು ತಿಗಡಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಘಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಕಿತ್ತೂರ, ಧಾರವಾಡ ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ, ಸಮನ್ವಯಧಿಕಾರಿ ಎಸ್‌.ಟಿ.ಅರಸನಾಳ, ಎಸ್‌ಸಿ, ಎಸ್‌ಟಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹೇಮಂತ ಕುಂದರಗಿ, ಮಾರುತಿ ಬಂಡಿವಡ್ಡರ, ಚಂದ್ರಶೇಖರ ತಿಗಡಿ, ರಾಜು ಮಾಳವಾಡ, ಆರ್‌.ಎನ್‌. ಬೆಸ್ತವಾಡಕರ, ಮಹಾದೇವಿ ದೊಡಮನಿ, ಬಸವರಾಜ ದೇಸೂರು, ಸುಮಿತಾ ಹಿರೇಮಠ, ಮಂಜುನಾಥ ಸತ್ತೂರ, ಜಿ.ಎಂ. ಗುಂಜಾಳ, ಯಲ್ಲಪ್ಪ ಶೆರೆವಾಡ, ಗಂಗವ್ವ ಕೊಟಿಗೌಡರ, ಶಾರದಾ ಶಿರಕೊಳ, ಸಂಜೀವ ಅಣ್ಣಿಗೇರಿ, ವಸಂತ ಭಜಂತ್ರಿ, ಶಾರದಾ ಜಯರಾಮನವರ ಭಾಗವಹಿಸಿದ್ದರು.

ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕು ಅಧ್ಯಕ್ಷ ಕಾಶಪ್ಪ ದೊಡವಾಡ ಅಧ್ಯಕ್ಷ ತೆ ವಹಿಸಿದ್ದರು. ರಮೇಶ ಮಂಗೊಡಿ ನಿರೂಪಿಸಿದರು. ನಾರಾಯಣ ಭಜಂತ್ರಿ ಸ್ವಾಗತಿಸಿದರು. ಶಿದ್ದಪ್ಪ ಶಿವಶಿಂಪಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ